ಲಕ್ಷ್ಮೇಶ್ವರ: ತಾಲೂಕಿನ ಶಿಗ್ಲಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿಗೆ ನಡೆದ ಚುನವಣೆಯಲ್ಲಿ ನಿರ್ದೇಶಕರುಗಳು ಅವಿರೋಧ ಹಾಗೂ ಚುನಾಯಿತರಾಗಿ ಆಯ್ಕೆಯಾದರು.
ವರದಿ : ಪರಮೇಶ ಎಸ್ ಲಮಾಣಿ.
ಆಯ್ಕೆಯಾದ ಪದಾದಿಕಾರಿಗಳು ಮಾತನಾಡಿ, ಸ್ಪರ್ಧಾತ್ಮಕ ಆರ್ಥಿಕ ಸನ್ನಿವೇಶದಲ್ಲಿ ಸಹಕಾರಿ ಸಂಸ್ಥೆಗಳು ವೃತ್ತಿಪರತೆ, ತಾಂತ್ರಿಕ ಅಳವಡಿಕೆ ಹಾಗೂ ಅನ್ವೇಷಣೆಗಳಿಗೆ ಆದ್ಯತೆ ನೀಡಬೇಕು. ಶಿಗ್ಲಿಯ ಈ ಸಂಘವು ಹಲವು ವರ್ಷಗಳ ಹಿಂದೆ ಪ್ರಾರಂಭವಾದಾಗಿ ಇಲ್ಲಿಯವರೆ ಅನೇಕ ವರ್ಷಗಳ ಕಾಲ ಅವಿರೋಧವಾಗಿ ಆಡಳಿತ ಮಂಡಳಿ ಆಯ್ಕೆಯಾಗುತ್ತಾ ಬಂದಿದೆ. ಎಲ್ಲ ಸಹಕಾರ ಸಂಘಗಳು ಅಭಿವೃದ್ಧಿ ಗೆ ಒತ್ತು ನೀಡಿ ಗ್ರಾಮದ ಎಲ್ಲರೂ ಅವಿರೋಧ ಅಥವಾ ಚುನಾಯಿತವಾಗಿ ಆಯ್ಕೆ ಮುಖಾಂತರ ಆಡಳಿತ ಮಂಡಳಿ ರಚಿಸಿಕೊಂಡು ಕಾರ್ಯನಿರ್ವಹಿಸಿದಲ್ಲಿ ಪ್ರತಿಯೊಂದು ಸಂಘಗಳು ನಿರೀಕ್ಷಿಸಿದ ಯಶಸ್ಸು ಗಳಿಸಲು ಸಾಧ್ಯವಿದೆ ಎಂದು ಹೇಳಿದರು.
ಸಂಘವು ರೈತರು, ಮಹಿಳೆಯರು, ಯುವಕರು ಮತ್ತು ಸಣ್ಣ ವ್ಯಾಪಾರಿಗಳಿಗೆ ಅನಕೂಲವಾಗುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸಿ ಉತ್ತಮ ಸಂಘ ಎಂದು ರಾಜ್ಯ ಮಟ್ಟದಲ್ಲಿ ಗುರುತಿಸಿಕೊಂಡಿದೆ.
ಸತತ 25 ವರ್ಷಗಳಿಂದ ಲಾಭಗಳಿಸುತ್ತಾ ಸದಸ್ಯರಿಗೆ ಪ್ರತಿ ವರ್ಷ ಡಿವಿಡಂಡ್ ನೀಡುತ್ತಾ ಸಂಘದ ಲಾಭದಲ್ಲಿ 3.20 ಎಕರೆ ಜಮೀನು ಖರೀದಿಸಿ ಸಾವಯವ ಕೃಷಿಗೆ ಆದ್ಯತೆ ನೀಡುತ್ತಿರುವದಲ್ಲದೆ ಕಾಲಕಾಲಕ್ಕೆ ಸದಸ್ಯರ ಅನುಕೂಲಕ್ಕೆ ಉಚಿತ ಆರೋಗ್ಯ ಶಿಬಿರ ನಡೆಸುತ್ತಾ ಉಳಿದ ಸಂಘಗಳಿಗೆ ಮಾದರಿಯಾಗಿದೆ ಎಂದು ಹೇಳಿದರು.
ಬಿನ್ ಸಾಲಗಾರರಲ್ಲಿ ಅವಿರೋಧ ಆಯ್ಕೆಯಾದ ಹಿಂದುಳಿದ ವರ್ಗ ಅ ಮಿಸಲಿಂದ ಹುಸೇನಸಾಬ ಗೂಡೂರ, ಬ ವರ್ಗದಿಂದ ನಿಂಗಪ್ಪ ದಾನಪ್ಪನವರ್, ಮಹಿಳಾ ಮಿಸಲಿಂದ ದ್ಯಾಮವ್ವ ಕರ್ಜಗಿ, ಕಮಲವ್ವ ಬಂಡಿವಾಡ ಆಯ್ಕೆಯಾಗಿದ್ದು,
ಸಾಮನ್ಯ ಸಾಲಗಾರ ಕ್ಷೇತ್ರದ ಚುನಾವಣೆಯಲ್ಲಿ ಅಶೋಕ ಹುಲಗೂರ(134) ಚನ್ನಪ್ಪ ಹುನಗುಂದ (126) ನಾಗಪ್ಪ ತೋಟದ ( 108) ರಾಜು ಎತ್ತಿನಮನಿ(102) ಸುರೇಶ ಗೋದಿ (89) ಮತದಿಂದ ಚುನಾಯಿತರಾದರೆ, ಪರಿಶಿಷ್ಟ ಪಂಗಡ ಮಿಸಲಿಂದ ಯಲ್ಲಪ್ಪ ತಳವಾರ (151) ಬಿನ್ ಸಾಲದಿಂದ ಮುದಕಪ್ಪ ಗಾಡದ( 133) ಮತ ಪಡೆದು ಗೆದ್ದು ಶಿಗ್ಲಿಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ ಎಂದು ರಿಟರ್ನಿಂಗ್ ಆಫೀಸರ್ ಸಿ.ಕೆ.ಲಮಾಣಿ ಆದೇಶಿದರು.
