ಲಕ್ಷ್ಮೇಶ್ವರ: ತಾಲೂಕಿನ ಕೋಟೆ ಗ್ರಾಮ ಯಳವತ್ತಿಯಲ್ಲಿ ಕ.ಸಾ.ಪ ಬೆಂಗಳೂರು, ಜಿಲ್ಲಾ ಘಟಕ ಗದಗ, ತಾಲೂಕ ಘಟಕ ಲಕ್ಷ್ಮೇಶ್ವರ ನೇತೃತ್ವದಲ್ಲಿ ಯಳವತ್ತಿ ಗ್ರಾಮದ ಸಮಸ್ತ ಮಹಾಜನತೆಯ ಸಹಯೋಗದಲ್ಲಿ ಎರಡನೇ ಕನ್ನಡ ಸಾಹಿತ್ಯ ಸಮ್ಮೇಳನ ಗ್ರಾಮದ ಕೋಟೆ ಆವರಣದಲ್ಲಿ ಜರುಗಿತು.
ವರದಿ : ಪರಮೇಶ ಎಸ್ ಲಮಾಣಿ.
ಕಾರ್ಯಕ್ರಮವು ಬೆಳಗಿನ ಜಾವದಲ್ಲಿ ಶಾಸಕ ಡಾ.ಚಂದ್ರು ಲಮಾಣಿ ಧ್ವಜಾರೋಹಣ ನೆರವೇರಿಸಿದರು. ಬಳಿಕ ಕನ್ನಡ ಭುವನೇಶ್ವರಿ ಭಾವಚಿತ್ರ ಹಾಗೂ ಸಮ್ಮೇಳನ ಅಧ್ಯಕ್ಷರ ಮೆರವಣಿಗೆಯು ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು.
ಬೆಳಿಗ್ಗೆ 10.ಗಂಟೆಗೆ ಸಮ್ಮೇಳನದ ಕಾರ್ಯಕ್ರಮ ಸಾನಿಧ್ಯ ವಹಿಸಿದ ಶಿರಹಟ್ಟಿ ಜಗದ್ಗುರು ಫಕೀರ ದಿಂಗಾಲೇಶ್ವರ ಮಹಾಸ್ವಾಮಿಗಳು ಕನ್ನಡ ಸಾಹಿತ್ಯ ಸಮ್ಮೇಳನ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಸರ್ವಾಧ್ಯಕ್ಷತೆಯನ್ನು ಶ್ರೀಮತಿ ಲಲಿತಾ ಕೆರೆಮನಿ ಹಾಗೂ ಅಧ್ಯಕ್ಷತೆಯನ್ನು ಶಾಸಕ ಚಂದ್ರು ಲಮಾಣಿ ವಹಿಸಿ ಮಾತನಾಡುತ್ತಾ ಕನ್ನಡ ಭಾಷೆ, ನಾಡುನುಡಿ, ಸಾಹಿತ್ಯ, ಕಲೆ ಮತ್ತು ಸಂಸ್ಕೃತಿಯನ್ನು ಪೋಷಿಸಲು, ಪ್ರಚಾರ ಮಾಡಲು ಮತ್ತು ಕನ್ನಡಿಗರ ಐಕ್ಯತೆನ್ನು ಒಗ್ಗೂಡಿಸುವುದು ಚಟುವಟಿಕೆ ಕನ್ನಡ ಸಾಹಿತ್ಯ ಸಮ್ಮೇಳನ ಎಂದರು.
ನಂತರ ಸ್ಮರಣ ಸಂಚಿಕೆ ಬಿಡುಗಡೆ, ಕೃತಿಗಳ ಬಿಡುಗಡೆ, ಚಿತ್ರಕಲಾ ಪ್ರದರ್ಶನ,ಮಹಿಳಾ ಕಲಾ ಪ್ರದರ್ಶನ, ಸಮ್ಮೇಳನ ಭಾಷಣ ಪ್ರತಿ ಬಿಡುಗಡೆ ಕಾರ್ಯಕ್ರಮ ಜರಗಿದವು.
ಗೋಷ್ಠಿಯಲ್ಲಿ ಐತಿಹಾಸಿಕ ಯಳವತ್ತಿ ಗ್ರಾಮ ಹಾಗೂ ಲಕ್ಷ್ಮೇಶ್ವರ ತಾಲೂಕು ದರ್ಶನ, ಸಾಂಸ್ಕೃತಿಕ ಸಂಗೀತ ಕಾರ್ಯಕ್ರಮ, ಇದರಲ್ಲಿ ಕೃಷಿ ಮಹಿಳಾ ಹಾಗೂ ಮಕ್ಕಳ ಸಾಹಿತ್ಯ ಗೋಷ್ಠಿ ಮಹಿಳಾ ಸಬಲೀಕರಣ, ಕವಿಗೋಷ್ಠಿ, ಬಹಿರಂಗ ಅಧಿವೇಶನ, ಸನ್ಮಾನ ಹಾಗೂ ಸಮಾರೋಪ ಸಮಾರಂಭ, ಸನ್ಮಾನ ಕಾರ್ಯಕ್ರಮ ನಡೆದವು.
ಈ ಸಂದರ್ಭದಲ್ಲಿ ನಾವೆಲ್ಲ ಕಸಪ ಜಿಲ್ಲಾಧ್ಯಕ್ಷರು ವಿವೇಕಾನಂದ ಗೌಡ ಪಾಟೀಲ ಕಸಾಪ ತಾಲೂಕ ಅಧ್ಯಕ್ಷರು ಈಶ್ವರ ಮೇಡ್ಲೇರಿ ಪಿಎಸ್ಐ ನಾಗರಾಜ ಗಡದ ಪಿಎಸ್ಐ ಈರಣ್ಣ ರಿತ್ತಿ ಆರ್ ಎಚ್ ನರೇಗಲ್ ಮೃತ್ಯುಂಜಯ ಹಿರೇಮಠ ಟಿ ಈಶ್ವರ ನಾಗರಾಜ ಮಡಿವಾಳರ ಎಸ್ ಪಿ ಬಳೆಗಾರ ಎಂ ಎಸ್ ದೊಡ್ಡ ಗೌಡ್ರು ಸಂದರ್ಭದಲ್ಲಿ ಕ.ಸಾ.ಪ ಜಿಲ್ಲಾಧ್ಯಕ್ಷರು ವಿವೇಕಾನಂದ ಗೌಡ ಪಾಟೀಲ, ಕ.ಸಾ.ಪ ತಾಲೂಕ ಅಧ್ಯಕ್ಷರು ಈಶ್ವರ ಮೇಡ್ಲೇರಿ, ಪಿಎಸ್ಐ ನಾಗರಾಜ ಗಡದ, ಪಿಎಸ್ಐ ಈರಣ್ಣ ರಿತ್ತಿ, ಆರ್ ಎಚ್ ನರೇಗಲ್, ಮೃತ್ಯುಂಜಯ ಹಿರೇಮಠ, ಟಿ ಈಶ್ವರ, ನಾಗರಾಜ ಮಡಿವಾಳರ, ಎಸ್ ಪಿ ಬಳೆಗಾರ, ಎಂ ಎಸ್ ದೊಡ್ಡಗೌಡ್ರು, ಮಂಜುನಾಥ, ಕೆ ಎಸ್ ಕೊಡ್ಲಿವಾಡ, ನಾಗರಾಜ ಮಜಿಗುಡ್ಡ, ಬಿ ಎಸ್ ಹರ್ಲಾಪುರ, ಪ್ರವೀಣ ಹುಲ್ಗೂರ, ಗುರುರಾಜ ಹವಳದ, ಪೂರ್ಣಾಜಿ ಖರಾಟೆ, ಮಹೇಶ ಹೊಗೆ ಸೊಪ್ಪಿನ, ಬಸವರಾಜ ಬಾಳೇಶ್ವರಮಠ, ಬಸವರಾಜ ಬೆಂಡಿಗೇರಿ, ಮಾಲಾದೇವಿ ದಂದರಗಿ, ನಾಗರಾಜ ಹಣಗಿ, ಫಕೀರೇಶ ಮ್ಯಾಟಣ್ಣವರ, ಕೋಟೆಪ್ಪ ವರದಿ, ಎಸ್ ಬಿ ಕರಿಬರಮಗೌಡ್ರು, ಸಿ ಆರ್ ಗೋಕಾವಿ, ನಿರ್ಮಲ ಶೆಟ್ರ, ಎಂ ಬಿ ಹೊಸಮನಿ, ಬಸವರಾಜ ಯರಗುಪ್ಪಿ, ಶೇಖಣ್ಣ ಸೊರಟೂರು, ಕೊತ್ತಲ ಮಹದೇವಪ್ಪ, ಗ್ರಾಮದ ಮುಖಂಡರು ಮಹಿಳೆಯರು ಹಿರಿಯರು ಯುವಕರು ಪಾಲ್ಗೊಂಡಿದ್ದರು.
