ಗದಗ ( ಶಿರಹಟ್ಟಿ ): ಶಿರಹಟ್ಟಿ ತಾಲೂಕಿನ ಛಬ್ಬಿ ಗ್ರಾಮದಲ್ಲಿ ಶಾಲಾ ಕಾಲೇಜು ವಿದ್ಯಾರ್ಥಿಗಳು ಸಮರ್ಪಕ ಬಸ್ ವ್ಯವಸ್ಥೆ ಕಲ್ಪಿಸುವಂತೆ ಇಂದು ಬೆಳಗ್ಗೆ ಸಾರಿಗೆ ಬಸ್ ತಡೆದು ಪ್ರತಿಭಟನೆ ಮಾಡಿದರು.
ಛಬ್ಬಿ ಮಾರ್ಗವಾಗಿ ಶಿರಹಟ್ಟಿ, ಗದಗಕ್ಕೆ ಹೋಗುವ ಸಾರಿಗೆ ಬಸ್ಗಳು ನಮ್ಮ ಗ್ರಾಮದಲ್ಲಿ ನಿಲ್ಲುವದಿಲ್ಲ ಮತ್ತು ಬಸ್ ನಿಲ್ದಾಣಕ್ಕೆ ಬರುವಷ್ಟರಲ್ಲಿ ಕಾಲೇಜು ಸಮಯ ಮೀರಿರುತ್ತದೆ ಹಾಗೂ 90 ರಿಂದ 150 ಪ್ರಯಾಣಿಕರು ತುಂಬಿರುತ್ತಾರೆ. ಛಬ್ಬಿಯಿಂದ ಗದಗವರೆಗೂ 30 ಕಿಮೀ ಯಾವುದೇ ನಿಲ್ದಾಣದಲ್ಲಿ ಪ್ರಯಾಣಿಕರು ಮತ್ತು ಶಾಲಾ ಕಾಲೇಜು ವಿದ್ಯಾರ್ಥಿಗಳು ಹತ್ತಲು ಬಸ್ನಲ್ಲಿ ಸ್ಥಳವೇ ಇರಲ್ಲ. ಶಾಲಾ ಕಾಲೇಜು ವಿದ್ಯಾರ್ಥಿಗಳು ಬಸ್ ಗೆ ಜೋತು ಬಿದ್ದು ಪ್ರಯಾಣಿಸುವ ದುಸ್ಥಿತಿ ಎದುರಾಗಿದೆ ಎಂದು ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದರು.
ವರದಿ: ಪರಮೇಶ ಎಸ್ ಲಮಾಣಿ.
ಈ ಬಗ್ಗೆ ಶಿರಹಟ್ಟಿ ಮತ್ತು ಲಕ್ಷ್ಮೇಶ್ವರ ಸಾರಿಗೆ ಬಸ್ ಮ್ಯಾನೇಜರ್ ಗೆ ಇದರ ಬಗ್ಗೆ ಸಾಕಷ್ಟು ಬಾರಿ ಮನವಿ ನೀಡಿದರು ಸಮಸ್ಯೆ ಬಗೆಹರಿಸಿಲ್ಲ, ಈ ಮಾರ್ಗದಲ್ಲಿ ಹೆಚ್ಚುವರಿ ಬಸ್ ಬಿಡುವಂತೆ ಮನವಿ ಸಲ್ಲಿಸಲಾಗಿದೆ. ಸಾರಿಗೆ ಬಸ್ ಅಧಿಕಾರಿಗಳು ಸ್ಪಂದನೆ ನೀಡದೆ ಹೋದಾಗ ಪ್ರತಿಭಟನೆಗೆ ಮುಂದಾಗಿರುವುದಾಗಿ ಪ್ರತಿಭಟನಾ ನಿರತ ವಿದ್ಯಾರ್ಥಿಗಳು ತಿಳಿಸಿದರು.
ಸ್ಥಳಕ್ಕೆ ಶಿರಹಟ್ಟಿ ಪಿಎಸ್ಐ ಈರಣ್ಣ ರೀತ್ತಿ ಹಾಗೂ ಲಕ್ಷ್ಮೇಶ್ವರ, ಶಿರಹಟ್ಟಿ ಡಿಪೋ ಸಿಬ್ಬಂದಿ ಭೇಟಿ ನೀಡಿ ಮಾತನಾಡಿ, ವಿದ್ಯಾರ್ಥಿಗಳಿಗೆ ಆದಷ್ಟು ಬೇಗ ಸಮಸ್ಯೆ ಪರಿಶೀಲಿಸಿ ಮೇಲಾಧಿಕಾರಿಗಳ ಗಮನಕ್ಕೆ ತಂದು ಈ ಮಾರ್ಗವಾಗಿ ಹೆಚ್ಚುವರಿ ಬಸ್ ಬಿಡುವುದಾಗಿ ಹೇಳಿದರು. ಪ್ರತಿಭಟನಾ ನಿರತ ವಿದ್ಯಾರ್ಥಿಗಳು ಈ ನಿಗದಿತ ದಿನದೊಳಗೆ ಹೆಚ್ಚುವರಿ ಬಸ್ ಬಿಡದೆ ಹೋದಲ್ಲಿ ಪ್ರತಿಭಟನೆಯು ತಿವ್ರಗೊಳ್ಳುವುದಾಗಿ ಎಂದು ಎಬಿವಿಪಿ ಶಿರಹಟ್ಟಿ ತಾಲೂಕ ಅಧ್ಯಕ್ಷ ಪರಸುರಾಮ ಕಡೆಮನಿ ಎಚ್ಚರಿಸಿ ಪ್ರತಿಭಟನೆ ಹಿಂಪಡೆದರು.
