ಗದಗ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಗದಗ ಜಿಲ್ಲಾ ಘಟಕದ ಚುನಾವಣೆಯಲ್ಲಿ ದೃಶ್ಯ ಮಾಧ್ಯಮದ ಜಿಲ್ಲಾ ವರದಿಗಾರರಾದ ಮಹಲಿಂಗಯ್ಯ ಹಿರೇಮಠ ಅವರು ಕಾರ್ಯಕಾರಿಣಿ ಸದಸ್ಯರಾಗಿ ಚುನಾಯಿತರಾದ ಹಿನ್ನೆಲೆ, ಮುಂಡರಗಿ ತಾಲೂಕಿನ ವೀರಶೈವ ಜಂಗಮಾಭಿವೃದ್ಧಿ ಸಂಘದ ಪದಾಧಿಕಾರಿಗಳು ಹಾಗೂ ಶಿರಹಟ್ಟಿ ತಾಲೂಕಿನ ಹೊಳೆ ಇಟಗಿ ಗ್ರಾಮ ಪಂಚಾಯತ ಮಾಜಿ ಅಧ್ಯಕ್ಷರು ಹಾಗೂ ಸಾಸರವಾಡ ಗ್ರಾಮದ ಹಿರಿಯರಾದ ಮೃತ್ಯುಂಜಯ ಸೂರಣಗಿಮಠ ಅವರ ನೇತೃತ್ವದಲ್ಲಿ ಸನ್ಮಾನಿಸಿ ಗೌರವಿಸಲಾಯಿತು. ವೇಳೆ ಸಂಘದ ಅಧ್ಯಕ್ಷರು, ಯುವ ಘಟಕದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಸೇರಿದಂತೆ ಸಮಾಜದ ಹಿರಿಯರು ಪಾಲ್ಗೊಂಡಿದ್ದರು, ಹೊಳೆ ಇಟಗಿ ಗ್ರಾಮದ ಹಿರಿಯರಾದ ಶಂಕ್ರಪ್ಪ ಕಮ್ಮಾರ, ಗುಡ್ಡಪ್ಪ ಬಾರಕೇರ, ನೀಲನಗೌಡ ಪಾಟೀಲ್, ದಾನಯ್ಯ ಮುದಗಲ್ಲಮಠ, ಸಂತೋಷ ಬಳ್ಳೋಳ್ಳಿ, ವೀರಯ್ಯ ಮುದಗಲ್ಲಮಠ ಹಾಗೂ ಶರಣ್ಣಪ್ಪ ಗಡಮುಡಿ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.
ಕರ್ನಾಟಕ ಕಾ.ನಿ.ಪ ಸಂಘದ ಕಾರ್ಯಕಾರಿಣಿ ಸದಸ್ಯ ಹಿರೇಮಠ ಅವರಿಗೆ ಹಿರಿಯರಿಂದ ಸನ್ಮಾನ…
109