ಗದಗ : ದಿ ನ್ಯೂ ಇಂಡಿಯನ್ ಎಕ್ಸಪ್ರೆಸ್ ಪತ್ರಿಕೆಯ ಸಹಯೋಗದಲ್ಲಿ ಚಿಕ್ಕಟ್ಟಿ ಶಾಲಾ–ಕಾಲೇಜು ಆವರಣದಲ್ಲಿ ‘ಜಾಗೋ ಹಿಂದೂಸ್ಥಾನಿ’ ಜಾಗೃತಿ ಕಾರ್ಯಕ್ರಮ ಭವ್ಯವಾಗಿ ನಡೆಯಿತು. ಕಾರ್ಯಕ್ರಮವನ್ನು ರಾಜ್ಯ ವಿಕೇಂದ್ರಿಕರಣ ಸಮಿತಿಯ ರಾಜ್ಯ ಉಪಾಧ್ಯಕ್ಷರು ಹಾಗೂ ಮಾಜಿ ಶಾಸಕರಾದ ಶ್ರೀ ಡಿ. ಆರ್. ಪಾಟೀಲರು ಮತ್ತು ವಿಧಾನ ಪರಿಷತ್ ಸದಸ್ಯರಾದ ಶ್ರೀ ಎಸ್. ವಿ. ಸಂಕನೂರು ಅವರು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿದರು.
ಮೌನವೃತಾಚರಣೆಯಲ್ಲಿದ್ದ ಕಾರಣ ಶ್ರೀ ಡಿ. ಆರ್. ಪಾಟೀಲರು ಮೌನವಾಗಿಯೇ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ವಿಧಾನ ಪರಿಷತ್ ಸದಸ್ಯರಾದ ಶ್ರೀ ಎಸ್. ವಿ. ಸಂಕನೂರು ಅವರು, ‘ಜಾಗೋ ಹಿಂದೂಸ್ಥಾನಿ’ ಕಾರ್ಯಕ್ರಮವು ಮೌಲ್ಯಗಳ ರಕ್ಷಣೆ, ಸಾಮಾಜಿಕ ಜಾಗೃತಿ, ನೈತಿಕ ಬದ್ಧತೆ ಹಾಗೂ ರಾಷ್ಟ್ರೀಯ ಏಕತೆಯ ಕುರಿತು ನಾಗರಿಕರನ್ನು ಹುರಿದುಂಬಿಸುವ ಮಹತ್ವದ ಕಾರ್ಯಕ್ರಮವಾಗಿದೆ. ಭ್ರಷ್ಟಾಚಾರದ ವಿರುದ್ಧ ನಮ್ಮೆಲ್ಲರಲ್ಲೂ ಜಾಗೃತಿಯ ಕಿಚ್ಚನ್ನು ಹಚ್ಚುವ ಉದ್ದೇಶ ಇದಾಗಿದೆ ಎಂದರು.
ಯುವಕರು ದೇಶದ ಶಕ್ತಿ ಹಾಗೂ ಭವಿಷ್ಯವಾಗಿದ್ದು, ದೇಶ ಬದಲಾಗಬೇಕೆಂದರೆ ಮೊದಲು ನಾವು ಬದಲಾಗಬೇಕು. ಸಣ್ಣ ಸಣ್ಣ ಒಳ್ಳೆಯ ನಡೆ–ನುಡಿಗಳಿಂದಲೇ ದೊಡ್ಡ ಕ್ರಾಂತಿ ಸಾಧ್ಯ. ಸ್ವಾತಂತ್ರ್ಯ ಪಡೆದ ನಮ್ಮ ಭಾರತ ಇಂದು ಅಭಿವೃದ್ಧಿಯ ದಾರಿಯಲ್ಲಿ ವೇಗವಾಗಿ ಮುನ್ನುಗ್ಗುತ್ತಿದೆ. ಆದರೆ ಅಭಿವೃದ್ಧಿಯ ಜೊತೆಗೆ ಜಾಗೃತಿಯೂ ಅಗತ್ಯ. ನಾಗರಿಕರು ಜಾಗೃತರಾಗದಿದ್ದರೆ ಯಾವುದೇ ಸರ್ಕಾರ, ಯಾವುದೇ ವ್ಯವಸ್ಥೆ ಸಂಪೂರ್ಣ ಯಶಸ್ವಿಯಾಗಲು ಸಾಧ್ಯವಿಲ್ಲ. ಆದ್ದರಿಂದ ‘ಜಾಗೋ ಹಿಂದೂಸ್ಥಾನಿ’ ಎಂಬ ಘೋಷಣೆ ನಮ್ಮೆಲ್ಲರ ಮನದೊಳಗೆ ಪ್ರತಿಧ್ವನಿಯಾಗಬೇಕು ಎಂದು ಹೇಳಿದರು.
ಸಂಸ್ಥಾಪಕ ಅಧ್ಯಕ್ಷರಾದ ಪ್ರೊ. ಎಸ್. ವಾಯ್. ಚಿಕ್ಕಟ್ಟಿ ಅವರು ಪ್ರಾಸ್ತಾವಿಕ ನುಡಿಗಳನ್ನಾಡಿ, ಇಂದು ಇಲ್ಲಿ ಎಲ್ಲರೂ ಒಂದಾಗಿ ಸೇರಿರುವುದು ಅತ್ಯಂತ ಅರ್ಥಪೂರ್ಣ ಹಾಗೂ ರಾಷ್ಟ್ರಭಾವನೆ ತುಂಬಿದ ‘ಜಾಗೋ ಹಿಂದೂಸ್ಥಾನಿ’ ಎಂಬ ಮಹತ್ವದ ಕಾರ್ಯಕ್ರಮಕ್ಕಾಗಿ. ಅಪಾರ ಇತಿಹಾಸ, ಸಂಸ್ಕೃತಿ ಮತ್ತು ವೈವಿಧ್ಯತೆಯಲ್ಲಿ ಏಕತೆಯನ್ನು ಹೊಂದಿರುವ ನಮ್ಮ ಮಹಾನ್ ರಾಷ್ಟ್ರವನ್ನು ಇನ್ನಷ್ಟು ಶ್ರೇಷ್ಠವಾಗಿಸಲು ಪ್ರತಿಯೊಬ್ಬ ನಾಗರಿಕನಲ್ಲೂ ಜಾಗೃತಿ, ಜವಾಬ್ದಾರಿ ಮತ್ತು ರಾಷ್ಟ್ರಪ್ರೇಮ ತುಂಬುವ ಕಾರ್ಯಕ್ರಮವೇ ಇದು ಎಂದು ಹೇಳಿದರು.
ಈ ಸಂದರ್ಭದಲ್ಲಿ ವಿಜಾಪುರ ಜಿಲ್ಲೆ ಬಿಜ್ಜರಗಿ ಜ್ಞಾನಯೋಗಾಶ್ರಮದ ಸಿದ್ಧೇಶ್ವರ ಸ್ವಾಮೀಜಿಯವರ ಸಹೋದರರಾದ ಶ್ರೀ ಸೋಮಲಿಂಗಯ್ಯ ಪಾಟೀಲರು ಕಳುಹಿಸಿದ ಸಂದೇಶವನ್ನು ವಾಚಿಸಲಾಯಿತು. ಆ ಸಂದೇಶದಲ್ಲಿ ಬಂಕಿಮಚಂದ್ರ ಚಟರ್ಜಿ ರಚಿಸಿ, ರವೀಂದ್ರನಾಥ ಟಾಗೋರ್ ಹಾಡಿರುವ ‘ವಂದೇ ಮಾತರಂ’ ಗೀತೆಯ 150ನೇ ಸಂಭ್ರಮಾಚರಣೆಯ ಅಂಗವಾಗಿ ನಡೆಯುತ್ತಿರುವ ‘ಜಾಗೋ ಹಿಂದೂಸ್ಥಾನಿ’ ರಾಷ್ಟ್ರೀಯ ಕಾರ್ಯಕ್ರಮ ಚಿಕ್ಕಟ್ಟಿ ಸಂಸ್ಥೆಯಲ್ಲಿ ನಡೆಯುತ್ತಿರುವುದು ಇತಿಹಾಸದ ಕ್ಷಣವಾಗಿದೆ ಎಂದು ಉಲ್ಲೇಖಿಸಲಾಗಿತ್ತು.
ವಿ. ಡಿ. ಎಸ್.ಟಿ ಕಾಲೇಜಿನ ಪ್ರಾಚಾರ್ಯರು ಎನ್. ಸಿ. ಸಿ. ಕ್ಯಾಪ್ಟನ್‌ನಿಂದ ಮೇಜರ್ ಆಗಿ ಪದೋನ್ನತಿ ಪಡೆದ ನಿಮಿತ್ತ ಡಾ. ಬಿ. ಎಸ್. ರಾಠೋಡ್ ಅವರಿಗೆ ಚಿಕ್ಕಟ್ಟಿ ಶಿಕ್ಷಣ ಸಮೂಹ ಸಂಸ್ಥೆಗಳ ವತಿಯಿಂದ ಗೌರವಪೂರ್ವಕವಾಗಿ ಸನ್ಮಾನಿಸಲಾಯಿತು.
ಮಾಜಿ ಶಾಸಕರಾದ ಶ್ರೀ ಡಿ. ಆರ್. ಪಾಟೀಲರು, ಪ್ರಾಚಾರ್ಯರಾದ ಡಾ. ಬಿಪಿನ್ ಎಸ್. ಚಿಕ್ಕಟ್ಟಿ ಹಾಗೂ ವಿ. ಡಿ. ಎಸ್. ಕಾಲೇಜಿನ ಪ್ರಾಚಾರ್ಯರಾದ ಡಾ. ಬಿ. ಎಸ್. ರಾಠೋಡ್ ಅವರಿಗೂ ಗೌರವಪೂರ್ವಕವಾಗಿ ಸನ್ಮಾನಿಸಿದರು.
ದಿ ನ್ಯೂ ಇಂಡಿಯನ್ ಎಕ್ಸಪ್ರೆಸ್ ಸುದ್ದಿ ಮಾಧ್ಯಮದ ವತಿಯಿಂದ ರಸಾಯನಶಾಸ್ತ್ರ ವಿಷಯದಲ್ಲಿ ಪಿ.ಎಚ್.ಡಿ ಪದವಿ ಪಡೆದ ನಿಮಿತ್ತ ಪ್ರಾಚಾರ್ಯರಾದ ಡಾ. ಬಿಪಿನ್ ಎಸ್. ಚಿಕ್ಕಟ್ಟಿ ಅವರಿಗೆ ಹಾಗೂ ಎನ್. ಸಿ. ಸಿ. ಕ್ಯಾಪ್ಟನ್‌ನಿಂದ ಮೇಜರ್ ಆಗಿ ಪದೋನ್ನತಿ ಪಡೆದ ಡಾ. ಬಿ. ಎಸ್. ರಾಠೋಡ್ ಅವರಿಗೆ ಗೌರವಪೂರ್ವಕ ಸನ್ಮಾನ ನೆರವೇರಿಸಲಾಯಿತು.
ಪ್ರೊ. ಐ. ಕೆ. ಕಮ್ಮಾರ ಅವರು ಕೂಡ ಪ್ರಾಚಾರ್ಯರಾದ ಡಾ. ಬಿಪಿನ್ ಎಸ್. ಚಿಕ್ಕಟ್ಟಿ ಅವರನ್ನು ಗೌರವಪೂರ್ವಕವಾಗಿ ಸನ್ಮಾನಿಸಿದರು.
ಈ ಸಂದರ್ಭದಲ್ಲಿ ದಿ ನ್ಯೂ ಇಂಡಿಯನ್ ಎಕ್ಸಪ್ರೆಸ್ ಪತ್ರಿಕೆಯ ವಿಶೇಷ ಪುರವಣಿಯನ್ನು ವಿಧಾನ ಪರಿಷತ್ ಸದಸ್ಯರಾದ ಶ್ರೀ ಎಸ್. ವಿ. ಸಂಕನೂರು ಹಾಗೂ ಮಾಜಿ ಶಾಸಕರು, ರಾಜ್ಯ ವಿಕೇಂದ್ರಿಕರಣ ಸಮಿತಿಯ ರಾಜ್ಯ ಉಪಾಧ್ಯಕ್ಷರಾದ ಶ್ರೀ ಡಿ. ಆರ್. ಪಾಟೀಲರು ಬಿಡುಗಡೆಗೊಳಿಸಿದರು.
ಕಾರ್ಯಕ್ರಮದಲ್ಲಿ ದಿ ನ್ಯೂ ಇಂಡಿಯನ್ ಎಕ್ಸಪ್ರೆಸ್ ಪತ್ರಿಕೆಯ ಶ್ರೀ ಸತೀಶ ಜ್ಯೋಶಿ (ಅಸಿಸ್ಟಂಟ್ ಜನರಲ್ ಮ್ಯಾನೇಜರ್ – ಉತ್ತರ ಕರ್ನಾಟಕ), ಶ್ರೀ ರವಿ ಕಾಕಡೆ (ಮ್ಯಾನೇಜರ್ ಮಾರ್ಕೆಟಿಂಗ್, ಹುಬ್ಬಳ್ಳಿ), ಶ್ರೀ ಅಮಿತ್ ಉಪಾಧ್ಯಾಯ (ಸಿನಿಯರ್ ಅಸಿಸ್ಟಂಟ್ ಎಡಿಟರ್, ಹುಬ್ಬಳ್ಳಿ), ಶ್ರೀ ರಘೋತ್ತಮ ಕೊಪ್ಪರ್ (ಇಂಡಿಯನ್ ಎಕ್ಸಪ್ರೆಸ್), ಶ್ರೀ ಸುದೀಂದ್ರ ಹುಯಿಲಗೋಳ (ನಿವೃತ್ತ ಆಫೀಸ್ ಸುಪರಿಂಟೆಂಡೆಂಟ್), ನಿವೃತ್ತ ಪ್ರಾಚಾರ್ಯರಾದ ಶ್ರೀ ಜಿ. ಎಸ್. ಹಿರೇಮಠ, ಕಿತ್ತೂರು ಕರ್ನಾಟಕ ದಿನಪತ್ರಿಕೆಯ ಸಂಪಾದಕರಾದ ಶ್ರೀ ಮಂಜುನಾಥ ಬಸಪ್ಪ ಅಬ್ಬಿಗೇರಿ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.
ಇದಲ್ಲದೆ ಡಾ. ಆರ್. ಎನ್. ಪಾಟೀಲ, ಡಾ. ರಾಜಶೇಖರ ಸಜ್ಜನರ, ಡಾ. ಕೆ. ಎಚ್. ಬೆಲೂರ, ಡಾ. ಮಧುಸೂದನ ಚಿಂತಾಮಣಿ, ಡಾ. ಗುರುಲಿಂಗಪ್ಪ ಬರಮಪ್ಪ ಬೀಡನಾಳ, ಡಾ. ಸೋನಿಯಾ ಕರೂರ, ಶ್ರೀ ಮುಕುಂದ ಪೊತ್ನಿಸ್, ಪ್ರಾಚಾರ್ಯರಾದ ಶ್ರೀ ಜಿ. ಆರ್. ಶಿರ್ಸಿ, ಶ್ರೀ ಗೋವಿಂದಗೌಡರ, ಯಂಗ್ ಇಂಡಿಯಾ, ಶ್ರೀ ಶಂಕರ ಹೂಗಾರ, ನಿವೃತ್ತ ಬಿ.ಇ.ಒ. ಶ್ರೀ ಸಿ. ಕೆ. ಎಚ್. ಕಡಣಿಶಾಸ್ತ್ರಿ, ಶ್ರೀ ವಿ. ವಿ. ಹಿಂದಿನಮನಿ ದಂಪತಿಗಳು, ಶ್ರೀ ಸುಧೀರ ಮಾಡಲಗಿ ಸರ್ ದಂಪತಿಗಳು, ಪ್ರಾಚಾರ್ಯರು ಶ್ರೀ ಬಸವರಾಜ ಜಿ. ಗಿರಿತಿಮ್ಮಣ್ಣವರ (ಸ.ಪ.ಪೂ. ಕಾಲೇಜ್, ಶಿರಹಟ್ಟಿ), ವಿನಯ್ ಚಿಕ್ಕಟ್ಟಿ ಕಾಲೇಜಿನ ಪ್ರಾಚಾರ್ಯರಾದ ಶ್ರೀ ವಿನಯ್ ಎಸ್. ಚಿಕ್ಕಟ್ಟಿ, ಪ್ರಾಚಾರ್ಯರಾದ ಶ್ರೀಮತಿ ದೀಪಾ ಬಿ. ಚಿಕ್ಕಟ್ಟಿ, ಉಪಪ್ರಾಚಾರ್ಯರಾದ ಶ್ರೀಮತಿ ಶೋಭಾ ಎಸ್. ಸ್ಥಾವರಮಠ, ಮುಖ್ಯೋಪಾಧ್ಯಾಯಿನಿ ಶ್ರೀಮತಿ ಶೋಭಾ ಭಟ್, ಶ್ರೀಮತಿ ಪುಷ್ಪಲತಾ ಎಸ್. ಬೆಲೇರಿ, ಶ್ರೀಮತಿ ರಿಯಾನಾ ಮುಲ್ಲಾ, ಪಾಲಕ–ಪೋಷಕರು, ಬೋಧಕ–ಬೋಧಕೇತರ ಸಿಬ್ಬಂದಿ ಹಾಗೂ ವಿ. ಡಿ. ಎಸ್. ಕಾಲೇಜಿನ ಎನ್. ಸಿ. ಸಿ. ಕ್ಯಾಡೆಟ್‌ಗಳು ಭಾಗವಹಿಸಿದ್ದರು.
ಕಾರ್ಯಕ್ರಮದ ನಿರೂಪಣೆಯನ್ನು ಕನ್ನಡ ಉಪನ್ಯಾಸಕರಾದ ಶ್ರೀ ಶ್ರೀಶೈಲ ಶಿ. ಬಡಿಗೇರ ಅವರು ನೆರವೇರಿಸಿದರೆ, ಸ್ವಾಗತವನ್ನು ಶಿಕ್ಷಕರಾದ ಶ್ರೀ ಗಣೇಶ ಬಡ್ನಿ ನೆರವೇರಿಸಿದರು. ಶಿಕ್ಷಕರಾದ ಶ್ರೀ ರಾಹುಲ್ ಡಿ. ಮಾಡೊಳ್ಳಿ ವಂದನಾರ್ಪಣೆ ಸಲ್ಲಿಸಿದರು.
ಕೊಲ್ಲಾಪುರದ ‘ಜಾಗೋ ಹಿಂದೂಸ್ಥಾನಿ’ ತಂಡದ ಮುಖ್ಯಸ್ಥರಾದ ಶ್ರೀ ಸುನೀಲ್ ಸುತಾರ್ ಹಾಗೂ ಶ್ರೀ ಭರತ್‌ಭೂಷಣ ಅವರ ತಂಡವು ದೇಶಭಕ್ತಿ ಗೀತೆಗಳನ್ನು ಪ್ರಸ್ತುತಪಡಿಸಿ ಪ್ರೇಕ್ಷಕರ ಮನ ಗೆದ್ದಿತು.
