ಲಕ್ಷ್ಮೇಶ್ವರ ಃ ಹಿರೇಮಲ್ಲಾಪುರ ಗ್ರಾಮದಲ್ಲಿ ಎಥೆನಾಲ್ ಕಾರ್ಖಾನೆಯವರು ಅವರ ಸಂಬಂಧಿಕರ ಹೆಸರಿನಲ್ಲಿ ೫೦ ಎಕರೆ ಜಮೀನು ಖರೀದಿಗೆ ಮುಂದಾಗಿದ್ದು, ಈ ಭೂಮಿ ಖರೀದಿಸುತ್ತಿರುವದು ಕಾರ್ಖಾನೆಗಾಗಿಯೋ ಅಥವಾ ತಮ್ಮ ಸ್ವಂತ ಉಳುಮೆ ಮಾಡಲು ಖರೀದಿಸುತ್ತಿದ್ದಾರೋ ಎಂಬುದನ್ನು ಸ್ಪಷ್ಟಡಿಸಬೇಕು ಎಂದು ಜಯಕರ್ನಾಟಕ ಸಂಘಟನೆ ತಾಲೂಕ ಅಧ್ಯಕ್ಷ ಇಸ್ಮಾಯಿಲ್ ಆಡೂರ, ಪ್ರಕಾರ್ಯದರ್ಶಿ ಹಾಲಪ್ಪ ಬಂಡಾರಿ, ಹಾಗೂ ತಾಲೂಕ ಸಂಚಾಲಕ ರಮೇಶ ಹಂಗನಕಟ್ಟಿ ಆಗ್ರಹಿಸಿದರು.
ವರದಿ : ಪರಮೇಶ ಎಸ್ ಲಮಾಣಿ
ಈ ಕುರಿತು ಪಟ್ಟಣದಲ್ಲಿ ಶುಕ್ರವಾರ ತಹಸೀಲ್ದಾರ ಧನಂಜಯ ಎಂ ಅವರಿಗೆ ಮನವಿ ಸಲ್ಲಿಸಿ ಮಾತನಾಡಿದರು. ಈಗಾಗಲೇ ಕಂಪನಿಯವರ ವಿರುದ್ಧ ಸುಮಾರು ದಿನಗಳಿಂದ ಸಾರ್ವಜನಿಕ ವಿವಿಧ ಕನ್ನಡ ಪರ ಸಂಘಟನೆಗಳು ಹೋರಾಟ ಮಾಡುತ್ತ ಬಂದಿದ್ದು ಗ್ರಾಮದ ಹತ್ತಿರ ೩೬ ಎಕರೆ ಭೂಮಿಯಲ್ಲಿ ಕಾರ್ಖಾನೆ ನಿರ್ಮಾಣ ಆಗುತ್ತಿದ್ದು, ವಿರೋಧದ ನಡುವೆಯೂ ಕಾರ್ಖಾನೆ ನಿರ್ಮಿಸಲು ಹೊರಟಿದ್ದಾರೆ, ಕಾರ್ಖಾನೆ ಪ್ರಾರಂಭ ಗೊಂಡರೆ ಪರಿಸರ ಮಾಲಿನ್ಯದಿಂದ ಗ್ರಾಮದ ಜನರಿಗೆ ರೋಗದ ಭೀತಿ ಕಾಡುತ್ತದೆ ಅಷ್ಟೇ ಅಲ್ಲದೆ ಹತ್ತಿರ ಸರಕಾರಿ ಶಾಲೆ ಇರುವದನ್ನು ಸಹ ಗಣನೆಗೆ ತೆಗೆದುಕೊಂಡಿಲ್ಲ ಎಂದು ಆರೋಪಿಸಿದರು.
ಈ ಕಾರ್ಖಾನೆಯಿಂದ ಗ್ರಾಮದ ರೈತರ ಜಮೀನುಗಳಿಗೆ ಹಾನಿಯಾಗಲಿದೆ, ಇದರ. ಮದ್ಯ ಮತ್ತೆ ೫೦ ಎಕರೆ ಜಮೀನು ಖರೀದಿ ಮಾಡಲಿಕ್ಕೆ ಹೊರಟಿದ್ದು ಯಾವ ಕಾರಣಕ್ಕೆ ಎನ್ನುವದನ್ನು ಸ್ಪಷ್ಟಪಡಿಸುವದು ಅಗತ್ಯವಾಗಿದೆ. ಈಗ ಅವರು ಖರೀದಿಸಲು ಉದ್ದೇಶಿಸಿರುವ ಜಮೀನ ಖಾತೆ ಬದಲಾವಣೆ ಮಾಡಬಾರದು ಇದಕ್ಕೆ ಸಂಪೂರ್ಣ ವಿರೋಧವಿದ್ದು ಒಂದು ವೇಳೆ ಖಾತೆ ಬದಲಾವಣೆ ಮಾಡುವುದು ಕಂಡು ಬಂದಲ್ಲಿ ಜಯಕರ್ನಾಟಕ ವಿವಿಧ ಕನ್ನಡ ಪರ ಸಂಘಟನೆ ಹಾಗೂ ಗ್ರಾಮಸ್ಥರಿಂದ ಉಗ್ರವಾದ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು,
ಈ ಸಂದರ್ಭದಲ್ಲಿ ತಾಲೂಕ ಗೌರವಾದ್ಯಕ್ಷ ಇಶಾಕಭಾಷಾ ಹರಪನಹಳ್ಳಿ, ನಾಗರಾಜ ಉಪ್ಪಾರ, ಯಲ್ಲಪ್ಪ ಹಚಿಜಗಿ, ಬಸವರಾಜ ಮೆಲ್ಮುರಿ, ಶಾಹೀದ್ ಉಳ್ಳಟ್ಟಿ, ಅಬ್ದುಲ ಕರೀಂ, ಎ.ಎಂ.ಕೊಪ್ಪಳ, ಮಂಜುನಾಥ ಶಿರಹಟ್ಟಿ, ಬಸಣ್ಣ ಮೂಕಿ, ಮೈನು ಮೊಮೀನ್, ಜಗದೀಶ ತಳವಾರ, ಮಲ್ಲೂ ಕಡಕೋಳ, ಹನುಮಂತಪ್ಪ ಬೆಟಗೇರಿ, ಮಾದೆವಪ್ಪ ತಳವಾರ, ಹನುಮಂತ ಕಿಳ್ಳಿಕ್ಯಾತರ, ಅನೇಕ ಕಾರ್ಯಕರ್ತರು ಇದ್ದರು.
