ಲಕ್ಷ್ಮೇಶ್ವರ: ಚಾಲಕನ ನಿಯಂತ್ರಣ ತಪ್ಪಿ ಮೆಕ್ಕೆಜೋಳ ತುಂಬಿದ ಲಾರಿ ಪಲ್ಟಿಯಾಗಿರುವ ಘಟನೆ ತಾಲೂಕಿನ ಹರದಗಟ್ಟಿ ಗ್ರಾಮದ ಹೊರ ವಲಯದಲ್ಲಿ ನಡೆದಿದೆ.
ಹರದಗಟ್ಟಿ ಗ್ರಾಮದದಿಂದ ರೈತರ ಮೆಕ್ಕೆಜೋಳ ಖರೀದಿಸಿ ಲಾರಿಯಲ್ಲಿ ತುಂಬಿಕೊಂಡು ಸಾಗಿಸುತ್ತಿದ್ದ ವೇಳೆ ಲಕ್ಷ್ಮೇಶ್ವರ ಪಟ್ಟಣಕ್ಕೆ ಹೋಗುವ ರಸ್ತೆಯಲ್ಲಿನ ಕೆಂಪಿಗೆರೆ ಬಳಿ ಅಪಘಾತ ಸಂಭವಿಸಿದೆ. ಸಣ್ಣಪುಟ್ಟ ಗಾಯಗಳೊಂದಿಗೆ ಲಾರಿ ಚಾಲಕ ದೊಡ್ಡ ಅನಾಹುತದಿಂದ ಪಾರಾಗಿದ್ದಾನೆ.
ವರದಿ : ಪರಮೇಶ ಎಸ್ ಲಮಾಣಿ.
ಲಾರಿಯಲ್ಲಿ ಸುಮಾರು 100 ಕ್ವಿಂಟಲ್ ಮೆಕ್ಕೆಜೋಳದ ಚೀಲಗಳು ಇದ್ದವು ಎಂಬುದು ತಿಳಿದು ಬಂದಿದ್ದು, ಪಿಲ್ಟಿಯಾದ ಲಾರಿಯಿಂದ ಮೆಕ್ಕೆಜೋಳ ತುಂಬಿದ್ದ ಚೀಲಗಳು ಚೆಲ್ಲಾಪಿಲ್ಲಿಯಾಗಿ ಬಿದ್ದು, ಕಾಳುಗಳು ರಸ್ತೆಗೆ ಬಿದ್ದಿದ್ದಾವೆ.
ಈ ರಸ್ತೆಯಲ್ಲಿ ಈ ಹಿಂದೆ ಸುಮಾರು ವಾಹನಗಳು ಅಪಘಾತಕ್ಕೆ ಈಡಾಗಿದ್ದು, ಇಲ್ಲಿ ತಿರುವು ಇರುವುದರಿಂದ ಅಪಘಾತಕ್ಕೆ ಕಾರಣವಾಗಿದೆ. ಈ ಅಪಾಯಕಾರಿ ತಿರುವನ್ನು ಸಂಬಂಧಪಟ್ಟ ಅಧಿಕಾರಿಗಳು ಸರಿಪಡಿಸದಿದ್ದಲ್ಲಿ ಮುಂದೆ ಇಂಥ ಹಲವಾರು ಅಪಘಾತಗಳು ಸಂಭವಿಸಬಹುದು ಎಂದು ಸಾರ್ವಜನಿಕರು ಕಿಡಿಕಾರಿದ್ದಾರೆ.
