ವರದಿ : ಪರಮೇಶ ಲಮಾಣಿ
ಲಕ್ಷ್ಮೇಶ್ವರ: ತಾಲೂಕಿನ ಗೊವನಾಳ ಮತ್ತು ಗುಲಗುಂಜಿಕೊಪ್ಪ ಗ್ರಾಮದಲ್ಲಿ ತಲಾ 50 ಲಕ್ಷ ರೂ.ಗಳ ಸಿಸಿ ರಸ್ತೆ ಕಾಮಾಗಾರಿಗೆ ಬುಧವಾರ ಶಾಸಕ ಡಾ.ಚಂದ್ರು ಲಮಾಣಿ ಭೂಮಿ ಪೂಜೆ ನೆರವೇರಿಸಿದರು.
ಬಳಿಕ ಮಾತನಾಡಿದ ಅವರು ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯ ರಾಜ್ ಇಲಾಖೆಯ ಜಿಲ್ಲಾ ಪಂಚಾಯ ರಾಜ್ ಇಂಜಿನಿಯರಿಂಗ್ ಇಲಾಖೆ ವತಿಯಿಂದ ಎರಡು ಗ್ರಾಮಗಳಲ್ಲಿ ತಲಾ 50 ಲಕ್ಷ ರೂ.ಅನುದಾನ ಬಿಡುಗಡೆಯಾಗಿದ್ದು ಸಿಸಿ ರಸ್ತೆ ನಿರ್ಮಾಣಕ್ಕೆ ಆದ್ಯತೆ ನೀಡಲಾಗಿದೆ ಎಂದು ಹೇಳಿದ ಅವರು ಅಭಿವೃದ್ಧಿ ಕಾಮಗಾರಿ ವಿಷಯದಲ್ಲಿ ಯಾವುದೇ ಪಕ್ಷಪಾತ ಮಾಡುವುದಿಲ್ಲ ಎಂದು ಹೇಳಿದರು.
ಕ್ಷೇತ್ರದ ಗ್ರಾಮೀಣ ಭಾಗದಲ್ಲಿ ರಸ್ತೆಗಳಿಗೆ ಆದ್ಯತೆ ನೀಡಿತ್ತಿದ್ದು, ಗ್ರಾಮಸ್ಥರು ಉತ್ತಮವಾದ ರಸ್ತೆ ಮಾಡಿಸಿಕೊಳ್ಳಬೇಕು ಎಂದರಲ್ಲದೇ,
ನಾನು ಶಾಸಕನಾಗುವ ಮೊದಲು ಗ್ರಾಮಕ್ಕೆ ಬಂದಾಗ ಈ ರಸ್ತೆಗಳು ಮಾಡಿಸಲು ಮನವಿ ಮಾಡಿದ್ದರು. ಮಾತಿನಂತೆ ನಾನು ಕೆಲಸ ಮಾಡಿದ್ದೆನೆ. ಸಾರ್ವಜನಿಕರು ಕಾಮಗಾರಿಗೆ ಸಹಕರಿಸಿ ಗ್ರಾಮದ ಅಭಿವೃದ್ಧಿಗೆ ಕೈ ಜೋಡಿಸಬೇಕು ಎಂದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷ ಕರಿಯಪ್ಪಗೌಡ ಹೊಸಗೌಡರ, ಸದಸ್ಯ ಅಣ್ಣಪ್ಪ ರಾಮಗೇರಿ, ಮಂಜನಗೌಡ ಕೆಂಚನಗೌಡ, ನಿಂಗನಗೌಡ ಪಾಟೀಲ್, ನೀಲಪ್ಪಗೌಡ ದುರ್ಗನಗೌಡ, ಗಂಗಾಧರ ಮಾದರ,ಸುನೀಲ್ ಮಹಾಂತಶೆಟ್ಟರ, ಗಂಗಾಧರ ಮೆಣಸಿನಕಾಯಿ, ಪರಶುರಾಮ ಇಮ್ಮಡಿ,ಸುಶೀಲವ್ವ ಮರಿಗೌಡರ,ನಿರ್ಮಲಾ ತಳವಾರ,ಈಶ್ವರಪ್ಪ ಸೊರಟೂರ,ಬಸಪ್ಪ ಬಡಗೇರ, ಚಂದ್ರು ತಳವಾರ,ಬಸಪ್ಪ ಶಿವಬಸವಣ್ಣವರ,ಬಸವರಾಜ ಚಕ್ರಸಾಲಿ,ಪ್ರವೀಣ ಬೊಮಲೆ, ವಿಶಾಲ ಬಡಕುರ್ಕಿ ಸೇರಿದಂತೆ ಎರಡು ಗ್ರಾಮದ ಮುಖಂಡರು ಇದ್ದರು.