ಗದಗ : ಭಾರತೀಯ ಸಂಪ್ರದಾಯದಲ್ಲಿ ಮಹಿಳೆ ಚೊಚ್ಚಲ ಬಸೂರಿ ಆದ ಸಂದರ್ಭದಲ್ಲಿ ತವರು ಮತ್ತು ಗಂಡನ ಮನೆಯವರು ಹಾಗೂ ಬಂಧು ಬಳಗ ಸೇರಿ ಸೀಮಂತ ಕಾರ್ಯಕ್ರಮ ನಡೆಸುವುದು ವಾಡಿಕೆ ಇದೆ. ಗೋಮಾತೆಯಲ್ಲಿ 33 ಸಾವಿರ ದೇವತೆಗಳ ವಾಸಿಸುತ್ತಿದ್ದಾರೆ ಎನ್ನುವ ಬಲವಾದ ನಂಬಿಕೆ ಕೂಡ ಭಾರತೀಯರದ್ದಾಗಿದೆ.
ವರದಿ : ಪರಮೇಶ ಎಸ್ ಲಮಾಣಿ.
ಅದನ್ನು ನಂಬಿದ ಲಕ್ಷ್ಮೇಶ್ವರ ತಾಲೂಕಿನ ರಾಮಗೇರಿ ಗ್ರಾಮದ ನಾಗಾರಾಜ ಮಡಿವಾಳರ ಎಂಬ ರೈತ ತಮ್ಮ ಮನೆಯಲ್ಲಿ ಸಾಕಿದ ಗೋವನ್ನು ಸಾಕಿದಾಗಿನಿಂದಲೂ ತಮ್ಮ ಮನೆಗೆ ಒಳ್ಳೆಯದಾಗಿದೆ ಎನ್ನುವ ನಂಬಿಕೆಯಿಂದ ಗೋಮಾತೆ ಮೊದಲ ಬಾರಿಗೆ ಗರ್ಭ ಧರಿಸಿತ್ತು.
ಸಂತಸಗೊಂಡ ರೈತ ನಾಗರಾಜ ಮಡಿವಾಳರ ಭಾರತೀಯ ಸಂಪ್ರದಾಯದಲ್ಲಿ ಮಹಿಳೆಯೊಬ್ಬರಿಗೆ ಹೇಗೆ ಸೀಮಂತ ಮಾಡುತ್ತಾರೋ ಹಾಗೆ ಸೀಮಂತ ಕಾರ್ಯಕ್ರಮ ಹಮ್ಮಿಕೊಂಡು ಬಂಧು ಬಳಗ ಹಾಗೂ ನೆರೆಹೊರೆಯವರನ್ನು ಸೇರಿಸಿ ಸೀರೆ ಉಡಿಸಿ, ಆರತಿ ಎತ್ತಿ, ಶೋಭಾನೆ ಪದ ಹಾಡುವ ಮೂಲಕ ಗೋಮಾತೆಗೆ ಸೀಮಂತ ಮಾಡಿದ್ದಾರೆ.
ಈ ಸಂದರ್ಭದಲ್ಲಿ ರೈತ, ತಾಲೂಕಾ ಪಂಚ ಗ್ಯಾರೇಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ನಾಗರಾಜ ಮಡಿವಾಳರ ಮಾತನಾಡಿ ಭಾರತೀಯ ಸಂಸ್ಕೃತಿ ಪರಂಪರೆಯಲ್ಲಿ ಆದಿಅನಾದಿ ಕಾಲದಿಂದಲು ಗೋಮಾತೆಗೆ ವಿಶಿಷ್ಟ ಸ್ಥಾನವಿದೆ. ಅಮೃತ ತಳಿಯ ಗೋಮಾತೆ ತುಂಬು ಗರ್ಭಿಣಿ ಚೊಚ್ಚಲ ಕರುವಿಗೆ ಜನ್ಮ ನೀಡುತ್ತಿರುವುದರಿಂದ ಯತಾವತ್ತಾಗಿ, ಪೂಜೆ ಪುನಸ್ಕಾರಗಳು ಎಲ್ಲವನ್ನು ಸಂಪರ್ಪಿಸಿ ಗೋಮಾತೆಗೆ ಗೌರವ ಸಲ್ಲಿಸುತ್ತಿದ್ದೆವೆ ಎಂದರು.
ಭಾಗವಹಿದ ಎಲ್ಲರಿಗೂ ಕರಿಗಡಬು, ತುಪ್ಪ, ರೋಟ್ಟಿ, ಚಪಾತಿ, ಕಾಳು ಪಲ್ಲೆ, ಕೆಂಪು ಚಟ್ನಿ ಸೇರಿದಂತೆ ಸವಿಸವಿ ಭೋಜನವನ್ನು ಉಣಬಡಿಸಿದರು.
ನಾಗರಾಜ ಮಡಿವಾಳರ ಕುಟುಂಬದ ಈ ಅಪರೂಪದ ಕಾರ್ಯಕ್ರಮ ಜನತೆಯ ಮೆಚ್ಚುಗೆಗೆ ಪಾತ್ರವಾಯಿತು.
