5
ಗದಗ:- ಆಸ್ತಿ ವಿವಾದ ಹಿನ್ನೆಲೆ, ಮಹಿಳೆ ತಲೆಗೆ ಸಲಾಖೆಯಿಂದ ಹೊಡೆದು ಭೀಕರ ಕೊಲೆ ಮಾಡಿರುವ ಘಟನೆ ಗದಗ ತಾಲೂಕಿನ ಕಣವಿ ಗ್ರಾಮದಲ್ಲಿ ಜರುಗಿದೆ.
48 ವರ್ಷದ ಜೈಬುನ್ನಿಸಾ ಕಿಲ್ಲೆದಾರ ಕೊಲೆಯಾದ ಮಹಿಳೆಯಾಗಿದ್ದು, ಆಸ್ತಿ ವಿವಾದದ ಹಿನ್ನೆಲೆಯಲ್ಲಿ ಕೊಲೆ ನಡೆದಿರುವ ಶಂಕೆ ವ್ಯಕ್ತವಾಗಿದೆ. ಮಲಿಕ್ಸಾಬ ಕೊಲೆ ಮಾಡಿದ ಸಂಬಂಧಿಕ ಎಂದು ತಿಳಿದು ಬಂದಿದೆ.
ಮನೆ ನಿರ್ಮಾಣದಲ್ಲಿ ಆರೋಪಿ ಮಲಿಕ್ಸಾಬ ತೊಡಗಿದ್ದ. ಇಂದು ಆರೋಪಿ ಹಾಗೂ ಕೊಲೆಯಾದ ಮಹಿಳೆ ಜೈಬುನ್ನಿಸಾ ಕಿಲ್ಲೆದಾರ ನಡುವೆ ಮಾತಿಗೆ ಮಾತು ಬೆಳೆದು ಜಗಳ ವಿಕೋಪಕ್ಕೆ ಹೋಗಿದೆ. ಈ ವೇಳೆ ಅಲ್ಲೇ ಇದ್ದ ಸಲಾಖೆಯಿಂದ ಮಹಿಳೆ ತಲೆಗೆ ಆರೋಪಿ ಹೊಡೆದಿದ್ದಾರೆ. ಕೂಡಲೇ ನೆಲಕ್ಕೆ ಬಿದ್ದ ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ.
ಇನ್ನೂ ಕೊಲೆ ಮಾಡಿದ ನಂತರ ಆರೋಪಿ ಮುಳಗುಂದ ಪೊಲೀಸ್ ಠಾಣೆಗೆ ಸೆರೆಂಡರ್ ಆಗಿದ್ದಾನೆ.
ಸುದ್ದಿ ತಿಳಿದು ಗದಗ ಗ್ರಾಮೀಣ ಠಾಣಾ ಪಿಎಸ್ಐ ಎಲ್ ಕೆ ಜೂಲಕಟ್ಟಿ ಹಾಗೂ ಮುಳಗುಂದ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮುಳಗುಂದ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.