ಗದಗ: ಹುಲಕೋಟಿ ಸಹಕಾರಿ ಶಿಕ್ಷಣ ಸಂಸ್ಥೆ ಕಾನೂನು ಮಹಾವಿದ್ಯಾಲಯದಲ್ಲಿ ಕಾಲೇಜು ಒಕ್ಕೂಟ ಜಮಖಾನ ಮತ್ತು ಎನ್.ಎಸ್.ಎಸ್. ಚಟುವಟಿಕೆಗಳ ಉದ್ಘಾಟನಾ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು.ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಲಾಯಿತು.ಪ್ರಾಚಾಯರಾದ ಶ್ರೀಮತಿ ಪಲ್ಲವಿ ಎಸ್. ಬುಯ್ಯರ ಅವರು ಪ್ರಾಸ್ತಾವಿಕ ನುಡಿಗಳನ್ನಾಡಿದರು.
ಉದ್ಘಾಟಕರಾಗಿ ಆಗಮಿಸಿದ ಪ್ರೊ. ಡಾ. ಸುರೇಶ ನಾಡಗೌಡರ ಮಾತನಾಡಿ ತಮ್ಮ ವಿದ್ಯಾರ್ಥಿ ಜೀವನದ ಕುರಿತು ವಿದ್ಯಾರ್ಥಿಗಳೊಂದಿಗೆ ಹಂಚಿಕೊAಡು, ಕಾನೂನಿನಲ್ಲಿ ಇರುವ ವಿವಿಧ ವಿಭಾಗಗಳು ಮತ್ತು ಅವಕಾಶಗಳ ಕುರಿತು ಅರಿವು ಮೂಡಿಸಿದರು.
ಯೂನಿವರ್ಸಿಟಿ ಬ್ಲೂ ಆಗಿ ಆಯ್ಕೆಯಾಗಿದ ಪ್ರಥಮ ವರ್ಷದ ವಿದ್ಯಾರ್ಥಿ ಪ್ರಸನ್ನಕುಮಾರವರಿಗೆ ಪ್ರೋತ್ಸಾಹ ಧನ ನೀಡಲಾಯಿತು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಶ್ರೀ ಎಸ್. ಕೆ. ಪಾಟೀಲ ವಕೀಲರು ಚೇರಮನ್ನರು ಹೆಚ್.ಸಿ.ಇ.ಎಸ್. ಕಾನೂನು ಮಹಾವಿದ್ಯಾಲಯರವರು ಮಾತನಾಡಿ ಎಲ್ಲಾ ೫ ವರ್ಷದ ವರ್ಗ ಪ್ರತಿನಿಧಿಗಳಿಗೆ ಸಲಹೆ ನೀಡಿದರು. ನೀವು ಕೇವಲ ಕಲಿಕೆ ಮತ್ತು ಹೊಸತನದಲ್ಲಿ ಗಮನ ವಹಿಸಿ ಎಂದು ತಿಳಿಸಿದರು.