ಜಾಗ್ವಾರ್ ತನ್ನ ಮುಂದಿನ ವರ್ಷ ಸಂಪೂರ್ಣ ಎಲೆಕ್ಟ್ರಿಕ್ ಸೆಡಾನ್ ನೊಂದಿಗೆ ಎಲೆಕ್ಟ್ರಿಕ್ ವಾಹನ (ಇವಿ) ಗಳ ತಯಾರಿಕಾ ಕಂಪನಿಗಳಲ್ಲಿ ಸೇರಿಕೊಳ್ಳಲಿದೆ. ಇನ್ನೂ ಹೆಸರಿಡದ ಐಷಾರಾಮಿ ಎಲೆಕ್ಟ್ರಿಕ್ ಸೆಡಾನ್ ಈಗ ಯುರೋಪ್ ನಲ್ಲಿ ತನ್ನ ರಸ್ತೆ ಪರೀಕ್ಷೆಯನ್ನು ಪ್ರಾರಂಬಿಸಿದೆ. ಇದರ ಕಾರಿನ ಪ್ರಿವೀವ್ 2 ಡಿಸೆಂಬರ್ 2024 ರಂದು ಮಿಯಾಮಿ ಆರ್ಟ್ ವೀಕ್ನಲ್ಲಿ ಡಿಸೈನ್ ವಿಷನ್ ಕಾನ್ಸೆಪ್ಟ್ನಲ್ಲಿ ಅನಾವರಣಗೊಳ್ಳವ ನಿರೀಕ್ಷ ಇದೆ.
ಅದೇರೀತಿ, ಮುಂಬರುವ ಐಷಾರಾಮಿ ಬ್ಯಾಟರಿ ಚಾಲಿತ ಸಲೂನ್ ನ ಪರೀಕ್ಷೆಯನ್ನು ಯುನೈಟೆಡ್ ಕಿಂಗ್ ಡಮ್ ನಲ್ಲಿ ಪ್ರಾರಂಭಿಸಲಾಗಿದೆ ಎಂದು ಕಂಪನಿ ಬಹಿರಂಗಪಡಿಸಿದೆ. ಎಲೆಕ್ಟ್ರಿಕ್ 4 ಡೋರ್ ಗ್ರ್ಯಾಂಡ್ ಟೂರರ್ ಈಗಾಗಲೇ ಸಾವಿರಾರು ಮೈಲುಗಳ ವರ್ಚುವಲ್ ಮತ್ತು ಭೌತಿಕ ಪರೀಕ್ಷೆಯನ್ನು ಪೂರ್ಣಗೊಳಿಸಿದೆ. ಈ ಮಾದರಿಯ ಮೂಲಮಾದರಿಗಳನ್ನು ಶೀಘ್ರದಲ್ಲೇ ವಿಶ್ವದಾದ್ಯಂತ ಪರೀಕ್ಷಾ ತಾಣಗಳು ಮತ್ತು ಸಾರ್ವಜನಿಕ ರಸ್ತೆಗಳಿಗೆ .ಬಿಡುಗಡೆ ಮಾಡಲಿದೆ.
ಜಾಗ್ವಾರ್ ನ ಹೆಸರಿಸದ ಈ ಕಾರು ಆಟೋಮೊಬೈಲ್ ಪರಂಪರೆಯಲ್ಲಿ ಹೊಸ ಅಧ್ಯಾಯವನ್ನು ಬರೆಯುತ್ತದೆ ಏಕೆಂದರೆ ಇದು ಜೆಇಎ (ಜಾಗ್ವಾರ್ ಎಲೆಕ್ಟ್ರಿಕ್ ಆರ್ಕಿಟೆಕ್ಚರ್) ಎಂಬ ವಿಶೇಷ ಎಲೆಕ್ಟ್ರಿಕ್ ವಾಸ್ತುಶಿಲ್ಪವನ್ನು ಆಧರಿಸಿದೆ ಮತ್ತು ಯುಕೆಯ ಸೋಲಿಹಲ್ ನಲ್ಲಿ ನಿರ್ಮಿಸಲಾಗುತ್ತಿದೆ. ಸದ್ಯಕ್ಕೆ ಯಾವುದೇ ತಾಂತ್ರಿಕ ವಿವರಗಳು ಲಭ್ಯವಿಲ್ಲದಿದ್ದರೂ, ಟೆಸ್ಟ್ ಡ್ರೈ ನೆಡೆಸುತ್ತಿರುವ ಕಾರಿನ ಕೆಲ ಚಿತ್ರಗಳು ಕ್ಯಾಮರಾ ಕಣ್ಣಿಗೆ ಸೆರೆಯಾಗಿವೆ.