ರಸ್ತೆಯೋ .. ಇದು ಕೆಸರು ಗದ್ದೆಯೋ..?
ಗದಗ : ತಾಲೂಕಿನ ಹಾತಲಗೇರಿ ಗ್ರಾಮ ಪಂಚಾಯತಿ ವ್ಯಾಪ್ತಿಯ ನರಸಾಪೂರ ಗ್ರಾಮದ ಲಕ್ಕಮ್ಮದೇವಿ ನಗರದ ರಸ್ತೆಯು ಹೊಂಡಗಳಿಂದ ಕೂಡಿದ್ದು, ಕೆಸರುಮಯವಾಗಿ ಸಂಚಾರಕ್ಕೆ ತೊಡಕಾಗಿ ಪರಿಣಮಿಸಿದೆ. ಇದರಿಂದಾಗಿ ವಾಹನ ಸವಾರರು, ಶಾಲೆಗೆ ಹೋಗುವ ವಿದ್ಯಾರ್ಥಿಗಳು ದಿನ ನಿತ್ಯ ಸರ್ಕಸ್ ಮಾಡುತ್ತ ಸಂಚರಿಸುವ ಅನಿವಾರ್ಯತೆ ಎದುರಾಗಿದೆ.
ವರದಿ: ಪರಮೇಶ ಎಸ್ ಲಮಾಣಿ
ಲಕ್ಕಮ್ಮದೇವಿ ನಗರವು ನರಸಾಪೂರ ಗ್ರಾಮದ ಪ್ರಮುಖ ನಗರವಾಗಿದ್ದು, ಅಂದಾಜು ಒಂದು ಕಿಮೀ ರಸ್ತೆಯನ್ನು ಅಭಿವದ್ಧಿ ಕಾರ್ಯ ಯಾವ ಕಾಲದಲ್ಲಿ ನಡೆದಿತ್ತೊ ಗೊತ್ತಿಲ್ಲ. ಈ ರಸ್ತೆ ಹೊಂಡಗಳು, ಕೆಸರುಮಯವಾಗಿ ನಿರ್ಮಾಣವಾಗಿವೆ. ಈ ರಸ್ತೆಯನ್ನು ದುರಸ್ತಿಗೊಳಿಸುವಂತೆ ಆಗಲೇ ಅಧಿಕಾರಿಗಳ ಗಮನಕ್ಕೆ ತಂದಿದ್ದರೂ ಯಾವುದೇ ಪ್ರಯೋಜನವಾಗಲಿಲ್ಲ ಎಂದು ಜನತೆ ಬೇಸರ ವ್ಯಕ್ತಪಡಿಸುತ್ತಿದ್ದಾರೆ.
ನರಸಾಪೂರ ಗ್ರಾಮದಲ್ಲಿನ ಪ್ರಮುಖ ರಸ್ತೆಗಳಲ್ಲಿ ಇದೂ ಒಂದು… ಗ್ರಾಮದ ಬಹುತೇಕ ರಸ್ತೆ ಸುಧಾರಣೆ ಕಂಡಿವೆ. ಆದರೆ ಈ ರಸ್ತೆ ಮಾತ್ರ ಅಭಿವದ್ಧಿ ಕಾಣದೇ ಇರುವದರಿಂದ ರಸ್ತೆಯ ಸ್ಥಿತಿ ಸರಿಯಿಲ್ಲ. ಈ ರಸ್ತೆಯಲ್ಲಿ ಜೀವ ಕೈಯಲ್ಲಿ ಹಿಡಿದುಕೊಂಡು ಸಾಗಬೇಕಾದ ಅನಿವಾರ್ಯತೆ ಅನೇಕ ವರ್ಷಗಳಿಂದ ಇಲ್ಲಿನ ಜನರದ್ದಾಗಿದೆ. ಮಳೆಗಾಲದ ಸಂದರ್ಭದಲ್ಲಿ ರಸ್ತೆಯಲ್ಲಿ ನೀರು ಮತ್ತು ಕೆಸರು ತುಂಬಿಕೊಂಡು ವಾಹನ, ವಿದ್ಯಾರ್ಥಿಗಳು, ವಯೋವದ್ಧರು ಸಂಚಾರಕ್ಕೆ ತೊಡಕಾಗುತ್ತಿದೆ.
*ಸಮಸ್ಯೆ ಏನು?*
ಜನಸಾಮಾನ್ಯರಿಗೆ ಇಂತಹ ಸಂಕಷ್ಟದ ಪರಿಸ್ಥಿತಿ ಇರುವುದು ಯಾವುದೋ ಕುಗ್ರಾಮದಲ್ಲಿ ಅಲ್ಲ. ಬದಲಾಗಿ ಅಭಿವದ್ದಿಯೆಡೆಗೆ ದಾಪುಗಾಲಿಡುತ್ತಿರುವ ಹಾತಲಗೇರಿ ಗ್ರಾಮ ಪಂಚಾಯತಿ ವ್ಯಾಪ್ತಿಯ ನರಸಾಪೂರ ಗ್ರಾಮದಲ್ಲಿ,
ಇಷ್ಟೆಲ್ಲ ದೊಡ್ಡ ಮಟ್ಟದ ಸಮಸ್ಯೆ ಇದ್ದರೂ ಅಧಿಕಾರಿಗಳು, ಜನಪ್ರತಿನಿಧಿಗಳು ಏನು ಮಾಡುತ್ತಿದ್ದಾರೆ ಎಂಬ ಪ್ರಶ್ನೆ ಮೂಡುವುದು ಸಹಜ. ಈ ರಸ್ತೆಯ ಉದ್ದಕ್ಕೂ ಅಕ್ಕ ಪಕ್ಕದಲ್ಲಿ ವಾರ್ಡ್ಗಳು ಹೊಂದಿಕೊಂಡಿವೆ. ತಾವು ಅಭಿವದ್ಧಿಗಳಲ್ಲ ತಮ್ಮನ್ನು ಮೋಜಿಗಾಗಿ ಪ್ರತಿನಿಧಿಗಳಾಗಿ ಮಾಡಿದ್ದಾರೆ ಎನ್ನುವಂತೆ ವರ್ತಿಸುವ ಇಲ್ಲಿನ ಜನಪ್ರತಿನಿಧಿಗಳು ದಿವ್ಯ ವೌನಕ್ಕೆ ಶರಣಾಗಿದ್ದಾರೆ. ಈ ಹದಗೆಟ್ಟ ರಸ್ತೆಯ ಪರಿಸ್ಥಿತಿಯಿಂದ ತಮ್ಮ ಮಕ್ಕಳು ಸಂಕಷ್ಟ ಎದುರಿಸುತ್ತಿದ್ದಾರೆ ಎಂದು ಸ್ಥಳೀಯರು ಗ್ರಾಮ ಪಂಚಾಯತಿ ಗೆ ಜನಪ್ರತಿನಿಧಿಗಳೆನಿಕೊಂಡವರಲ್ಲಿ ವಿನಂತಿಸಿಕೊಂಡಿದ್ದಾರೆ. ಸಾರ್ವಜನಿಕರೂ ಕಾಲಕಾಲಕ್ಕೆ ತಮ್ಮ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.
ಸಮಸ್ಯೆ ನಿಮ್ಮದು ಪರಿಹಾರ ನಮ್ಮಲ್ಲಿಲ್ಲ ಎನ್ನುವ ವರ್ತನೆಯನ್ನು ಸ್ಥಳೀಯ ಅಧಿಕಾರಿಗಳು, ಜನಪ್ರತಿನಿಧಿಗಳು ತೋರುತ್ತಿದ್ದಾರೆ.
