ವರದಿ : ಪರಮೇಶ ಎಸ್ ಲಮಾಣಿ.
ಲಕ್ಷ್ಮೇಶ್ವರ: ತಾಲೂಕಿನ ಹರದಗಟ್ಟಿ ತಾಂಡಾದ ಸಂತ ಶ್ರೀ ಸೇವಾಲಾಲ ಮತ್ತು ಮರಿಯಮ್ಮ ದೇವಿ ದೇವಸ್ಥಾನದಲ್ಲಿ ಸೇವಾಲಾಲ ಮಾಲಾಧಾರಿಗಳು ನಾಡಿನ ಒಳಿತಿಗಾಗಿ, ಶಾಂತಿಗಾಗಿ ಶುಕ್ರವಾರ ರಾತ್ರಿ ಸಹಸ್ರ ದೀಪೋತ್ಸವ ಕಾರ್ಯಕ್ರಮ ಸಡಗರ,ಸಂಭ್ರಮದೊಂದಿಗೆ ನೆರವೇರಿತು. ಸಹಸ್ರ ಭಕ್ತರು ದೀಪ ಹಚ್ಚುವ ಮೂಲಕ ಸಂಭ್ರಮಿಸಿದರು.
ತಾಂಡಾದ ಮಾಲಾಧಾರಿಗಳು ನಾಯಕ,ಡಾವ,ಕಾರಭಾರಿ ದೀಪೋತ್ಸವಕ್ಕೆ ಚಾಲನೆ ನೀಡಿದರು.
ತಾಂಡಾದ ನಾಗರಿಕರು ನೂರಾರು ಸಂಖ್ಯೆಯಲ್ಲಿ ಕುಟುಂಬ ಸಮೇತರಾಗಿ ದೇವಸ್ಥಾನಕ್ಕೆ ಆಗಮಿಸಿ ದೀಪೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಹಣತೆ ದೀಪಗಳನ್ನು ಹಚ್ಚ್ಚುವ ಮೂಲಕ ಸಂಭ್ರಮಿಸಿದರು. ದೀಪಗಳ ಬೆಳಕಿನಿಂದ ದೇವಸ್ಥಾನ ಕಂಗೋಳಿಸಿತ್ತು.
ದೇವಸ್ಥಾನದ ಮುಂದೆ ತ್ರಿಶೂಲ, ಓಂ ಹಾಗೂ ಇತರೆ ದೇವರ ಚಿನ್ನೆಗಳನ್ನು ಬರೆದು ಅದರ ಮೇಲೆ ದೀಪ ಹಚ್ಚಿದರು ಮತ್ತು ಮೆಟ್ಟಿಲುಗಳ ಮೇಲೆ ಹಣತೆಗಳನ್ನು ಸಾಲಾಗಿ ಇಡಲಾಗಿತ್ತು. ಎಲ್ಲ ಹಣತೆಗಳಲ್ಲಿ ಎಣ್ಣೆ ಬತ್ತಿಗಳನ್ನು ಹಾಕಿ ಸಿದ್ದಪಡಿಸಲಾಗಿತ್ತು. ದೇವರಿಗೆ ಮಂಗಳಾರತಿ ಆಗುತ್ತಿದ್ದಂತೆ ಸೇರಿದ್ದ ಸಾವಿರಾರು ಭಕ್ತ ಸಮ್ಮೂಹ ಭಕ್ತಿಯಿಂದ ದೀಪ ಬೆಳಗಿಸಿದರು. ಮಕ್ಕಳು ದೀಪಗಳನ್ನು ಸ್ವಸ್ತಿಕ ಮತ್ತು ಓಂ ಆಕಾರದಲ್ಲಿ ಹಚ್ಚಿ ಖುಷಿಪಟ್ಟರು.
ಕಳೆದ 5 ದಿನಗಳಿಂದ ಮಾಲಾಧಾರಿಗಳು ಪ್ರತಿದಿನ ಮುಂಜಾನೆ ಸ್ನಾನ ಮುಗಿಸಿಕೊಂಡು ಓಂ ಸಂತ ಸೇವಾಲಾಲರ ಭಜನೆ ಮತ್ತು ಮಂತ್ರಗಳನ್ನು ಪಠಿಸುತ್ತಿದ್ದರು. ಕೊನೆಯದಿನವಾದ ಶುಕ್ರವಾರ ಸ್ನಾನ ಮಾಡಿ ಜಪ ಮಂಗಳ ಮಾಡಿದರು.
ದೀಪೋತ್ಸವದ ಅಂಗವಾಗಿ ಸಂತ ಸೇವಾಲಾಲ, ಮರಿಯಮ್ಮ, ಬಸವಣ್ಣನ ಮೂರ್ತಿ, ಗಣೇಶ ದೇವಸ್ಥಾನಕ್ಕೆ ವಿವಿಧ ಪುಷ್ಪಗಳಿಂದ ಅಲಂಕರಿಸಲಾಗಿತ್ತು. ಪೂಜೆ, ನೆವೇದ್ಯ, ಮಹಾಮಂಗ ಳಾರುತಿ ಜರುಗಿತು. ಇದೇ ಸಂದರ್ಭದಲ್ಲಿ ಪುಣ್ಯ ಕಾಲದ ದೇವರ ವಿಂತಿ ಹೇಳಿದರು.
ದೇವಸ್ಥಾನದ ಎಲ್ಲಡೆಯು ಜೈ ಸೇವಾಲಾಲ… ಜೈಜೈ ಸೇವಾಲಾಲ …ಎನ್ನುವ ಮಂತ್ರ ಪಠಣ ಭಕ್ತಿಯ ಪರಾಕಾಷ್ಠೆಗೆ ಸಾಕ್ಷಿಯಾಗಿತ್ತು.
ಸಂದರ್ಭದಲ್ಲಿ ಮಾಲಾಧಾರಿಗಳಾದ ಕೃಷ್ಣ ಪೂಜಾರ, ದೇವಪ್ಪ ಲಮಾಣಿ, ನರಸಿಂಗಪ್ಪ ಲಮಾಣಿ, ರಾಮಣ್ಣ ಲಮಾಣಿ, ರಾಜಕುಮಾರ ಲಮಾಣಿ, ವಾಲೇಶ ಪೂಜಾರ, ಶೀವು ಲಮಾಣಿ, ಕುಮಾರ ಲಮಾಣಿ, ಅರುಣ ಲಮಾಣಿ, ಲಕ್ಷ್ಮಣ ಲಮಾಣಿ, ಗಂಗಪ್ಪ ನಾಯಕ, ಅಶೋಕ ಪವಾರ, ರಾಜು ರಾಠೋಡ, ಸೋಮನಾಥ ಲಮಾಣಿ, ಚಂದ್ರು ಲಮಾಣಿ, ಕೃಷ್ಣ ಲಮಾಣಿ, ಹಾಲೇಶ ಲಮಾಣಿ, ಸಂತೋಷ ಲಮಾಣಿ ಮತ್ತಿತರಿದ್ದರು.
