ಲಕ್ಷ್ಮೇಶ್ವರ : ತಾಲೂಕಿನ ಲಕ್ಷ್ಮೇಶ್ವರ-ಶಿರಹಟ್ಟಿ ವಾಯಾ ಅಡರಕಟ್ಟಿ,ಬಟ್ಟೂರು, ಶೇಟ್ಟಿಕೆರಿ ಮಾರ್ಗದ ಅಡರಕಟ್ಟಿ ಮತ್ತು ಬಟ್ಟೂರು ಮಧ್ಯದ ಕಾಂಕ್ರೀಟ್ ರಸ್ತೆ ಎಲ್ಲೆಂದರಲ್ಲಿ ಬಿರುಕು ಬಿಟ್ಟು ಇಡಿ ರಸ್ತೆ ಅಪಾಯದ ಅಂಚಿನಲ್ಲಿದೆ.
ವರದಿ : ಪರಮೇಶ ಎಸ್ ಲಮಾಣಿ
ಅಡರಕಟ್ಟಿ – ಬಟ್ಟೂರು ಮಧ್ಯ ಕೇವಲ ಎರಡು – ಮೂರು ವರ್ಷಗಳ ಹಿಂದೆ ಲಕ್ಷಾಂತರ ರೂಪಾ ಹಣ ಕರ್ಚು ಮಾಡಿ ನಿರ್ಮಿಸಿದ್ದ, ಈ ರಸ್ತೆಯು ಕಳೆದ ಎರಡು ವರ್ಷಗಳಿಂದಲೂ ಬಿರುಕು ಬಿಟ್ಟಿದ್ದರು ಲೋಕೋಪಯೋಗಿ ಇಲಾಖೆಯವರು ಬಿರುಕು ಮುಚ್ಚಲು ಡಾಂಬರು ಸುರಿದಿದ್ದರು. ಆದರೆ ಈ ತೇಪಯ ಕೆಲಸ ಸಿಸಿ ರಸ್ತೆಗೆ ಹೊಂದಿಕೊಳ್ಳದ್ದರಿಂದ ವರ್ಷಕ್ಕಿಂತ ವರ್ಷ ಬಿರುಕು ಹೆಚ್ಚಾಗಿ ಇಡಿ ಸಿಸಿ ರಸ್ತೆಯೇ ಎರಡು ಹೊಳಾಗುವ ಹಂತ ತಲುಪಿದೆ.
ಲೋಕೋಪಯೋಗಿ ಇಲಾಖೆಗೆ ಜಿಲ್ಲಾ ಮುಖ್ಯ ರಸ್ತೆಯು ಬಿಸಿ ತುಪ್ಪವಾಗಿದ್ದು, ಅಧಿಕಾರಿಗಳು ಈ ರಸ್ತೆಯನ್ನು ನೋಡಿಯು ನೋಡದಂತೆ ಜಾನ ಕುರುಡುತನವನ್ನು ಪ್ರದರ್ಶಿಸುತ್ತಿದ್ದಾರೆ.
ಈ ರಸ್ತೆ ನಿರ್ಮಿಸಿದ ಗುತ್ತಿಗೆದಾರರು ಸಹ ಈ ರಸ್ತೆ ನಿರ್ವಹಣೆಯ ಬಗ್ಗೆ ಅಧಿಕಾರಿಗಳು ಸೇರಿದಂತೆ ಯಾರು ತಲೆ ಕೆಡಿಸಿಕೊಂಡಿಲ್ಲ. ಸರ್ಕಾರದ ಕೆಲಸ ದೇವರ ಕೆಲಸ . ಆದರೆ ಸಾರ್ವಜನಿಕ ಈ ….?
