ಧಾರವಾಡ : ಕರುನಾಡ ಕಲ್ಪವೃಕ್ಷ ಫೌಂಡೇಶನ್ (ರಿ), ಕರ್ನಾಟಕ ಇವರ ವತಿಯಿಂದ ಹಾವೇರಿಯಲ್ಲಿ ನಡೆದ ಪ್ರಥಮ ಸಾಹಿತ್ಯ ಕಲ್ಪವೃಕೋತ್ಸವ ಸಮ್ಮೇಳನ 2025-26 ಇವರು ನೀಡುವ 2025ನೇ ಸಾಲಿನ “ರಾಷ್ಟ್ರೀಯ ಬಸವ ಚೇತನ” ಪ್ರಶಸ್ತಿಗೆ ವಿದ್ಯಾರ್ಥಿಗಳಿಗೆ ನೆಚ್ಚಿನ ಹಾಸ್ಟೆಲ್ ವಾರ್ಡನ್ ಆಸ್ಕರ್ ಅಲಿ. ಆರ್.ಹಿರೇಮನಿ ಅವರು ಭಾಜನಾರಾಗಿದ್ದಾರೆ.
ವರದಿ : ಪರಮೇಶ ಎಸ್ ಲಮಾಣಿ
ಇವರ ಸಮಾಜ ಸೇವೆ ಮತ್ತು ಶಿಕ್ಷಣ ಕ್ಷೇತ್ರಕ್ಕೆ ರಾಷ್ಟ್ರೀಯ ಪ್ರಶಸ್ತಿ ಲಭಿಸಿದೆ. ಇವರು ಸಮಾಜ ಕಲ್ಯಾಣ ಇಲಾಖೆಯ ಸರ್ಕಾರಿ ಮೆಟ್ರಿಕ್ ನಂತರದ ಬಾಲಕರ ವಸತಿ ನಿಲಯ (ಗೌರಿ ಶಂಕರ ನಂ. 01) ಸಪ್ತಾಪುರ, ಧಾರವಾಡದಲ್ಲಿ ನಿಷ್ಠಾವಂತ ನಿಲಯಪಾಲಕರಾಗಿ ವೃತಿಯಲ್ಲಿ ತೊಡಗಿರುತ್ತಾರೆ.
ಈ ಸಾಧನೆಗೆ ಕರುನಾಡ ಕಲ್ಪವೃಕ್ಷ ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷರು, ಸಮ್ಮೇಳನದ ಅಧ್ಯಕ್ಷರು ಹಾಗೂ ಇನ್ನುಳಿದ ಪದಾಧಿಕಾರಿಗಳು ಅಭಿನಂದಿಸಿರುತ್ತಾರೆ. ಹಾಗೆಯೇ ಆಸ್ಕರ್ ಅಲಿ ಸಾಧನೆಗೆ ಇಲಾಖೆಯ ಎಲ್ಲಾ ಅಧಿಕಾರಿ ವರ್ಗ ಹಾಗೂ ಸಿಬ್ಬಂದಿ ವರ್ಗದವರು, ವಿದ್ಯಾರ್ಥಿಗಳು ಮತ್ತು ಕುಟುಂಬದ ಸದಸ್ಯರು ಮೆಚ್ಚುಗೆಯನ್ನು ವ್ಯಕ್ತಪಡಿಸಿರುತ್ತಾರೆ.
ಹಾಸ್ಟೆಲ್ ನಲ್ಲಿ ವಿದ್ಯಾರ್ಥಿಗಳಿಗೆ ಪ್ರೀತಿ ಕೊಟ್ಟು, ಪ್ರೀಯವಾಗಿರುವ ನಿಲಯಪಾಲಕ ಆಸ್ಕರ್ ಅಲಿ ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಅಚ್ಚುಮೆಚ್ಚು ಆಗಿದ್ದಾರೆ, ಅಲ್ಲದೇ, ಹಾಸ್ಟೆಲ್ ನಲ್ಲಿ ವಿದ್ಯಾರ್ಥಿಗಳ ಅವಧಿ ಮುಗಿದ ನಂತರ ಅವರಿಗೆ ಮುಂದಿನ ವಿದ್ಯಾಭ್ಯಾಸದ ಬಗ್ಗೆ ಮಾರ್ಗದರ್ಶನ ನೀಡಿ ಅವರ ಕೈಲಾದಷ್ಟು ಸಹಾಯ ಮಾಡುತ್ತಿದ್ದರು ಎಂದು ವಿದ್ಯಾರ್ಥಿಗಳು ತಿಳಿಸಿದರು.
****************************************
ನಮ್ಮ ಆಸ್ಕರ್ ಅಲಿ ಸರ್ ಗೆ ಈ ಪ್ರಶಸ್ತಿ ಲಭಿಸಿದ್ದು ನಮಗೆ ತುಂಬಾ ಖುಷಿಯಾಗಿದೆ. ನಾನು ಒಬ್ಬ ಶಿಕ್ಷಕನಾಗಿ ಸೇವೆ ಸಲ್ಲಿಸುತ್ತಿರುವೆ ಇದಕ್ಕೆಲ್ಲ ಕಾರಣ ನನಗೆ ಮಾರ್ಗದರ್ಶನ ನೀಡಿದ ಆಸ್ಕರ್ ಅಲಿ ಸರ್ ….
ಆನಂದ ಲಮಾಣಿ,
ಆಸ್ಕರ್ ಅಲಿ ಆರ್. ಹೀರೆಮಠ ಅವರ ಶಿಷ್ಯ…
