ಹದಗೆಡುತ್ತಿರುವ ವಾಯುಮಾಲಿನ್ಯವನ್ನು ನಿಭಾಯಿಸುವ ಪ್ರಯತ್ನದಲ್ಲಿ, ವಾಯು ಗುಣಮಟ್ಟ ನಿರ್ವಹಣಾ ಆಯೋಗ (CAQM) ದೆಹಲಿಯಲ್ಲಿ ಗ್ರೇಡ್ ರೆಸ್ಪಾನ್ಸ್ ಆಕ್ಷನ್ ಪ್ಲಾನ್ (GRAP) ನ ಮೂರನೇ ಹಂತವನ್ನು ಜಾರಿಗೆ ತಂದಿದೆ. ಇದಕ್ಕೆ ಅನುಗುಣವಾಗಿ ಶುಕ್ರವಾರದಿಂದ ದೆಹಲಿ ಸಾರಿಗೆ ಇಲಾಖೆ ಮಾಲಿನ್ಯ ನಿಯಮಗಳನ್ನು ಉಲ್ಲಂಘಿಸುವ ವಾಹನಗಳಿಗೆ ಕಠಿಣ ದಂಡ ವಿಧಿಸಲು ಸಜ್ಜಾಗಿದೆ.
ಬಿಎಸ್-3 ಪೆಟ್ರೋಲ್ ಮತ್ತು ಬಿಎಸ್-4 ಡೀಸೆಲ್ ಲಘು ಮೋಟಾರು ವಾಹನಗಳು (ಎಲ್ಎಂವಿ), ಬಿಎಸ್-3 ಡೀಸೆಲ್ ಮಧ್ಯಮ ಸರಕು ವಾಹನಗಳು (ಎಂಜಿವಿ) ವಾಹನಗಳ ಬಳಕೆಯನ್ನು ಸಂಪೂರ್ಣವಾಗಿ ಸಿಷೇದಿಸಿದೆ. ಜೊತೆಗೆ ಹೊರಗಡೆಯಿಂದ ಬರುವ ಡೀಸೆಲ್ ಬಳಕೆಯ ಭಾರಿ ಸರಕು ವಾಹನಗಳ ದೆಹಲಿ ಪ್ರವೇಶವನ್ನು ನಿಷೇದಿಸಿದೆ. ಎಲೆಕ್ಟ್ರಿಕ್, ಸಿಎನ್ಜಿ ಅಥವಾ ಬಿಎಸ್-6 ಡೀಸೆಲ್ ಬಸ್ಗಳಿಗೆ ಮಾತ್ರ ದೆಹಲಿಗೆ ಪ್ರವೇಶಿಸಲು ಅನುಮತಿಸಲಾಗಿದೆ.
ಒಂದುವೇಳೆ ನಿಯಮ ಉಲ್ಲಂಘಿಸುವುದು ಕಂಡುಬಂದಲ್ಲಿ ಅಂತವರಿಗೆ 20,000 ರೂ. ಗಳ ದಂಡ ವಿಧಿಸಲಿದೆ.
ಮೋಟಾರು ವಾಹನ ಕಾಯ್ದೆ, 1988 ರ ಸೆಕ್ಷನ್ 194 (1) ರ ಅಡಿಯಲ್ಲಿ ಜಾರಿಗೆ ತರಬಹುದಾದ ಈ ಕ್ರಮವು ವಾಹನಗಳಿಂದ ಉಂಟಾಗುವ ವಾಯು ಮಾಲಿನ್ಯವನ್ನು ತಡೆಯಲು ಸಹಾಯಕ ವಾಗಲಿದೆ. ಇದರಿಂದ ನಗರದಲ್ಲಿ ಮಾಲಿನ್ಯ ತಡೆ ಮತ್ತು ಸಾರ್ವಜನಿಕರ ಆರೋಗ್ಯ ಸುಧಾರಣೆಗೆ ಇದು ತುರ್ತು ಕ್ರಮವಾಗಲಿದೆ ಎಂದು ಸಾರಿಗೆ ಇಲಾಖೆ ತಿಳಿಸಿದೆ.