Home » News » “ನಮ್ಮ ನಡೆ ಓದಿನ ಮನೆಯ ಕಡೆ” ಉಪಕ್ರಮ! ಎಸ್‌ಎಸ್‌ಎಲ್‌ಸಿ ಮಕ್ಕಳ ಮನೆಗೆ ಬಿಇಓ ಭೇಟಿ…! ಪಾಲಕ, ಪೋಷಕರ ಸಂತಸ…!

“ನಮ್ಮ ನಡೆ ಓದಿನ ಮನೆಯ ಕಡೆ” ಉಪಕ್ರಮ! ಎಸ್‌ಎಸ್‌ಎಲ್‌ಸಿ ಮಕ್ಕಳ ಮನೆಗೆ ಬಿಇಓ ಭೇಟಿ…! ಪಾಲಕ, ಪೋಷಕರ ಸಂತಸ…!

by CityXPress
0 comments

ಗದಗ : ಎಸ್ಎಸ್ಎಲ್ ಸಿ ಜೀವನ ವಿದ್ಯಾರ್ಥಿಗಳ ಜೀವನದ ಪ್ರಮುಘಟ್ಟ ಇಲ್ಲಿ ಏನಾದ ಎಡವಿದ್ರೆ ಮೇಲೆ ಏಳೋದು ಬಹಳ ಕಷ್ಟಕರವಾದ ಕೆಲಸ. ಇದೇ ರೀತಿಯ ಕಷ್ಟಗಳನ್ನು ವರ್ಷಗಳಿಂದ ಅನುಭವಿಸುತ್ತಿದ್ದಾರೆ ಶಿರಹಟ್ಟಿ ಹಾಗೂ ಲಕ್ಷ್ಮೇಶ್ವರ ತಾಲೂಕಿನ ಭಾಗದ ವಿದ್ಯಾರ್ಥಿಗಳು ಇನ್ನು ಎಸ್‌ಎಸ್‌ಎಲ್‌ಸಿ ಫಲಿತಾಂಶದ ವಿಚಾರಕ್ಕೆ ಬಂದರೆ ಹಲವು ವರ್ಷಗಳಿಂದ ರಾಜ್ಯದಲ್ಲಿ ಲಕ್ಷ್ಮೇಶ್ವರ – ಶಿರಹಟ್ಟಿ ತಾಲೂಕು ಪ್ರಥಮ ಸ್ಥಾನ ಪಡೆಯುತ್ತಿದೆ.

ವರದಿ : ಪರಮೇಶ ಎಸ್ ಲಮಾಣಿ.

ಹೌದು, ಒಂದು ಕಡೆ ತಾಲೂಕು ಬಹಳ ಜಿಲ್ಲೆಯಲ್ಲಿ ಪ್ರಮುಖ ಪಾತ್ರ ಫಲಿತಾಂಶ ವಹಿಸುತ್ತಿದೆ ಅನ್ನೋದು ದೊಡ್ಡ ಖುಷಿಯಾದರೆ ಇಲ್ಲಿನ ವಿದ್ಯಾರ್ಥಿಗಳ ಶೈಕ್ಷಣಿಕ ಬೆಳವಣಿಗೆ ಬಹಳ ದೊಟ್ಟ ಮಟ್ಟದಲ್ಲಿ ಬೆಳಿಯಬೇಕು ಅನ್ನೋದು ಮತ್ತೊಂದು ಗಂಭೀರ ವಿಷಯವಾಗಿದೆ. ಈ ವಿಚಾರದಲ್ಲಿ ಹೊಸ ಉಪಕ್ರಮ ತೆಗೆದುಕೊಂಡಿರುವ ತಾಲೂಕಿನ ವಿದ್ಯಾರ್ಥಿಗಳಿಗೆ ಹೊಸ ಚೈತನ್ಯ ನೀಡುವ ಕೆಲಸ ಮಾಡುತ್ತಿದ್ದಾರೆ.

ಮಕ್ಕಳ ಶೈಕ್ಷಣಿಕ ಬೆಳವಣಿಗೆಗೆ ಶಿಕ್ಷಕರು ಪ್ರಮುಖ ಕಾರಣರಾಗುತ್ತಾರೆ. ಆದರೆ ಅದನ್ನೂ ಮಿರಿ ಈಗ ಕ್ಷೇತ್ರ ಶಿಕ್ಷಣಾಧಿಕಾರಿಗಳೇ ಮಕ್ಕಳಿಗೆ ಪ್ರೇರಣೆ ನೀಡುತ್ತಿದ್ದಾರೆ. ಈ ಉಪಕ್ರಮ ಇಲ್ಲಿನ ಮಕ್ಕಳ ಭವಿಷ್ಯಕ್ಕೆ ಮಹತ್ವದ್ದಾಗಿದೆ. ತಾಲೂಕಿನ ಹಲವು ಸರ್ಕಾರಿ ಅಧಿಕಾರಿಗಳು ಲಂಚ,ಬೇಜಬ್ದಾರಿ ವರ್ತನೆಗೆ ಹೆಸರುವಾಸಿಯಾಗಿದ್ರೆ ಈ ಅಧಿಕಾರಿ ಮಾತ್ರ ಮಕ್ಕಳ ಮನೆಗೆ ಹಾಗೂ ಶಾಲೆಗಳಿಗೆ ಹೋಗಿ ಜ್ಞಾನೋದಯ ಮಾಡಲು ಮುಂದಾಗಿದ್ದು, ಪೋಷಕರು ಅವರಿಗೆ ವಿಶೇಷ ರೀತಿಯಲ್ಲಿ ಅಭಿನಂದಿಸುತ್ತಿದ್ದಾರೆ.

banner

ಏನಿದು “ನಮ್ಮ ನಡೆ ಓದಿನ ಮನೆ ಕಡೆ”?

ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಎಂ ನಾನಕಿ ನಾಯ್ಕ ಅವರು ಶಾಲಾ ಮುಖ್ಯೋಪಾಧ್ಯಾಯ ಅವರ ಸಹಕಾರದೊಂದಿಗೆ ಈ ಉಪಕ್ರಮ ಆರಂಭಿಸಿದ ಕೇಲವು ತಿಂಗಳಲ್ಲಿ ತಾಲೂಕಿನಲ್ಲಿ ಓದುತ್ತಿರುವ ಸಾಕಷ್ಟು ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳ ಮನೆಗೆ ಭೇಟಿ ಕೊಟ್ಟು ಅವರು ಯಾವ ಪ್ರಮಾಣದಲ್ಲಿ ಓದುತ್ತಿದ್ದಾರೆ?,ಯಾವ ವಿಷಯದಲ್ಲಿ ಹಿಂದುಳಿದಿದ್ದಾರೆ, ಅವರ ಕುಟುಂಬದ ಸಮಸ್ಯೆಗಳು ಏನು ಎಂಬಿತ್ಯಾದಿ ವಿಷಯಗಳನ್ನು ಕಲೆ ಹಾಕುತ್ತಿದ್ದಾರೆ. ಅದೂ ಸಹ ಬೆಳಗ್ಗೆ ಐದು ಗಂಟೆಯಿಂದ ಎಂಟರ ವರೆಗೆ ಹಾಗೂ ಸಂಜೆ ಆರು ಗಂಟೆಯಿಂದ ರಾತ್ರಿ ಹತ್ತು ಗಂಟೆವರೆಗೆ ಈ ವಿಶೇಷ ಕೆಲಸ ಮಾಡಿಕೊಂಡು ಬರುತ್ತಿದ್ದಾರೆ. ಇನ್ನು ಉಳಿದ ಸಮಯದಲ್ಲಿ ಅವರು ತಮ್ಮ ಕಾಯಕದಲ್ಲಿ ತೊಡಗಿದ್ದಾರೆ.

ವಿದ್ಯಾರ್ಥಿಗಳು ಬೆಳಗಿನ ಸಮಯ 5:00 ಗಂಟೆಗೆ ಎಚ್ಚರಗೊಂಡು ಓದಬೇಕಿದೆ. ಪೋಷಕರು ವಿದ್ಯಾರ್ಥಿಯು ಓದುವುದನ್ನು ದೃಢೀಕರಿಸಿಕೊಳ್ಳಬೇಕಿದೆ. ನಾನು ಓದುತ್ತಿದ್ದೇನೆ ಎಂಬ ಕಾಡನ್ನು ಭರ್ತಿ ಮಾಡಿ ವಿದ್ಯಾರ್ಥಿಯು ಪ್ರತಿ ದಿನ ಪೋಷಕರ ಸಹಿಯೊಂದಿಗೆ ತರಗತಿಯ ಶಿಕ್ಷಕರಿಗೆ ನೀಡಬೇಕಿದೆ. ಇನ್ನು ದಿನಾಲು ಸ್ವತ: ಕ್ಷೇತ್ರ ಶಿಕ್ಷಣಾಧಿಗಳೆ ತಾಲೂಕಿನ ಶಾಲೆಗಳ ಮುಖ್ಯೋಪಾಧ್ಯಾಯರಿಗೆ ಬೆಳ್ಳಿಗ್ಗೆ 5 ಗಂಟೆಗೆ ಕರೆ ಮಾಡುತ್ತಾರೆ.

ಯಾಕೆ ಈ ಉಪಕ್ರಮ ?

ಮೊದಲೇ ತಿಳಿಸಿದಂತೆ ಎಸ್‌ಎಸ್‌ಎಲ್‌ಸಿ ಗದಗ ಜಿಲ್ಲೆಯಲ್ಲಿ ಇಲ್ಲಿನ ಮಕ್ಕಳು ಉತ್ತಮ ಅಂಕ ಪಡೆಯುತ್ತಿದ್ದಾರೆ. ಅಲ್ಲದೆ ದೊಡ್ಡ ಮಟ್ಟದಲ್ಲಿ ಫೇಲ್ ಸಹ ಆಗುತ್ತಿದ್ದಾರೆ. ಇದೆಲ್ಲದಕ್ಕೂ ಮೂಲ ಕಾರಣ ಕಂಡುಕೊಂಡು ಶಿಕ್ಷಣಾಧಿಕಾರಿಗಳು, ಈಗ ಪ್ರತಿ ವಿದ್ಯಾರ್ಥಿಯ ಮನೆಗೆ ಭೇಟಿ ನೀಡುವ ಕೆಲಸ ಮಾಡುತ್ತಿದ್ದಾರೆ. ಅಂದರೆ ಮಕ್ಕಳು ಮನೆಯಲ್ಲಿ ಓದುವುದಿಲ್ಲ, ಕೆಲವು ಫೋಷಕರು ಸಹಕಾರ ನೀಡುವುದಿಲ್ಲ, ಮಕ್ಕಳಿಗೆ ಓದಲು ಸರಿಯಾದ ವ್ಯವಸ್ಥೆ ಇಲ್ಲ ಎಂಬೆಲ್ಲಾ ಮಾಹಿತಿ ಪಡೆದಕೊಂಡ ಅವರು ಈಗ ಹಂತ ಹಂತವಾಗಿ ಎಲ್ಲರ ಮನೆಗೆ ಭೇಟಿ ನೀಡಿ ಅವರ ಸಮಸ್ಯೆಗಳನ್ನು ಆಲಿಸುವುದು ಮಾತ್ರವಲ್ಲದೆ ಯಾವ ವಿಷಯಗಳಲ್ಲಿ ಅವರು ಹಿಂದುಳಿದಿದ್ದಾರೆ ಅನ್ನೋದನ್ನು
ಕಂಡುಕೊಂಡು ಅವರಿಗೆ ವಿಶೇಷ ತರಗತಿಗಳನ್ನು ಆಯೋಜನೆ ಮಾಡುತ್ತಿದ್ದಾರೆ.

ಈ ಕಾಯಕ ಮಾಡುವ ಶಿಕ್ಷಣಾಧಿಕಾರಿಗಳು, ತಮ್ಮ ಜತೆ ಬರುವ ಪುರುಷ ಶಿಕ್ಷಕರ ಜೊತೆಗೆ ಶಾಲೆಯಲ್ಲೇ ವಾಸ್ತವ್ಯ ಇರುತ್ತಾರೆ. ಆ ದಿನ ಆರು ಗಂಟೆ ನಂತರ ಆ ಊರಿನ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳ ಮನೆಗೆ ಭೇಟಿ ನೀಡುತ್ತಾರೆ. ಅವರ ಕುಟುಂಬದ ವ್ಯವಸ್ಥೆ ಹಾಗೂ ವಿದ್ಯಾರ್ಥಿಯ ಶೈಕ್ಷಣಿಕ ಪ್ರಗತಿಯ ಬಗ್ಗೆ ಪರಿಶೀಲನೆ ನಡೆಸುತ್ತಾರೆ. ಇದಾದ ಬಳಿಕ ಶಿಕ್ಷಕರಿಗೆ ಮಾರ್ಗದರ್ಶನ ನೀಡುತ್ತಾರೆ.

ಹೆಚ್ಚುವರಿ ತರಗತಿ ಜೊತೆಗೆ ವಿಶೇಷ ತರಗತಿ ತೆಗೆದುಕೊಳ್ಳಲಾಗುತ್ತಿದೆ. ಅಲ್ಲದೆ ಪೂರ್ವ ತಯಾರಿ ಪರೀಕ್ಷೆಗಳನ್ನೂ ಸಹ ಆಗಾಗ್ಗೆ ನಡೆಸಲಾಗುತ್ತಿದ್ದು, ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಯನ್ನು ಪರಿಶೀಲನೆ ಮಾಡಲಾಗುತ್ತಿದೆ. ಇಷ್ಟೇ ಅಲ್ಲದೆ ಶಾಲಾ ಶಿಕ್ಷಕರ ಜೊತೆಗೆ ಮೀಟಿಂಗ್ ಮಾಡಿ ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ಧಿಗೆ ಏನೆಲ್ಲಾ ಅಗತ್ಯ ಇದೆಯೋ ಅದನ್ನು ಪೂರೈಸುವ ಕೆಲಸ ಮಾಡಲಾಗುತ್ತಿದೆ. ಈ ವಿಶೇಷ ಉಪಕ್ರಮ ತಾಲೂಕಿನ ಪೋಷಕರ ಮುಖದಲ್ಲಿ ಸಂತಸ ಮೂಡುವಂತೆ ಮಾಡಿದೆ.

ಕೆಲವು ಮಕ್ಕಳು ಪೋಷಕರ ಮಾತನ್ನು ಆಲಿಸುವುದಿಲ್ಲ. ಆದರೆ, ಶಿಕ್ಷಣಾಧಿಕಾರಿಗಳೇ ಮನೆ ಮನೆಗೆ ಹೋಗಿ ಅವರನ್ನು ಎಚ್ಚರಿಸುತ್ತಿರುವ ಕಾರಣಕ್ಕೆ ಭಯ ಹಾಗೂ ಭಕ್ತಿಯೊಂದಿಗೆ ಗದಗ ಜಿಲ್ಲೆಯಲ್ಲೇ ಮೊದಲು! ಅಖಂಡ ಶಿರಹಟ್ಟಿ ತಾಲೂಕಿನಲ್ಲಿ “ನಮ್ಮ ನಡೆ ಓದಿನ ಮನೆ ಕಡೆ” ಉಪಕ್ರಮ! ಎಸ್‌ಎಸ್‌ಎಲ್‌ಸಿ ಮಕ್ಕಳ ಮನೆಯ ಭೇಟಿಗೆ ಬಿಇಓ ಆಸಕ್ತಿ ತೋರಿಸುತ್ತಿದ್ದಾರೆ ಅನ್ನೋದು ಇಲ್ಲಿನ ಪೋಷಕರ ಅಭಿಪ್ರಾಯವಾಗಿದೆ.

You may also like

Leave a Comment

Soledad is the Best Newspaper and Magazine WordPress Theme with tons of options and demos ready to import. This theme is perfect for blogs and excellent for online stores, news, magazine or review sites.

Buy Soledad now!

Edtior's Picks

Latest Articles

Website designed by Dreamweb
error: Content is protected by Dreamweb