ಪುತ್ತೂರು:ಶಾಲಾ ಬಸ್ಸಿಗೆ ಢಿಕ್ಕಿಯಾಗುವದನ್ನ ತಪ್ಪಿಸಲು ಹೋಗಿ, ರಸ್ತೆ ಬದಿ ಇದ್ದ ಮನೆಗೆ ನುಗ್ಗಿರೋ ಘಟನೆ, ಪುತ್ತೂರು ಸಮೀಪದ ಕಾವು ಬಳಿಯ ಅಮ್ಮಿನಡ್ಕ ಎಂಬಲ್ಲಿ ನಡೆದಿದೆ.
ಡಿಕ್ಕಿಯಾಗಿರುವ ಬಸ್ ಮದುವೆಗೆ ಪ್ರಯಾಣಿಕರನ್ನು ಕೊಂಡೊಯ್ಯುತ್ತಿತ್ತು. ಅಪಘಾತದಲ್ಲಿ ಮನೆ ಸಂಪೂರ್ಣ ಜಖಂಗೊಂಡಿದ್ದು, ಮನೆಯಲ್ಲಿದ್ದವರಿಗೆ ಹಾಗೂ ಪ್ರಯಾಣಿಕರಿಗೆ ಅದೃಷ್ಟವಶಾತ್ ಯಾವುದೇ ಆಪಾಯ ಸಂಭವಿಸಿಲ್ಲ ಎನ್ನಲಾಗಿದೆ.
ಡಿಕ್ಕಿಯಾದ ಖಾಸಗಿ ಬಸ್ಸು ಪುತ್ತೂರಿನಿಂದ ಸುಳ್ಯದ ಕಡೆಗೆ ಹೋಗುತಿತ್ತು.ಇತ್ತ ಖಾಸಗಿ ಶಾಲೆಗೆ ಸೇರಿದ ಬಸ್ಸು,ಸುಳ್ಯದಿಂದ ಪರ್ಲಂಪಾಡಿಗೆ ಮಕ್ಕಳನ್ನು ಕರೆದುಕೊಂಡು ಬರಲು ತೆರಳುತಿತ್ತು.
ಅಪಘಾತದಲ್ಲಿ ಯಾವುದೇ ಸಾವು ನೋವು ಸಂಭವಿಸಿಲ್ಲ. ಬಸ್ಸಿನಲ್ಲಿದ್ದವರಿಗೆ ಸಣ್ಣಪುಟ್ಟ ಗಾಯಗಳಾಗಿವೆ.