ಪೋರ್ಟ್ ಬ್ಲೇರ್: ಮಲೇಷ್ಯಾದ ಕೌಲಾಲಂಪುರದಿಂದ ಹೊರಟ ಏರ್ ಏಷ್ಯಾದ ಮೊದಲ ಅಂತರರಾಷ್ಟ್ರೀಯ ವಿಮಾನ ಎಕೆ -55 ಶನಿವಾರ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ಶ್ರೀ ವಿಜಯ ಪುರಂ (ಪೋರ್ಟ್ ಬ್ಲೇರ್) ನ ವೀರ್ ಸಾವರ್ಕರ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದಿದೆ.
ಈ ವಿಮಾನ ನಿಲ್ದಾಣಕ್ಕೆ ಅಂತರರಾಷ್ಟ್ರೀಯ ಸ್ಥಾನಮಾನ ದೊರಕಿ 22 ವರ್ಷಗಳ ಸುದೀರ್ಘ ಕಾಯುವಿಕೆಯ ನಂತರ ಮೊದಲ ಅಂತರ ರಾಷ್ಟ್ರೀಯ ವಿಮಾನ ಬಂದು ಇಳಿದಿದೆ. ಈ ವಿಮಾನಯಾನ ಈ ಪ್ರದೇಶದ ಪ್ರವಾಸೋದ್ಯಮ ಕ್ಷೇತ್ರಕ್ಕೆ ಒಂದು ಮೈಲಿಗಲ್ಲಾಗಿದೆ.
ಅಂಡಮಾನ್ ಅಸೋಸಿಯೇಷನ್ ಆಫ್ ಟೂರ್ ಆಪರೇಟರ್ಸ್ ಅಧ್ಯಕ್ಷ ಮೋಹನ್ ವಿನೋದ್ ಈ ಬೆಳವಣಿಗೆಯ ಬಗ್ಗೆ ಸಂತೋಷ ವ್ಯಕ್ತಪಡಿಸಿದ್ದಾರೆ. ಬಹುನಿರೀಕ್ಷಿತ ಅಂತರರಾಷ್ಟ್ರೀಯ ವಿಮಾನಯಾನದಿಂದ ಈ ದ್ವೀಪಗಳ ಪ್ರವಾಸೋದ್ಯಮಕ್ಕೆ ಹೊಸ ಆಯಾಮ ದೊರಕಿದಂತಾಗಿದೆ ಎಂದು ಅವರು ಹೇಳಿದ್ದಾರೆ ಮತ್ತು ಬಹುದಿನಗಳ ಈ ಕನಸನ್ನು ನನಸಾಗಿಸುವಲ್ಲಿ ಸರ್ಕಾರ ಮತ್ತು ಏರ್ ಏಷ್ಯಾದ ಕೊಡಿಗೆಗಳನ್ನು ಶ್ಲಾಗಿಸಿದ್ದಾರೆ.
ಏರ್ ಏಷ್ಯಾ ಮಲೇಷ್ಯಾದ ವ್ಯವಸ್ಥಾಪಕ ನಿರ್ದೇಶಕ ಕ್ಯಾಪ್ಟನ್ ಫರೇಹ್ ಮಜ್ಪುತ್ರಾ ಮಾತನಾಡಿ, “ನಾನು ತುಂಬಾ ಉತ್ಸುಕನಾಗಿದ್ದೇನೆ. ಇಂದು ಮೊದಲ ವಿಮಾನ ಅಂಡಮಾನ್ ಮತ್ತು ನಿಕೋಬಾರ್ ತಲುಪಿದೆ. ಈ ವಿಮಾನ ಸೌಕರ್ಯದಿಂದ ಈ ದ್ವೀಪವು ವಿಶ್ವವ್ಯಾಪಿ ಪ್ರವಾಸಿಗರನ್ನು ಆಕರ್ಶಿಸಲಿದೆ ಎಂದು ತಿಳಿಸಿದ್ದಾರೆ.
ಭಾರತದ ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ಪೋರ್ಟ್ ಬ್ಲೇರ್ನ ಸೆಲ್ಯುಲಾರ್ ಜೈಲಿನಲ್ಲಿ ಸೆರೆವಾಸ ಅನುಭವಿಸಿದ ಸ್ವಾತಂತ್ರ್ಯ ಹೋರಾಟಗಾರ ವಿನಾಯಕ್ ದಾಮೋದರ್ ಸಾವರ್ಕರ್ ಅವರ ಗೌರವಾರ್ಥವಾಗಿ 2002 ರಲ್ಲಿ ವೀರ್ ಸಾವರ್ಕರ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಮೇಲ್ದರ್ಜೆಗೆ ಏರಿಸಲಾಯಿತು. ಇದರ ಅತ್ಯಾಧುನಿಕ ಟರ್ಮಿನಲ್ ಅನ್ನು ಜುಲೈ 18, 2023 ರಂದು ಉದ್ಘಾಟಿಸಲಾಯಿತು, ಇದು ವಿಶಿಷ್ಟವಾದ ಸಮುದ್ರ ಚಿಪ್ಪು-ಪ್ರೇರಿತ ವಿನ್ಯಾಸವನ್ನು ಹೊಂದಿದೆ ಮತ್ತು ವಾರ್ಷಿಕವಾಗಿ 5 ಮಿಲಿಯನ್ ಪ್ರಯಾಣಿಕರನ್ನು ನಿರ್ವಹಿಸಲು ಸಾಮರ್ಥ್ಯ ಹೊಂದಿದೆ.
ಹೀಗೆ ಹತ್ತು-ಹಲವು ವಿಸಿಷ್ಟಗಳನ್ನು ಹೊಂದಿರುವ ಈ ನಿಲ್ದಾಣವು ಈ ಪ್ರದೇಶದ ಶ್ರೀಮಂತ ಸಾಂಸ್ಕೃತಿಕ ಪರಂಪರೆ ಮತ್ತು ಹಚ್ಚ ಹಸಿರಿನಂದ ಕೂಡಿದ ನೈಸರ್ಗಿಕ ಸೌಂದರ್ಯವು ಈಗ ಹಿಂದೆಂದಿಗಿಂತಲೂ ಹೆಚ್ಚು ಪ್ರವಾಸಿಗರನ್ನು ಆಕರ್ಶಿಸಲು ಸಹಕಾರಿಯಾಗಲಿದೆ. ಆರ್ಥಿಕ ಅಭಿವೃದ್ಧಿಯ ಜೊತೆಗೆ ಜಾಗತಿಕ ಮನ್ನಣೆಯು ದೊರೆಯಲಿದೆ.