ಲಕ್ಷ್ಮೇಶ್ವರ : ಪಟ್ಟಣದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆ ಸಿಬಿಎಸ್ಇ ಸ್ಕೂಲ್ ಚಂದನಕ್ಕೆ ಡಿ.೧೩ ರಂದು ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಬೆಳಗ್ಗೆ 11 ಗಂಟೆಗೆ ಹೆಲೆಕ್ಯಾಪ್ಟರ್ ಮೂಲಕ ಆಗಮಿಸಲಿದ್ದಾರೆ ಎಂದು ರೋಣ ಮತಕ್ಷೇತ್ರದ ಶಾಸಕ ಜಿ.ಎಸ್.ಪಾಟೀಲ್ ಹೇಳಿದರು.
ಪಟ್ಟಣದ ತಾಯಿ ಪಾರ್ವತಿ ಮಕ್ಕಳ ಸಭಾ ಭವನದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿ ಮಾತನಾಡಿದ ಅವರು,
ವರದಿ : ಪರಮೇಶ ಎಸ್ ಲಮಾಣಿ.
ಭಾರತ ರತ್ನ ಪ್ರೋ ಸಿಎನ್ ಆರ್ ರಾವ್ ರವರ ೧೦ ನೇ ವರ್ಷದ ವಿಜ್ಞಾನ ವಿಸ್ತೃತ ಕಾರ್ಯಕ್ರಮ ಉದ್ಘಾಟನೆ ಮತ್ತು ೨೦೨೫ ನೇ ಸಾಲಿನ ಚಂದನಶ್ರೀ ಪ್ರಶಸ್ತಿಯನ್ನು ಬಿ.ಎಸ್ ಪಾಟೀಲ್ ನಿವೃತ್ತ ಐಎಸ್ಎಸ್ ಅಧಿಕಾರಿ ಹಿಂದಿನ ಮುಖ್ಯಕಾರ್ಯದರ್ಶಿಗಳು ಕರ್ನಾಟಕ ಸರಕಾರ ಹಾಗೂ ಗ್ರೇಟರ್ ಬೆಂಗಳೂರು ರೂವಾರಿ ಇವರಿಗೆ ನೀಡಲಾಗುತ್ತಿದೆ ಹಾಗೂ ಸ್ಕೂಲ್ ಚಂದನ ಗೌರವ ನಿರ್ದೇಶಕರಾಗಿ ನಿವೃತ್ತಿರಾದ ೨೨ ವರ್ಷ ಒಂದೆ-ಒಂದು ದಿನ ರಜೆ ಮಾಡದೆ ಶಿಕ್ಷಕರಾಗಿ ಸೇವೆ ಸಲ್ಲಿಸಿದ ದಿ. ಹೆಚ್.ಸಿ.ರಟಗೇರಿಯವರ ಕಂಚಿನ ಮೂರ್ತಿ ಅನಾವರಣವನ್ನು ಸಿಎಂ ಸಿದ್ದರಾಮಯ್ಯನವರು ಉದ್ಘಾಟನೆ ಮಾಡುವವರು ಎಂದು ತಿಳಿಸಿದರು.
ನಂತರ ಸ್ಕೂಲ್ ಚಂದನದ ಸಂಸ್ಥಾಪಕ ಟಿ.ಈಶ್ವರ ಮಾತನಾಡಿ ಪ್ರತಿ ವರ್ಷದಂತೆ ಈ ವರ್ಷವು ಡಿಸೆಂಬರ್ ೧೩ ರಿಂದ ೧೫ ರವರೆಗೆ ಮೂರು ದಿನಗಳ ಭಾರತ ರತ್ನ ಪ್ರೋ ಸಿ.ಎನ್.ಆರ್ ರಾವ್ ರವರ ವಿಜ್ಞಾನ ವಿಸ್ತೃತ ಕಾರ್ಯಕ್ರಮಕ್ಕೆ ರಾಷ್ಟ್ರ, ಅಂತರಾಷ್ಟ್ರೀಯ ಪ್ರಖ್ಯಾತ ವಿಜ್ಞಾನಿಗಳು ಹಾಗೂ ಕಾನೂನು ಸಂಸದಿಯ ವ್ಯವಹಾರಗಳ ಮತ್ತು ಪ್ರವಾಸೋದ್ಯಮ ಸಚಿವ ಹೆಚ್.ಕೆ.ಪಾಟೀಲ್, ಸಂಸದರು ಕೇಂದ್ರ ಮಾಜಿ ಸಚಿವರಾದ ಜೈರಾಮ ರಮೇಶ ಬರಲಿದ್ದಾರೆ ವಿಸ್ತೃತ ಕಾರ್ಯಕ್ರಮದಲ್ಲಿ ಬೆಂಗಳೂರಿನ ಜೆಎನಸಿಎಎಸ್ ಆರ್ ಐ ಎಸ್ ಸಿ, ಐಐಟಿ, ಐಐಎಸ್, ಜೆಎಂಪಿ ಬೆಂಗಳೂರು ಧಾರವಾಡ ಸೇರಿದಂತೆ ವಿಜ್ಞಾನಿಗಳು ವಿಜ್ಞಾನ ವಿಸ್ತೃತ ಕಾರ್ಯಕ್ರಮದಲ್ಲಿ ಭಾಗವಹಿಸಿ ಯುವ ವಿಜ್ಞಾನಿಗಳಿಗೆ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಲಿದ್ದಾರೆ ಎಂದು ಹೇಳಿದರು.
ಕಾರ್ಯಕ್ರಮಕ್ಕೆ ಸಮಾರು ೨೫ ರಿಂದ ೨೦ ಸಾವಿರ ಜನ ಸೇರುವ ನಿರೀಕ್ಷೆ ಇದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಾಜಿ ಶಾಸಕರಾದ ಡಿ.ಆರ್ ಪಾಟೀಲ್, ಬಿ ಆರ್ ಯಾವಗಲ್ಲ, ಜಿ.ಎಸ್.ಗಡ್ಡದೇವರಮಠ, ರಾಮಕೃಷ್ಣ ದೊಡ್ಡಮನಿ, ರಾಮಣ್ಣ ಲಮಾಣಿ, ಹುಮಾಯೂನ್ ಮಾಗಡಿ, ಕೆಪಿಸಿಸಿ ಸದಸ್ಯ ಆನಂದ ಸ್ವಾಮಿ ಗಡ್ಡದೇವರಮಠ, ಜಿ.ಆರ್.ಕೊಪ್ಪದ, ಅಂಬರೀಶ್ ತೆಂಬದಮನಿ, ಜಿ.ವಿ.ಪಾಟೀಲ್, ನಾಗರಾಜ ಮಡಿವಾಳರ, ಚನ್ನಪ್ಪ ಜಗಲಿ, ಸೋಮಣ್ಣ ಬೆಟಗೇರಿ, ವೀರೇಂದ್ರಗೌಡ ಪಾಟೀಲ್, ದಾದಾಪೀರ ಮುಚಾಲೆ, ಐಎಸ್ ಪಾಟೀಲ್, ವೀರಯ್ಯ ಮಠಪತಿ, ಅಶೋಟಿ ಮಕಾಂದಾರ, ಭಾಗ್ಯಶ್ರೀ ಬಾಬಣ್ಣ, ಕಿರಣ ನವಲೇ, ಸೇರಿದಂತೆ ಅನೇಕರು ಇದ್ದರು.
