ಗದಗ:ಗದಗ ತಾಲ್ಲೂಕಿನ ನಾರಾಯಣಪುರ ಗ್ರಾಮದ ಬಳಿ ಶನಿವಾರ ಸಂಜೆ ಅಪಾಯಕಾರಿ ಘಟನೆ ಸಂಭವಿಸಿದೆ. ಡಿ.ಆರ್ ಪೊಲೀಸ್ ಸಿಬ್ಬಂದಿ ಈರಣ್ಣ ಅವರ ಕುಟುಂಬ ಪ್ರಯಾಣಿಸುತ್ತಿದ್ದ ಕಾರಿಗೆ ಏಕಾಏಕಿ ಬೆಂಕಿ ಹೊತ್ತಿಕೊಂಡಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯವಾಗದೆ ಕುಟುಂಬದ ಎಲ್ಲಾ ಸದಸ್ಯರು ಸುರಕ್ಷಿತವಾಗಿ ಕಾರಿನಿಂದ ಇಳಿದುಬಂದಿದ್ದಾರೆ.
ಘಟನೆಯ ವಿವರಗಳ ಪ್ರಕಾರ, ಈರಣ್ಣ ಅವರ ಜೊತೆ ಪತ್ನಿ ಮತ್ತು ಇಬ್ಬರು ಮಕ್ಕಳು ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ಹಠಾತ್ತಾಗಿ ಕಾರಿನ ಮುಂಭಾಗದಿಂದ ಹೊಗೆಯು ಹೊರಬಂದು ತಕ್ಷಣವೇ ಭಾರೀ ಬೆಂಕಿಗೆ ತುತ್ತಾಯಿತು. ವಾಹನದಲ್ಲಿ ಬೆಂಕಿ ಕಾಣುತ್ತಿದ್ದಂತೆಯೇ ಈರಣ್ಣ ತಕ್ಷಣ ತಾಳ್ಮೆಯುಳ್ಳ ಕ್ರಮ ಕೈಗೊಂಡು ಪತ್ನಿ ಮತ್ತು ಮಕ್ಕಳನ್ನು ಸುರಕ್ಷಿತವಾಗಿ ಕಾರಿನಿಂದ ಕೆಳಗಿಳಿಸಿದರು.

ಮೇಲಿನ ಪೋಸ್ಟ ಟಚ್ ಮಾಡಿದಲ್ಲಿ ಸಂಪೂರ್ಣ ಮಾಹಿತಿ ಒದಗುತ್ತದೆ.
ಸ್ಥಳೀಯರು ಈ ದೃಶ್ಯವನ್ನು ಕಂಡ ತಕ್ಷಣ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ ತಕ್ಷಣ ಗದಗದಿಂದ ದೌಡಾಯಿಸಿದ ಅಗ್ನಿಶಾಮಕ ಸಿಬ್ಬಂದಿ ತಕ್ಷಣವೇ ಬೆಂಕಿ ನಂದಿಸುವ ಕಾರ್ಯಕ್ಕೆ ಕೈಹಾಕಿದರು. ಹೆಚ್ಚಿನ ಹಾನಿ ತಡೆಯುವಲ್ಲಿ ಅವರು ಯಶಸ್ವಿಯಾಗಿದರೂ, ಕಾರು ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿದೆ.

ಈ ಘಟನೆಯ ಕುರಿತು ಗದಗ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಜರುಗಿದೆ. ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಈ ಘಟನೆ ಸಂಭವಿಸಿರಬಹುದೆಂದು ಪ್ರಾಥಮಿಕ ತನಿಖೆಯಿಂದ ಅಂದಾಜಿಸಲಾಗಿದೆ.
ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ತಕ್ಷಣದ ಸಮಯೋಚಿತ ಕ್ರಿಯೆಯಿಂದ ಕುಟುಂಬದ ಸದಸ್ಯರು ಪಾರಾಗಿದ್ದಾರೆ.

