Saturday, April 19, 2025
Homeದೇಶಕೇರಳಕ್ಕೆ 10 ಹೊಸ ನಮೋ ಭಾರತ್ ರೈಲುಗಳು; ಇಂಟರ್ ಸಿಟಿ ಸಂಪರ್ಕ ಸುಧಾರಣೆಗೆ ಮಹತ್ವದ ಹೆಜ್ಜೆ

ಕೇರಳಕ್ಕೆ 10 ಹೊಸ ನಮೋ ಭಾರತ್ ರೈಲುಗಳು; ಇಂಟರ್ ಸಿಟಿ ಸಂಪರ್ಕ ಸುಧಾರಣೆಗೆ ಮಹತ್ವದ ಹೆಜ್ಜೆ

ದೆಹಲಿ:  ಇಂಟರ್ಸಿಟಿ ಸಂಪರ್ಕಗಳನ್ನು ಸುಧಾರಿಸುವ ಮತ್ತು ರಾಜ್ಯಾದ್ಯಂತ ಪರಿಸರ ಸ್ನೇಹಿ ಪ್ರಯಾಣವನ್ನು ಉತ್ತೇಜಿಸುವ ಪ್ರಯತ್ನದಲ್ಲಿ, ಕೇಂದ್ರ ರೈಲ್ವೆ ಇಲಾಖೆ ನಮೋ ಭಾರತ್ ಎಂಬ ಹೆಸರಿನ ಹತ್ತು ಹೊಸ ವಂದೇ ಭಾರತ್ ರೈಲುಗಳನ್ನು ಪರಿಚಯಿಸಲು ಸಜ್ಜಾಗುತ್ತಿದೆ. ಐಷಾರಾಮಿ ಮತ್ತು ದಕ್ಷತೆಗೆ ಹೆಸರುವಾಸಿಯಾದ ಈ ಹವಾನಿಯಂತ್ರಿತ ರೈಲುಗಳು ಗಂಟೆಗೆ 130 ಕಿ.ಮೀ ವೇಗವನ್ನು ತಲುಪಬಲ್ಲವು ಮತ್ತು ಸಿಸಿಟಿವಿ ಮತ್ತು ಸ್ವಯಂಚಾಲಿತ ಸ್ಲೈಡಿಂಗ್ ಬಾಗಿಲುಗಳಂತಹ ಆಧುನಿಕ ಸೌಲಭ್ಯಗಳನ್ನು ಹೊಂದಿವೆ.

ಈ ರೈಲುಗಳ ಪರಿಚಯದಿಂದ  ಕೇರಳದ ನೈಸರ್ಗಿಕ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಪ್ರಪಂಚಕ್ಕೆ ಪರಿಚಯಿಸಲು ಮತ್ತು ಇನ್ನೂ ಹೆಚ್ಚಿನ ಪ್ರವಾಸಿಗರನ್ನು ಆಕರ್ಶಿಸಲು ಈ ಯೋಜನೆ ಅನುಕೂಲವಾಗಲಿದೆ.

ಹೊಸ ವಂದೇ ಭಾರತ್ ರೈಲುಗಳು ಕೇರಳದ ಅನೇಕ ಮಾರ್ಗಗಳಲ್ಲಿ ಚಲಿಸಲಿದ್ದು,  ತಮಿಳುನಾಡಿನವರೆಗೆ ವಿಸ್ತರಿಸುವ ಸಾದ್ಯತೆ ಇದೆ.

 ಹತ್ತು ಮಾರ್ಗಗಳಲ್ಲಿ ಎರಡು ಕೊಲ್ಲಂನಿಂದ ತ್ರಿಶೂರ್ ಮತ್ತು ತಿರುನೆಲ್ವೇಲಿಗೆ ಚಲಿಸುತ್ತವೆ, ತ್ರಿಶೂರ್ ಮಾರ್ಗವನ್ನು ಬಹುಶಃ ಪ್ರಸಿದ್ಧ ಯಾತ್ರಾ ಸ್ಥಳವಾದ ಗುರುವಾಯೂರಿಗೆ ವಿಸ್ತರಿಸಲಾಗುವುದು.

ಇತರ ಮಾರ್ಗಗಳು : ತಿರುವನಂತಪುರಂನಿಂದ ಎರ್ನಾಕುಲಂ ಮತ್ತು ಗುರುವಾಯೂರ್ ನಿಂದ ಮಧುರೈಗೆ ಸಂಪರ್ಕ ಕಲ್ಪಿಸಲಿದ್ದು, ಕೊಲ್ಲಂ-ತ್ರಿಶೂರ್ ಮತ್ತು ಕೊಲ್ಲಂ-ತಿರುನೆಲ್ವೇಲಿ ಮತ್ತು ಗುರುವಾಯೂರ್-ಮಧುರೈ ಮತ್ತು ಎರ್ನಾಕುಲಂ-ತಿರುವನಂತಪುರಂ ಮಾರ್ಗಗಳಿಗೆ ಕೊಲ್ಲಂ ನಿಲ್ದಾಣವಾಗಲಿದೆ. ಮಧುರೈ ಮತ್ತು ತಿರುನೆಲ್ವೇಲಿಯಂತಹ ಕೆಲವು ಮಾರ್ಗಗಳು ಕೊಲ್ಲಂ-ಶೆಂಕೊಟ್ಟೈ ಮಾರ್ಗವನ್ನು ಹಾದುಹೊಗುತ್ತವೆ. ಈ ಮಾರ್ಗಗಳು ತೆನ್ಮಲ ಅಣೆಕಟ್ಟು, ಪಲರುವಿ ಜಲಪಾತ ಮತ್ತು ರೋಸ್ಮಾಲಾ ಗ್ರಾಮದಂತಹ ಸ್ಥಳಗಳನ್ನು ಒಳಗೊಂಡಂತೆ ಕಾಡುಗಳ ರಮಣೀಯ ಸ್ಥಳಗಳ ಮೂಲಕ ಪ್ರಯಾಣಿಸುವ ರೋಚಕ ಮಾರ್ಗವಾಗಲಿದೆ..

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments