ದಕ್ಷಿಣ ಭಾರತದ ಕುಂಭಮೇಳವೆಂದೇ ಖ್ಯಾತಿ ಪಡೆದಿರೋ ಕೊಪ್ಪಳ ಗವಿಸಿದ್ದೇಶ್ವರ ಮಠದ ಜಾತ್ರೆ ಮುಂಬರುವ ಜನವರಿ 15, 2025ರಂದು ಜರುಗಲಿದೆ. ಪ್ರತಿ ವರ್ಷ ಜಾತ್ರೆಗೆ ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿರುವ ಅತಿಥಿಗಳನ್ನ ಆಮಂತ್ರಿಸಿ ಜಾತ್ರೆಗೆ ಚಾಲನೆ ನೀಡುವ ಸಂಪ್ರದಾಯವನ್ನ ಅಭಿನವ ಗವಿಸಿದ್ದೇಶ್ವರ ಶ್ರೀಗಳು ಹಾಕಿಕೊಂಡು ಬಂದಿದ್ದಾರೆ. ಅದೇ ರೀತಿ 2025 ನೇ ವರ್ಷದ ಜಾತ್ರೆಗೆ ನಟ ಅಮಿತಾಭ್ ಬಚ್ಚನ್ ಅವರಿಗೆ ಆಹ್ವಾನ ನೀಡಲಾಗಿದೆ. ಈ ಸಂಬಂಧ ಕೊಪ್ಪಳದ ಖ್ಯಾತ ಉದ್ಯಮಿ ಅಶ್ವಿನ್ ಜಾಂಗಡಾ ಒಳಗೊಂಡಂತೆ ಮಠದ ಆಪ್ತ ವಲಯದ ಸದಸ್ಯರು ಇತ್ತೀಚೆಗೆ ಅಮಿತಾಭ್ ಬಚ್ಚನ್ ಅವರನ್ನು ಭೇಟಿಯಾಗಿದ್ದರು. ಖುಷಿಯಿಂದ ಆಮಂತ್ರಣ ಸ್ವೀಕರಿಸಿದ ಅಮಿತಾಭ್ ಸಕಾರಾತ್ಮಕವಾಗಿ ಪ್ರತಿಕ್ರಿಯೆ ನೀಡಿದ್ದಾರೆ ಎನ್ನಲಾಗಿದೆ. ಆದರೆ ಜಾತ್ರೆಯ ಕುರಿತು ಸಮಗ್ರವಾಗಿ ಅಧ್ಯಯನ ಮಾಡಿ, ಭದ್ರತೆಯ ಕುರಿತು ಪರಿಶೀಲನೆ ಬಳಿಕವೇ ಜಾತ್ರೆಗೆ ಆಗಮಿಸುವ ಕುರಿತು ಅಂತಿಮ ನಿರ್ಧಾರವಾಗಲಿದೆ ಎಂದು ಅಮಿತಾಭ್ ಬಚ್ಚನ್ ಅವರ ತಂಡ ತಿಳಿಸಿದೆಯಂತೆ.
ಕೊಪ್ಪಳ ಗವಿಸಿದ್ದೇಶ್ವರ ಮಠದ ಜಾತ್ರೆಗೆ ಬಿಗ್ ಬಿ ಅಮಿತಾಬಚ್ಚನ್? ಭದ್ರತೆ ಖಾತರಿ ಬಳಿಕ ನಿರ್ಧಾರ!
