ಗದಗ: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ರಿಜಿನಲ್ ಬಿಜಿನೆಸ್ ಆಫೀಸ್ – 4 ಆರ್ ಬಿ ಓ , ಇವರ ಆಶ್ರಯದಲ್ಲಿ ಬ್ಯಾಂಕ್ ಉದ್ಯೋಗಿಗಳಿಗಾಗಿ ಆಯೋಜಿಸಲಾಗಿದ್ದ ಒಂದು ದಿನಗಳ ಆರ್ ಎಂ ಕಪ್ ಕ್ರಿಕೆಟ್ ಪಂದ್ಯಾವಳಿ ಲಕ್ಷ್ಮೇಶ್ವರದ ಉಮಾ ಮಹಾ ವಿದ್ಯಾಲಯ ಮೈದಾನದಲ್ಲಿ ಯಶಸ್ವಿಯಾಗಿ ನಡೆಯಿತು.
ವರದಿ : ಪರಮೇಶ ಎಸ್ ಲಮಾಣಿ.
ಈ ಕ್ರೀಡಾಕೂಟದಲ್ಲಿ ಗದಗ ಮತ್ತು ಹಾವೇರಿ ತಂಡಗಳು ಭಾಗವಹಿಸಿ ಮೂರು ಪಂದ್ಯಗಳ ಸರಣಿಯಲ್ಲಿ ಆಡಿ ಕ್ರೀಡಾಭಿಮಾನಿಗಳ ಗಮನ ಸೆಳೆದವು.
ಪಂದ್ಯಾವಳಿಯನ್ನು ಹರೀಶ, ಅಶೋಕ, ವೀರೇಶ, ನಾಗರಾಜ ಅವರ ನಾಯಕತ್ವದಲ್ಲಿ ಅತ್ಯಂತ ಶಿಸ್ತಿನಿಂದ ಹಾಗೂ ವ್ಯವಸ್ಥಿತವಾಗಿ ಆಯೋಜಿಸಲಾಗಿದ್ದು, ಸಮಾರೋಪ ಸಮಾರಂಭದಲ್ಲಿ ಉಪಸ್ಥಿತರಿದ್ದ ಗಣ್ಯರು ಅವರ ಸಂಘಟನಾ ಸಾಮರ್ಥ್ಯ ಮತ್ತು ನಾಯಕತ್ವ ಗುಣಗಳನ್ನು ಮನದಟ್ಟುಮಾಡಿಕೊಂಡು ಶ್ಲಾಘಿಸಿದರು. ಈ ಕ್ರೀಡಾ ಕೂಟವನ್ನು ಯಶಸ್ವಿಗೊಳಿಸಿದಲ್ಲಿ ಅವರ ಪಾತ್ರ ಅತ್ಯಂತ ಮಹತ್ವದ್ದಾಗಿದೆ ಎಂದು ಗಣ್ಯರು ಅಭಿಪ್ರಾಯಪಟ್ಟರು.
ಪಂದ್ಯಾವಳಿಯ ಮೂರು ಪಂದ್ಯಗಳನ್ನು ಹಾವೇರಿ ಹರಿಕೆನ್ಸ್ ತಂಡ ಗದಗ ಗ್ಲಾಡಿಯೇಟರ್ ತಂಡವನ್ನು ಮಣಿಸಿ ಚಾಂಪಿಯನ್ ಪಟ್ಟ ಅಲಂಕರಿಸಿ ಟ್ರೋಫಿ ಮುಡಿಗೇರಿಸಿಕೊಂಡಿತು.
ವೈಯಕ್ತಿಕ ಪ್ರಶಸ್ತಿಗಳಲ್ಲಿ, ಮೂರು ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿದ ಗದಗ ಗ್ಲಾಡಿಯೇಟರ್ ತಂಡದ ವೀರಭದ್ರ .ಸಿ ‘ಅತ್ಯುತ್ತಮ ಬ್ಯಾಟ್ಸ್ ಮನ್’ ಪ್ರಶಸ್ತಿಗೆ ಭಾಜನರಾದರು. ಹಾವೇರಿ ಹರಿಕೇನ್ಸ್ ತಂಡದ ಪ್ರತಾಪ್ ಅವರಿಗೆ ‘ಅತ್ಯುತ್ತಮ ಬಾಲರ್’ ಪ್ರಶಸ್ತಿ ಲಭಿಸಿತು. ಅದೇ ತಂಡದ ಮಹೇಶ ಅವರಿಗೆ ‘ಸರಣಿ ಶ್ರೇಷ್ಠ ಪ್ರಶಸ್ತಿ
ಪಂದ್ಯಾವಳಿ ಬಹುಮಾನ ವಿತರಣಾ ಸಮಾರಂಭ ಹಾಗೂ ವಂದನಾರ್ಪಣೆಯೊಂದಿಗೆ ಸಮಾರೋಪಗೊಂಡಿತು. ಈ ಸಂದರ್ಭದಲ್ಲಿ ನಾಗರಾಜ ಅಡವಿ ಅವರು ಪಂದ್ಯಾವಳಿ ಯಶಸ್ಸಿಗೆ ನೇರವಾಗಿ ಹಾಗೂ ಪರೋಕ್ಷವಾಗಿ ಶ್ರಮಿಸಿದ ಎಲ್ಲಾ ಸಹಯೋಗಿಗಳಿಗೆ ಹೃತ್ಪೂರ್ವಕ ಧನ್ಯವಾದಗಳನ್ನು ತಿಳಿಸಿದರು.
ಈ ವರ್ಷದ ಆರ್.ಎಂ ಕಪ್ ಕ್ರೀಡಾಕೂಟವು ಅತ್ಯಂತ ಯಶಸ್ವಿಯಾಗಿ ಮುಕ್ತಾಯಗೊಂಡಿದ್ದು, ಕ್ರೀಡಾಭಿಮಾನಿಗಳಿಂದ ವ್ಯಾಪಕ ಪ್ರಶಂಸೆಗೆ ಪಾತ್ರವಾಯಿತು.
ಟ್ರೋಫಿ ವಿತರಣಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಲಕ್ಷ್ಮೇಶ್ವರ ಸ್ಟೇಟ್ ಬ್ಯಾಂಕ್ ನ ಮ್ಯಾನೇಜರ್ ಅಶೋಕ, ಹರೀಶ, ವೀರೇಶ ಹಿರೇಮಠ, ನಾಗರಾಜ ಅಡವಿ ಮತ್ತು ಮತ್ತಿತರಿದ್ದರು.
