ಗದಗ: ಲಕ್ಷ್ಮೇಶ್ವರ ಪಟ್ಟಣದಲ್ಲಿ ಕಳೆದ ಐದು ದಿನಗಳಿಂದ ಲಕ್ಷ್ಮೇಶ್ವರ ಶಿರಹಟ್ಟಿ ಮುಂಡರಗಿ ಭಾಗದಲ್ಲಿ ಗೋವಿನಜೋಳ ಖರೀದಿ ಕೇಂದ್ರ ಆರಂಭಿಸುವಂತೆ ಒತ್ತಾಯಿಸಿ ವಿವಿಧ ರೈತಪರ ಸಂಘಟನೆಗಳಿಗೆ ಭಾರಿ ಬೆಂಬಲ ವ್ಯಕ್ಯವಾಗುತ್ತಿದೆ.
ಪಟ್ಟಣದಲ್ಲಿ ಬುಧವಾರ ಆಮರಣ ಉಪವಾಸ ಕೈಗೊಂಡಿರುವ ಆದರಹಳ್ಳಿ ಗವಿಮಠದ ಡಾ.ಕುಮಾರ ಮಹಾರಾಜರೊಂದಿಗೆ ರೈತ ಮುಖಂಡರಾದ ರಾಮಣ್ಣ ಗೌರಿ ಬಸವರಾಜ ಬೆಂಡಿಗೇರಿ ಕುಂದಗೋಳದ ಕಲ್ಯಾಣಪೂರದ ಬಸವಣ್ಣಜ್ಜನವರು ಜಮಖಂಡಿಯ ಮಹಾಂತ ಗುರುಗಳು ಉಪವಾಸ ಕುಳಿತಿದ್ದಾರೆ.
ವರದಿ: ಪರಮೇಶ ಎಸ್ ಲಮಾಣಿ
ಈ ಸಂದರ್ಭದಲ್ಲಿ ಶಿರಹಟ್ಟಿಯ ಫಕ್ಕೀರ ದಿಂಗಾಲೇಶ್ವರ ಶ್ರೀಗಳು ರೈತರ ಹೋರಾಟ ವೇದಿಕೆಗೆ ಭೇಟಿನೀಡಿ ರೈತರನ್ನು ಉದ್ದೇಶಿಸಿ ಮಾತನಾಡಿ ಸರಕಾರ ಮೆಕ್ಕೆಜೋಳ ಬೆಳೆಗಾರರಿಗೆ ಕಬ್ಬು ಬೆಳೆಗಾರರಿಗೆ ನೀಡಿದ ಮನ್ನಣೆಯಂತೆ ಗೋವಿನಜೋಳ ಖರೀದಿ ಕೇಂದ್ರ ಆರಂಭಿಸಲು ಮನ್ನಣೆ ನೀಡಬೇಕು ಸರಕಾರ ಒಂದೊಮ್ಮೆ ರೈತರ ಬೆಂಬಲಕ್ಕೆ ನಿಲ್ಲದ್ದಿದ್ದರೆ ಮೆಕ್ಕೆಜೋಳ ಬೆಳೆದ ಎಲ್ಲಾ ರೈತರು ಗೋವಿನಜೋಳವನ್ನು ಬಿದಿಗೆ ಸುರಿದು ರಸ್ತೆ ಬಂದ ಮಾಡುವ ಕಟಿನ ನಿರ್ಧಾರ ತೆಗೆದುಕೊಳ್ಳಬೇಕು ರೈತರ ಈ ಹೋರಾಟಕ್ಕೆ ಮಠಾದೀಶರ ಸಂಪೂರ್ಣ ಬೆಂಬಲ ಇದೆ ಎಂದು ರೈತರು ಯಾವುದೇ ಕಾರಣಕ್ಕೂ ಸರಕಾರ ತನ್ನ ನಿರ್ಧಾರ ಪ್ರಕಟಿಸುವವರೆಗೂ ಹಿಂದೆವೇದಿಕೆಯವರುಎಂದು ನೈತಿಕ ಬೆಂಬಲ ನೀಡಿದರು.
ಐದನೇ ದಿನವಾದ ಬುಧವಾರ ರೈತರ ಹೋರಾಟಕ್ಕೆ ಶಿಗ್ಲಿ ಗ್ರಾಮದ ರೈತರು ನ್ಯಾಯವಾದಿ ಸಂಘದವರು ಬಿದಿಬದಿ ವ್ಯಾಪಾರಸ್ಥ ಸಂಘದವರು ಗೋಸಾವಿ ಸಮಾಜದವರು ದ್ವಿಚಕ್ರವಾಹನ ರಿಪೇರಿ ಸಂಘದವರು ಜಯ ಕರ್ನಾಟಕ ವೇದಿಕೆಯವರು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಸೇರಿದಂತೆ ವಿವಿಧ ಸಂಘಟನೆಗಳು ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದರು.
ಮೆಕ್ಕೆಜೋಳ ಖರೀದಿ ಕೇಂದ್ರ ಆರಂಭಿಸುವಂತೆ ಲಕ್ಷ್ಮೇಶ್ವ ಬಂದ್
ಬಾಕ್ಸ್:
ಇಂದು ಮೆಕ್ಕೆಜೋಳ ಖರೀದಿ ಕೇಂದ್ರ ಆರಂಭಿಸುವಂತೆ ಕಳೆದ ಐದು ದಿನಗಳಿಂದ ಆರಂಭಗೊಂಡಿರುವ ಪ್ರತಿಭಟನೆಗೆ ಸ್ವಯಂ ಪ್ರೇರಣೆಯಿಂದ ಎಲ್ಲಾ ಸಂಘಟನೆಗಳು ಲಕ್ಷ್ಮೇಶ್ವರ ಬಂದ ಕರೆಗೆ ಬೆಂಬಲಿಸಿದೆ.
ಈ ಸಂದರ್ಭದಲ್ಲಿ ಗದಗ ಜಿಲ್ಲಾ ಪಂಚಾಯತಿ ಮಾಜಿ ಅಧ್ಯಕ್ಷ ಎಸ್.ಪಿ.ಬಳಿಗಾರ ರಾಮಣ್ಣ ಲಮಾಣಿ ವೀರಣ್ಣ ಪವಾಡದ ಚನ್ನಪ್ಪ ಜಗಲಿ,ಡಿ.ವಾಯ್ ಹುನಗುಂದ,ವಿರೇಶ ನೂಲ್ವಿ, ಶಿವಾನಂದ ಅಡರಕಟ್ಟಿ, ಮಂಜುನಾಥ ಮಾಗಡಿ,ಶರಣು ಗೋಡಿ,ನೀಲಪ್ಪ ಕರ್ಜಕನವರ, ಅಶೋಕ ಶಿರಹಟ್ಟಿ ಚಂದ್ರು ಮಾಗಡಿ ಸೇರಿದಂತೆ ಅನೇಕರು ಹಾಜರಿದ್ದರು.
