ಗದಗ : ದೈಹಿಕವಾಗಿ ಸದೃಢರಾದಾಗ ಮಾತ್ರ ಶೈಕ್ಷಣಿಕ ಸಾಧನೆ ಮಾಡಲು ಸಾಧ್ಯ. ಪಾಠದ ಜೊತೆಗೆ ತಮ್ಮ ಆಸಕ್ತಿ ಕ್ರೀಡಾ ಕ್ಷೇತ್ರದ ಕಡೆಗೂ ಗಮನ ಹರಿಸಬೇಕು ವಿದ್ಯಾರ್ಥಿಗಳ ಕ್ರೀಡಾಸಕ್ತಿ ದೇಶವು ಕ್ರೀಡೆಯಲ್ಲಿ ಇನ್ನೂ ಹೆಚ್ಚಿನ ಸಾಧನೆ ಮಾಡುವಲ್ಲಿ ಪೂರಕವಾಗಲಿ ಎಂದು ಗ್ರಾಮ ಪಂಚಾಯತಿ ಸದಸ್ಯ ಪದ್ಮರಾಜ ಪಾಟೀಲ್ ಹೇಳಿದರು.
ವರದಿ : ಪರಮೇಶ ಎಸ್ ಲಮಾಣಿ.
ಅವರು ಲಕ್ಷ್ಮೇಶ್ವರ ತಾಲೂಕಿನ ಒಡೆಯರ ಮಲ್ಲಾಪೂರ ಗ್ರಾಮದ ಮೂರಾರ್ಜಿ ದೇಸಾಯಿ ವಸತಿ ಶಾಲೆಯ ವಾರ್ಷಿಕ ಕ್ರೀಡಾಕೂಟ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.
ಆರೋಗ್ಯಕರ ಮತ್ತು ಕ್ರಿಯಾಶೀಲರಾಗಲು ಕ್ರೀಡೆ ನೆರವಾಗುತ್ತದೆ. ಕ್ರೀಡೆ ಸೋಲೇ ಗೆಲುವಿನ ಮೆಟ್ಟಿಲು ಎಂಬ ಅರಿವು ಮೂಡಿಸುತ್ತದೆ. ಆದ್ದರಿಂದ ವಿದ್ಯಾರ್ಥಿಗಳಲ್ಲಿ ಧೈರ್ಯ, ಏಕಾಗ್ರತೆ ಮತ್ತು ಸ್ಪರ್ಧಾ ಮನೋಭಾವನೆಯನ್ನು ಬೆಳೆಸುತ್ತದೆ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಲೆ ಪ್ರಾಚಾರ್ಯರಾದ ನಾಗರಾಜ ಕಳಸಾಪೂರ ವಿದ್ಯಾರ್ಥಿಗಳು ಗೆಲ್ಲುವ ಉತ್ಸಾಹದಿಂದ ಪಾಲ್ಗೊಂಡು, ಸೋಲು ಗೆಲುವನ್ನು ಸಮಾನವಾಗಿ ಸ್ವೀಕರಿಸಿ ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.
ವಿದ್ಯಾರ್ಥಿಗಳಿಗೆ ಕ್ರೀಡಾ ಪ್ರತಿಭೆಯನ್ನು ಪ್ರದರ್ಶಿಸಲು ಕ್ರೀಡಾಕೂಟ ಏರ್ಪಡಿಸಲಾಗಿದ್ದು, ಇದು ಕ್ರೀಡಾ ಸಾಧನೆ ಮಾಡುವಲ್ಲಿ ಸ್ಫೂರ್ತಿಯಾಗಲಿ ಎಂದರು.
ನಂತರ ಮಾತನಾಡಿದ ಗ್ರಾಮ ಪಂಚಾಯತಿ ಸದಸ್ಯೆ ನಾಗರತ್ನ ಕಡಾರಿ ವಿದ್ಯಾರ್ಥಿಗಳು ಸಮಾನ ಮನಸ್ಕಾರರಾಗಿ ಆಡಿ ಉತ್ತಮ ಕ್ರೀಡಾಪಟುಗಳಾಗಿ ಹೊರಹೊಮ್ಮಬೇಕೆಂದರು.
ಕಾರ್ಯಕ್ರಮದ ನಿರೂಪಣೆ ಸಿಮಾ ಮಾಡಳ್ಳಿ, ಸ್ವಾಗತ ಕಾರ್ಯಕ್ರಮ ಸುನೀಲ್ ತಳ್ಳಳ್ಳಿ, ವಂದನಾರ್ಪಣೆಯನ್ನು ರೂಪಾ ಮನ್ನಂಗಿ ನೆರವೇರಿಸಿದರು.
ಸಂದರ್ಭದಲ್ಲಿ ಕ್ರೀಡಾ ನಿರ್ಣಾಯಕರಾಗಿ ಕೆ.ವಾಯ್.ಮುದಗಲ್, ವಿರೇಶ ಕಮ್ಮಾರ, ಉಪ ಪ್ರಾಂಶುಪಾಲರಾದ ಎಂ.ಎ.ಡಂಬಳ, ದೈಹಿಕ ಶಿಕ್ಷಕರಾದ ಸಿದ್ದಿರಾಜ ಬೇಟಗೇರಿ, ಸಹ ಶಿಕ್ಷಕರಾದ ಎಸ್.ಕೆ ನಧಾಫ್, ರೂಪಾ ಮನ್ನಂಗಿ, ವಿಜಯಲಕ್ಷ್ಮೀ ರಾಠೋಡ ಡಾ|| ಅರ್ಜುನ ವಟಾರ್, ಮುಕ್ತಾ ಆದಿ, ಸಿ.ಎನ್ ನಾವಿ, ಪ್ರವೀಣ ಗಾಯಕರ್, ಫಾರೂಕ್ ಹಮಸಾಗರ, ಲಕ್ಷ್ಮೀ ಡೊಳ್ಳಿನ ಮತ್ತಿತರಿದ್ದರು.
