Home » News » ಸಿಎಂ ಗುದ್ದಾಟದ ಮಧ್ಯೆ ‘ಟಾಕ್ಸಿಕ್’ ಶೈಲಿಯಲ್ಲಿ ಮೂರನೇ ವ್ಯಕ್ತಿಯ ಎಂಟ್ರಿ: AI ವಿಡಿಯೋ ಮೂಲಕ HDK ರಾಜಕೀಯ ಸಂದೇಶ..

ಸಿಎಂ ಗುದ್ದಾಟದ ಮಧ್ಯೆ ‘ಟಾಕ್ಸಿಕ್’ ಶೈಲಿಯಲ್ಲಿ ಮೂರನೇ ವ್ಯಕ್ತಿಯ ಎಂಟ್ರಿ: AI ವಿಡಿಯೋ ಮೂಲಕ HDK ರಾಜಕೀಯ ಸಂದೇಶ..

by CityXPress
0 comments

ಬೆಂಗಳೂರು:
ಯಶ್ ಅಭಿನಯದ ‘ಟಾಕ್ಸಿಕ್’ ಸಿನಿಮಾದ ಟ್ರೇಲರ್ ಸದ್ಯ ಸಿನಿಪ್ರಿಯರಲ್ಲಿ ಭಾರೀ ಹಲ್‌ಚಲ್ ಎಬ್ಬಿಸಿರುವ ನಡುವೆ, ಅದೇ ಶೈಲಿಯನ್ನು ಅನುಸರಿಸಿ ಜೆಡಿಎಸ್ ನಾಯಕ ಹಾಗೂ ಸಂಸದ ಎಚ್.ಡಿ.ಕುಮಾರಸ್ವಾಮಿ ಅವರನ್ನು ಕೇಂದ್ರಬಿಂದು ಮಾಡಿಕೊಂಡು ನಿರ್ಮಿಸಲಾದ AI ಆಧಾರಿತ ರಾಜಕೀಯ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್ ಆಗಿದೆ. ಈ ವಿಡಿಯೋ ರಾಜ್ಯ ರಾಜಕೀಯ ವಲಯದಲ್ಲಿ ಹೊಸ ಚರ್ಚೆಗೆ ನಾಂದಿ ಹಾಡಿದೆ.

🖋ವರದಿ: ಮಹಲಿಂಗೇಶ್ ಹಿರೇಮಠ. ಗದಗ

ವಿಡಿಯೋದಲ್ಲೇ ಏನಿದೆ..?

ವಿಡಿಯೋ ಆರಂಭದಲ್ಲೇ,
‘We want to loose this state… peacefully’ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಡೈಲಾಗ್ ಖಡತ್ತಾಗಿ ಹೇಳುವ ದೃಶ್ಯ ಕಾಣಿಸುತ್ತದೆ. ಇದಕ್ಕೆ ತಕ್ಷಣವೇ ಸಿಎಂ ಸಿದ್ಧರಾಮಯ್ಯ, ಅದೇ ಹಿರೋಯಿಸಂ ಶೈಲಿಯಲ್ಲಿ ‘He’ll return to state politics?’
ಎಂದು ಪ್ರತಿಕ್ರಿಯೆ ನೀಡುತ್ತಾರೆ.
ಇದಕ್ಕೆ ಮುಂದುವರೆದು ಡಿಕೆಶಿ, ‘I don’t think so’ ಎಂದು ಉತ್ತರಿಸುತ್ತಾರೆ. ತಕ್ಷಣವೇ ದೃಶ್ಯ ತಿರುವು ಪಡೆಯುತ್ತದೆ. ಪುಸ್ತಕದ ಪುಟಗಳು ವೇಗವಾಗಿ ತಿರುಗುತ್ತವೆ. ಕಾರೊಂದು ಜೋರಾಗಿ ಬಂದು ಹಾರನ್ ಹಾಕುತ್ತಾ ಬ್ರೇಕ್ ಹಾಕುತ್ತದೆ.

banner

ಕಾರಿನ ಬಾಗಿಲು ತೆರೆದು, ಬಿಳಿ ಲುಂಗಿ ಧರಿಸಿ ಸ್ಟೈಲಿಶ್ ಆಗಿ ವ್ಯಕ್ತಿಯೊಬ್ಬರು ಎಂಟ್ರಿ ಕೊಡುತ್ತಾರೆ.ಈ ದೃಶ್ಯವನ್ನು ಸಿದ್ಧರಾಮಯ್ಯ ಹಾಗೂ ಡಿಕೆಶಿ ಇಬ್ಬರೂ ಕುತೂಹಲದಿಂದ ವೀಕ್ಷಿಸುತ್ತಿರುವ ನಡುವೆಯೇ, ಏಕಾಏಕಿ ಬಾಂಬ್ ಬ್ಲಾಸ್ಟ್ ಸಂಭವಿಸುತ್ತದೆ. ಸ್ಫೋಟದ ಹೊಡೆತಕ್ಕೆ ಕೆಳಗೆ ಬಿದ್ದಿರುವ ಡಿಕೆಶಿ, ‘He wasn’t supposed to be here’ ಎಂದು ಆತಂಕದಿಂದ ಹೇಳುವ ದೃಶ್ಯ ಕಾಣಿಸುತ್ತದೆ. ಅದೇ ಕ್ಷಣದಲ್ಲಿ, ಫೈರ್ ಸ್ಕ್ರೀನ್ ಹಿನ್ನೆಲೆಯೊಂದಿಗೆ ಎಚ್.ಡಿ.ಕುಮಾರಸ್ವಾಮಿ ಅವರ ಗಂಭೀರ ಲುಕ್ ಪ್ರದರ್ಶಿತವಾಗುತ್ತದೆ. ಕಪ್ಪು ಕನ್ನಡಕ ಧರಿಸಿರುವ ಕುಮಾರಸ್ವಾಮಿ,
‘Dad is Home’ ಎಂದು ಡೈಲಾಗ್ ಹೊಡೆಯುವ ಮೂಲಕ ಸ್ಕ್ರೀನ್ ಮೇಲೆ
‘HDK – THE WAIT ENDS IN – 2028’
ಎಂಬ ಬರಹದೊಂದಿಗೆ ವಿಡಿಯೋ ಮುಕ್ತಾಯಗೊಳ್ಳುತ್ತದೆ.

ತೀಕ್ಷ್ಣ ಇಂಗ್ಲಿಷ್ ಡೈಲಾಗ್‌ಗಳು, ಗಾಢ ಹಿನ್ನೆಲೆ, ಕತ್ತಲೆಯ ವಾತಾವರಣ ಮತ್ತು ಆಕ್ರಮಣಕಾರಿ ದೃಶ್ಯ ಸಂಯೋಜನೆಯ ಮೂಲಕ, ‘ಟಾಕ್ಸಿಕ್’ ಸಿನಿಮಾದ ಟ್ರೇಲರ್‌ನಂತೆಯೇ ಸಸ್ಪೆನ್ಸ್, ಗಂಭೀರತೆ ಮತ್ತು ರಾಜಕೀಯ ಸಂದೇಶಗಳನ್ನು ಒಟ್ಟುಗೂಡಿಸುವ ಪ್ರಯತ್ನ ಈ ವಿಡಿಯೋದಲ್ಲಿದೆ. ವಿಶೇಷವಾಗಿ, ಯಶ್ ಬಾಂಬ್ ಬ್ಲಾಸ್ಟ್ ಮೂಲಕ ಎಂಟ್ರಿ ಕೊಡುವ ಶೈಲಿಯನ್ನು ನೆನಪಿಸುವಂತೆ ಕುಮಾರಸ್ವಾಮಿ ಅವರ ಎಂಟ್ರಿಯನ್ನು ಚಿತ್ರಿಸಲಾಗಿದೆ.
ಕೊನೆಯಲ್ಲಿ ಕಾಣಿಸುವ “Dad is home”
ಎಂಬ ಸಂದೇಶ ಮತ್ತು
“2028 – HDK” ಎನ್ನುವ ಸೂಚನೆ, ಮುಂದಿನ ವಿಧಾನಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡ ತಂತ್ರಾತ್ಮಕ ರಾಜಕೀಯ ಸಂದೇಶ ಎನ್ನಲಾಗುತ್ತಿದೆ.

ಈ ವಿಡಿಯೋ ವೈರಲ್ ಆಗುತ್ತಿರುವ ಸಂದರ್ಭದಲ್ಲೇ, ರಾಜ್ಯ ರಾಜಕೀಯದಲ್ಲಿ ಮತ್ತೊಂದು ಮಹತ್ವದ ಚರ್ಚೆ ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಿದೆ. ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ತಮ್ಮ ಮುಖ್ಯಮಂತ್ರಿ ಸ್ಥಾನವನ್ನು ಡಿಸಿಎಂ ಡಿ.ಕೆ.ಶಿವಕುಮಾರ್ ಅವರಿಗೆ ಬಿಟ್ಟುಕೊಡಲಿದೆಯೇ? ಎನ್ನುವ ಪ್ರಶ್ನೆ ಕಾಂಗ್ರೆಸ್ ವಲಯದಲ್ಲಿ ಬಿಸಿಬಿಸಿ ಚರ್ಚೆಯ ವಿಷಯವಾಗಿರುವ ಹಿನ್ನೆಲೆಯಲ್ಲೇ, ಕುಮಾರಸ್ವಾಮಿ ಅವರ ಈ ವಿಡಿಯೋ ಎಂಟ್ರಿ ರಾಜ್ಯ ರಾಜಕೀಯದ ಅರ್ಥಕತೆಯನ್ನು ಮತ್ತಷ್ಟು ಗಟ್ಟಿಗೊಳಿಸಿದೆ.

ಒಂದು ವೇಳೆ, ರಾಜಕೀಯ ವಿಶ್ಲೇಷಣೆ‌ ಮಾಡುವದಾದರೆ, ಇದು ಕೇವಲ ಒಂದು ಸಿನೆಮ್ಯಾಟಿಕ್ ವಿಡಿಯೋ ಮಾತ್ರವಲ್ಲ; ಜೆಡಿಎಸ್ ಪಕ್ಷದ ಭವಿಷ್ಯದ ರಾಜಕೀಯ ದಿಕ್ಕು ಹಾಗೂ ಕುಮಾರಸ್ವಾಮಿ ಅವರ ರಾಜ್ಯ ರಾಜಕೀಯಕ್ಕೆ ಮರುಪ್ರವೇಶದ ಸಂಕೇತವಾಗಿರಬಹುದೆಂಬ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ. AI ತಂತ್ರಜ್ಞಾನ ಬಳಸಿ ಸಿನೆಮಾ ಮತ್ತು ರಾಜಕೀಯವನ್ನು ಮಿಶ್ರಣ ಮಾಡುವ ಹೊಸ ಪ್ರಯೋಗವಾಗಿ ಈ ವಿಡಿಯೋ ಗಮನ ಸೆಳೆಯುತ್ತಿದೆ.

ಇನ್ಸ್ಟಾಗ್ರಾಂ ಖಾತೆ ಬಗ್ಗೆ ಸ್ಪಷ್ಟತೆ ಇಲ್ಲ..!

ಗಮನಾರ್ಹ ಸಂಗತಿಯೆಂದರೆ, ಈ ವಿಡಿಯೋ ‘Kumaraswamy for CM’ ಎಂಬ ಇನ್ಸ್ಟಾಗ್ರಾಂ ಖಾತೆಯಿಂದ ಹರಿಬಿಡಲಾಗಿದೆ. ಆದರೆ ಈ ಖಾತೆ ಎಚ್.ಡಿ.ಕುಮಾರಸ್ವಾಮಿ ಅವರ ಅಧಿಕೃತ ಸಾಮಾಜಿಕ ಮಾಧ್ಯಮ ಖಾತೆಯೇ ಅಥವಾ ಬೆಂಬಲಿಗರೊಬ್ಬರು ನಡೆಸುತ್ತಿರುವ ಖಾತೆಯೇ ಎಂಬ ಬಗ್ಗೆ ಸದ್ಯಕ್ಕೆ ಯಾವುದೇ ಅಧಿಕೃತ ಸ್ಪಷ್ಟತೆ ಲಭ್ಯವಾಗಿಲ್ಲ. ಈ ಅಂಶವೂ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಕಾರಣವಾಗಿದೆ.

ಒಟ್ಟಾರೆ, ‘ಟಾಕ್ಸಿಕ್’ ಟ್ರೇಲರ್ ಶೈಲಿಯಲ್ಲಿ ಸಿದ್ಧಗೊಂಡಿರುವ ಈ AI ಆಧಾರಿತ ರಾಜಕೀಯ ವಿಡಿಯೋ, ಸದ್ಯದ ಕರ್ನಾಟಕ ರಾಜಕೀಯ ನಾಯಕತ್ವದ ಕುರಿತ ಚರ್ಚೆಗಳಿಗೆ ಹೊಸ ತಿರುವು ನೀಡಿದ್ದು, 2028ರ ಚುನಾವಣಾ ರಾಜಕೀಯಕ್ಕೆ ಈಗಲೇ ಕೌಂಟ್‌ಡೌನ್ ಆರಂಭವಾಗಿದೆ ಎಂಬ ಸಂದೇಶವನ್ನು ಸಾರುತ್ತಿದೆ.

You may also like

Leave a Comment

Soledad is the Best Newspaper and Magazine WordPress Theme with tons of options and demos ready to import. This theme is perfect for blogs and excellent for online stores, news, magazine or review sites.

Buy Soledad now!

Edtior's Picks

Latest Articles

Website designed by Dreamweb
error: Content is protected by Dreamweb