ಲಕ್ಷ್ಮೇಶ್ವರ : ಸುಮಾರು ನಾಲ್ಕನೂರು ವರ್ಷಗಳ ಇತಿಹಾಸವಿರುವ ಲಕ್ಷ್ಮೇಶ್ವರ ನಗರ ವ್ಯಾಪ್ತಿಯ ಕೆಂಚಲಾಪುರದ ಬನಶಂಕರಿ ಬಡಾವಣೆಯ ಶ್ರೀ ಬನಶಂಕರಿ ದೇವಸ್ಥಾನದ ಜೀರ್ಣೋದ್ಧಾರಗೊಂಡ 7ನೇ ವರ್ಷದ ವಾರ್ಷಿಕೋತ್ಸವ ಹಾಗೂ ಮೂರನೇ ವರ್ಷದ ರಥೋತ್ಸವ ಕಾರ್ಯಕ್ರಮ ಫೆಬ್ರುವರಿ 1, 2026 ರವಿವಾರ ಭಾರತ ಹುಣ್ಣಿಮೆಯಂದು ಜರುಗಲಿದೆ ಎಂದು ಕೆಂಚಲಾಪುರ ಬನಶಂಕರಿ ಬಡಾವಣೆಯ ಶ್ರೀ ಬನಶಂಕರಿ ದೇವಿ ಸೇವಾ ಸಮಿತಿಯು ಪ್ರಕಟಣೆಯಲ್ಲಿ ತಿಳಿಸಿದೆ.
ವರದಿ : ಪರಮೇಶ ಎಸ್ ಲಮಾಣಿ.
ಆ ದಿನ ರಥೋತ್ಸವದ ಪ್ರಯುಕ್ತ ಅಭಿಷೇಕ, ಅಲಂಕಾರ ಪೂಜೆ, ಸತ್ಯನಾರಾಯಣ ಪೂಜೆ ಹಾಗೂ ಹಲವಾರು ಧಾರ್ಮಿಕ ಶೃದ್ಧಾ ಕಾರ್ಯಕ್ರಮಗಳು ಜರುಗುತ್ತವೆ. ಸಂಜೆ 5 ಗಂಟೆಗೆ ರಥೋತ್ಸವ ಜರುಗಲಿದ್ದು ಅದರ ನಂತರ ಮಹಾಪ್ರಸಾದ ನೆರವೇರುವದು.
ಮರುದಿನ ದಿನಾಂಕ ಫೆಬ್ರವರಿ 2 2026 ಸೋಮವಾರ ಸಂಜೆ 5 ಗಂಟೆಗೆ ಕಡುಬಿನ ಕಾಳಗ ಇರುತ್ತದೆ. ಇತಿಹಾಸ ಪ್ರಸಿದ್ಧ ಈ ದೇವಸ್ಥಾನದ ಜಾತ್ರಾ ಕಾರ್ಯಕ್ರಮಕ್ಕೆ ಪ್ರತಿ ವರ್ಷದಂತೆ ಭಕ್ತ ಸಮೂಹ ಅಪಾರ ಸಂಖ್ಯೆಯಲ್ಲಿ ಆಗಮಿಸಲು ಸಮಿತಿಯು ಪ್ರಕಟಣೆಯಲ್ಲಿ ತಿಳಿಸಿದೆ.
ಶಿಥಿಲಾವಸ್ತಿಯಲ್ಲಿದ್ದ ಈ ದೇವಸ್ಥಾನವನ್ನು ಏಳು ವರ್ಷಗಳ ಹಿಂದೆ ಭಕ್ತಾದಿಗಳು, ದಾನಿಗಳು, ಜನಪ್ರತಿನಿಧಿಗಳ ಸಹಾಯ ಸಹಕಾರದಿಂದ ಸುಮಾರು ಒಂದು ಕೋಟಿ ರೂಪಾಯಿ ವೆಚ್ಚದಲ್ಲಿ ಅತ್ಯಂತ ಸುಂದರವಾದ ಶಿಲೆಯಲ್ಲಿ ಈ ದೇವಸ್ಥಾನವನ್ನು ಪುನರ್ ನಿರ್ಮಿಸಿ ಲೋಕಾರ್ಪಣೆ ಮಾಡಿದ್ದನ್ನು ಈ ಸಂದರ್ಭದಲ್ಲಿ ಸ್ಮರಿಸಬಹುದು.
