ಮುಂಡರಗಿ: ಸಾಮಾಜಿಕ ಜವಾಬ್ದಾರಿಯ ಭಾಗವಾಗಿ ಬೆಂಗಳೂರಿನ ಸಿಡ್ವಿನ್ ಔಟೋಟೆಕ್ ಎಂಜಿನಿಯರಿಂಗ್ ಸಂಸ್ಥೆಯು ತಾಲೂಕಿನ ಮುರಡಿ ತಾಂಡಾದ ಮಾರುತಿ ನಗರದ ರುಕ್ಮಿಣಿ ಕೋಂ, ಹಾಮೇಶ ನಾಯಕ್ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ವಿಶೇಷ ಡಿಜಿಟಲ್ ಬೋರ್ಡ್, ಪ್ರಿಂಟರ್ ಹಾಗೂ ವಿದ್ಯಾರ್ಥಿಗಳಿಗೆ ಉಪಯುಕ್ತ ಆಗುವ ಇನ್ನಿತರ ಉಪಕರಣಗಳನ್ನು ಕೊಡುಗೆಯಾಗಿ ನೀಡಿದೆ.
ವರದಿ : ಪರಮೇಶ ಎಸ್ ಲಮಾಣಿ.
ಉದ್ದೇಶಿಸಿ ಮಾತನಾಡಿದ ಸಂಸ್ಥೆಯ ವ್ಯವಸ್ಥಾಪಕ
ನಿರ್ದೇಶಕರಾದ ಪ್ರವೀಣ ಪಾವಡಶೆಟ್ಟರ್, ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಗುಣಮಟ್ಟದ ವಿದ್ಯಾಭ್ಯಾಸ ಸಿಗಬೇಕು ಸಿದ್ವಿನ್ ಔಟೋಟೆಕ್ ಎಂಜಿನಿಯರಿಂಗ್ ಸಂಸ್ಥೆಯ ಪ್ರಮುಖ ಉದ್ದೇಶವಾಗಿದ್ದು, ಮುಂದಿನ ದಿನಗಳಲ್ಲಿಯೂ ಸಮಾಜಮುಖಿ ಕಾರ್ಯಗಳನ್ನು
ಮುಂದುವರಿಸುವುದಾಗಿ ತಿಳಿಸಿದರಲ್ಲದೇ, ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಉನ್ನತ ಮಟ್ಟದ ಶಿಕ್ಷಣ ಪಡೆದು ನೌಕರಿ ಪಡೆಯಬೇಕು. ಇಂಜಿನಿಯರಿಂಗ್ ಪದವಿ ಪಡೆದು ನಮ್ಮ ಕಂಪನಿಗೆ ಬಂದೃ ನೌಕರಿ ಕೊಡುತ್ತೆವೆ.
ಗ್ರಾಮೀಣ ಮಟ್ಟದ ಶಾಲೆಗಳಿಗೆ ಹೆಚ್ಚಿನ ಮೂಲಭೂತ ಸೌಕರ್ಯಗಳು ಸಿಗಬೇಕು ವಿದ್ಯಾರ್ಥಿಗಳು ಡಿಜಿಟಲ್ ಶಿಕ್ಷಣ ಪಡೆಯಬೇಕಾದರೆ ಉಪಕರಣಗಳು ಅವಶ್ಯಕತೆ ಇರುತ್ತದೆ ಹಾಗಾಗಿ ನಮ್ಮ ಸಂಸ್ಥೆಯು ಇಂತಹ ಸಾಮಾಜಿಕ ಕಾರ್ಯಗಳನ್ನು ಮಾಡುತ್ತಿದೆ ಎಂದರು.
ಗ್ರಾಮಸ್ಥರು ಹಾಗೂ ಶಾಲಾ ಆಡಳಿತ ಮಂಡಳಿ ಸಿಡ್ವೀನ್ ಔಟೋಟೆಕ್ ಎಂಜಿನಿಯರಿಂಗ್ ಸಂಸ್ಥೆಗೆ ಕೃತಜ್ಞತೆ ಸಲ್ಲಿಸಿ, ಸಂಸ್ಥೆಯ ಆಡಳಿತ ಮಂಡಳಿಗೆ ಸನ್ಮಾನಿಸಿ ಗೌರವಿಸಿದರು. ಈ ಸಹಕಾರದಿಂದ ವಿದ್ಯಾರ್ಥಿಗಳಿಗೆ ಮಹತ್ವದ ಬೆಂಬಲ ದೊರಕಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಸಂಸ್ಥೆಯ ಕೊಡುಗೆ ಸೇವಾ ಮನೋಭಾವವನ್ನು ಶ್ಲಾಘಿಸಿದರು. ಈ ಡಿಜಿಟಲ್ ಬೋರ್ಡ್ ನ ಕೊಡುಗೆಯಿಂದ ಶಾಲಾ ಮಕ್ಕಳಿಗೆ ಉತ್ತಮ ಶಿಕ್ಷಣ ದೊರಕಲಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ಸಂದರ್ಭದಲ್ಲಿ ಸಿಡ್ವಿನ್ ಔಟೋಟೆ-ಕ್ ಎಂಜಿನಿಯರಿಂಗ್ ಸಂಸ್ಥೆಯ ವ್ಯವಸ್ಥಾಪಕ
ನಿರ್ದೇಶಕ ಪ್ರವೀಣ ಈಶ್ವರ ಪಾವಡಶೆಟ್ಟರ್, ಹಣಕಾಸು ವ್ಯವಸ್ಥಾಪಕ ಮನು ಪ್ರಭಾಕರ್, ಸಿಎಸ್‌ಆರ್ ಸಮಿತಿ ಅಧ್ಯಕ್ಷ ರೇಣುಕಾ ಪಾಟೀಲ್ ಹಾಗೂ ಸಿಎಸ್‌ಆರ್ ಸಮಿತಿ ಸದಸ್ಯ ನಾಗರಾಜು ಎಸ್, ಪವನ್ ಹೊಟ್ಟಿಗೌಡರ, ಮನೀಶ ನಾಯಕ್, ಪೂಜಾ ಪಾಟೀಲ್,
ಪವನ ಹೊಟ್ಟಿ ಗೌಡರ, ಮನೀಶ್ ನಾಯಕ, ಪೂಜಾ ಪಾಟೀಲ, ಬಿಂದುಮಾಲ, ಕ್ಷೇತ್ರ ಶಿಕ್ಷಣಾಧಿಕಾರಿ ಗಂಗಾಧರ ಅಣ್ಣಿಗೇರಿ, ಗ್ರಾಮ ಪಂಚಾಯತ್ ಸದಸ್ಯರು ಶಾಲೆಯ ಎಸ್ಡಿಎಂಸಿ ಅಧ್ಯಕ್ಷರು ಸರ್ವ ಸದ್ಯಸರು ಹಾಗೂ ಊರಿನ ನಾಯಕ, ಡಾವ, ಕರಭಾರಿ ಊರಿನ ಗುರು ಹಿರಿಯರು ಶಿಕ್ಷಣ ಪ್ರೇಮಿಗಳು ಯುವಕರು ಶಾಲೆಯ ಮುಖ್ಯ ಶಿಕ್ಷಕರು, ಸಹ ಶಿಕ್ಷಕರು ಇಲಾಖೆಯ ಸಿಬ್ಬಂದಿ ವರ್ಗ ಮತ್ತಿತರಿದ್ದರು.
