ಗದಗ: ಟಿಪ್ಪರ್ ಹರಿದು ಆರು ವರ್ಷದ ಬಾಲಕ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಗದಗ ತಾಲೂಕಿನ ಹರ್ತಿ ಗ್ರಾಮದಲ್ಲಿ ನಡೆದಿದೆ.
ಪ್ರೀತಮ್ ಹರಿಜನ (6) ವರ್ಷದ ಬಾಲಕ ಅಪಘಾತದಲ್ಲಿ ಕೊನೆಯುಸಿರುಳೆದಿದ್ದಾನೆ. ಹರ್ತಿ ಗ್ರಾಮದ ಬಸ್ ನಿಲ್ದಾಣದ ಮುಂದೆ ಈ ದುರ್ಘಟನೆ ನಡೆದಿದ್ದು, ಸಾವನ್ನಪ್ಪಿರೋ ಬಾಲಕ ಧಾರವಾಡ ಜಿಲ್ಲೆ ಕಲಘಟಗಿ ತಾಲೂಕಿನ ಹಿಂಡಸಗೇರಿ ಗ್ರಾಮದವನು ಎನ್ನಲಾಗಿದೆ.
ಬಾಲಕ ಪ್ರೀತಮ್ ಹಾಗೂ ತಾಯಿ ಗೀತಾ ಗದಗ ಜಿಲ್ಲೆಯ ಯತ್ನಳ್ಳಿ ಗ್ರಾಮಕ್ಕೆ ಆಗಮಿಸಿದ್ದರು ಎನ್ನಲಾಗಿದೆ. ಬಸ್ ನಿಲ್ದಾಣದ ಬಳಿ ವೇಗವಾಗಿ ಬಂದ್ ಟಿಪ್ಪರ್ ಬಾಲಕನಿಗೆ ಡಿಕ್ಕಿಯಾಗಿ ಉಸಿರು ಚೆಲ್ಲಿದ್ದಾನೆ.

ಇದರಿಂದ ರೊಚ್ಚಿಗೆದ್ದ ಗ್ರಾಮಸ್ಥರು ಟೈಯರ್ ಗೆ ಬೆಂಕಿ ಹಚ್ಚಿ ರಸ್ತೆ ತಡೆದು ಪ್ರತಿಭಟನೆ ನಡೆಸಿದ್ದಾರೆ. ಗದಗ-ಲಕ್ಷ್ಮೇಶ್ವರ ಹೆದ್ದಾರಿ ಬಂದ್ ಮಾಡಿ ಆರ್ ಟಿ ಓ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರತಿಭಟನೆಯಿಂದ ವಾಹನಗಳು ಸಾಲುಗಟ್ಟಿ ನಿಂತಿದ್ದು, ಪ್ರಯಾಣಿಕರು ಪರದಾಟ ನಡೆಸುವಂತಾಯಿತು. ಇತ್ತ ಬಾಲಕನನ್ನು ಕಳೆದುಕೊಂಡ ಪೋಷಕರು ಕಣ್ಣೀರು ಹಾಕಿದ್ರು. ಗದಗ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ಜರುಗಿದೆ.