Sunday, April 20, 2025
Homeರಾಜ್ಯಗ್ಯಾರಂಟಿಗಳ ಕುರಿತು ಸುಳ್ಳು ಜಾಹೀರಾತು: ಬಿಜೆಪಿ ವಿರುದ್ಧ ಕೇಸ್

ಗ್ಯಾರಂಟಿಗಳ ಕುರಿತು ಸುಳ್ಳು ಜಾಹೀರಾತು: ಬಿಜೆಪಿ ವಿರುದ್ಧ ಕೇಸ್

ಸದ್ಯ ಕರ್ನಾಟಕದಲ್ಲಿನ ಪಂಚ ಗ್ಯಾರಂಟಿಗಳು ಕರ್ನಾಟಕವಷ್ಟೇ ಅಲ್ಲದೇ, ಅನ್ಯ ರಾಜ್ಯದ ಆಡಳಿತ,ವಿರೋಧ ಹಾಗೂ ಇತರೆ ಪಕ್ಷಗಳ ನಿದ್ದೆಗೆಡಿಸಿವೆ. ಮೊದಲೆಲ್ಲ ವಿರೋಧಿಸುತ್ತಾ‌ ಬಂದಿದ್ದ, ಬಿಜೆಪಿ ಇದೀಗ ತಾನೂ ಸಹ ಗ್ಯಾರಂಟಿಗಳ ಬೆನ್ನು ಬಿದ್ದಿದೆ.

ಇದರ ಬೆನ್ನಲ್ಲೆ, ಪಂಚ ಗ್ಯಾರಂಟಿಗಳ ಕುರಿತು ಸುಳ್ಳು ಜಾಹೀರಾತು ನೀಡಿದ್ದ ಆರೋಪದಡಿ ಮಹಾರಾಷ್ಟ್ರ ಬಿಜೆಪಿ ಘಟಕದ ವಿರುದ್ಧ ಕರ್ನಾಟಕ ಸರ್ಕಾರ ಪ್ರಕರಣ ದಾಖಲಿಸಲು ನಿರ್ಧರಿಸಿದೆ.

ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಎಕ್ಸ್‌ ಖಾತೆಯಲ್ಲಿ ಮಾಹಿತಿ ನೀಡಿದ್ದು, “ಕರ್ನಾಟಕ ಸರ್ಕಾರ ರಾಜ್ಯದಲ್ಲಿ ಗ್ಯಾರಂಟಿಗಳನ್ನು ಜಾರಿ ಮಾಡದೆ ವಂಚಿಸಿದೆ ಎನ್ನುವ ಸುಳ್ಳು ಜಾಹೀರಾತನ್ನು ಪುಟಗಟ್ಟಲೆ ನೀಡಿದ್ದ ಮಹಾರಾಷ್ಟ್ರದ ಬಿಜೆಪಿ ವಿರುದ್ಧ ಕರ್ನಾಟಕ ಸರ್ಕಾರ ದೂರು ದಾಖಲಿಸಿ, ಸರಿಯಾದ ಪಾಠ ಕಲಿಸಲಿದೆ” ಎಂದು ಹೇಳಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments