ಗದಗ: ಭಾರತೀಯ ಶಿಕ್ಷಣ ಸಂಸ್ಥೆ (ರಿ.), ಚಿಕ್ಕಟ್ಟಿ ಶಾಲಾ ಕಾಲೇಜುಗಳ ಸಹಯೋಗದಲ್ಲಿ “ಸಾಧಕರ ಸಂಭ್ರಮ – 2025” ಎಂಬ ಸಾಧಕರ ಸಮ್ಮಾನ ಸಮಾರಂಭವು ಇದೇ ಸೆಪ್ಟೆಂಬರ್ 28 ರಂದು, ಭಾನುವಾರ ಬೆಳಿಗ್ಗೆ 10.30ಕ್ಕೆ, ಚಿಕ್ಕಟ್ಟಿ ಸಂಸ್ಥೆಯ ಸಭಾಭವನದಲ್ಲಿ ಅದ್ದೂರಿಯಾಗಿ ಜರುಗಲಿದೆ.
ಈ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ತಮ್ಮ ಪರಿಶ್ರಮ, ನಿಸ್ವಾರ್ಥ ಸೇವೆ ಮತ್ತು ಸಮಾಜಮುಖಿ ಚಟುವಟಿಕೆಗಳ ಮೂಲಕ ಜನಮನಗಳನ್ನು ಗೆದ್ದಿರುವ ಗಣ್ಯ ವ್ಯಕ್ತಿಗಳಿಗೆ ಗೌರವ ಸಲ್ಲಿಸಲಾಗುತ್ತಿದೆ. ಈ ಮೂಲಕ ಯುವ ಪೀಳಿಗೆಗೆ ಪ್ರೇರಣೆ ನೀಡುವ ಉದ್ದೇಶವನ್ನು ಈ ಕಾರ್ಯಕ್ರಮ ಹೊಂದಿದೆ.
ಕಾರ್ಯಕ್ರಮಕ್ಕೆ ಮುಂಡರಗಿ ಸಂಸ್ಥಾನಮಠದ ಪರಮಪೂಜ್ಯ ಶ್ರೀ ಜಗದ್ಗುರು ನಾಡೋಜ ಡಾ. ಅನ್ನದಾನೀಶ್ವರ ಮಹಾಶಿವಯೋಗಿಗಳು ದಿವ್ಯ ಸಾನಿಧ್ಯ ವಹಿಸುವ ಮೂಲಕ ಆಶೀರ್ವಚನ ನೀಡಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಶ್ರೀ ಗುರುಲಿಂಗಯ್ಯ ಕೆ.ಪಿ, (ವ್ಯವಸ್ಥಾಪಕ ನಿರ್ದೇಶಕರು, ಸ್ವದೇಶಿ ದಿಶಾ, ಅರಸಿಕೇರೆ, ಜಿ. ಹಾಸನ) ಇವರು ಆಗಮಿಸಲಿದ್ದಾರೆ.
ಸಂಮಾನಗೊಳ್ಳಲಿರುವ ಸಾಧಕರ ಪಟ್ಟಿ
ಈ ಸಮಾರಂಭದಲ್ಲಿ ಕೆಳಗಿನ ಗಣ್ಯ ವ್ಯಕ್ತಿಗಳನ್ನು “ಸಾಧಕರ ಸಂಭ್ರಮ – 2025” ಗೌರವಕ್ಕೆ ಆಯ್ಕೆ ಮಾಡಲಾಗಿದೆ:
- ಶ್ರೀ ಜಗನ್ನಾಥ ಕೆ. ಜಮಾದಾರ– ನಿಲಯ ನಿರ್ದೇಶಕರು, ಸಹಕಾರ ಸಮುದಾಯ ರೆಡಿಯೋ, ಹುಲಕೋಟಿ, ಜಿ.ಗದಗ
- ಶ್ರೀ ರವಿ ಎಸ್. – ಮುಖ್ಯ ಸಂಪಾದಕರು, ಜೀ ಕನ್ನಡ ನ್ಯೂಸ್. ಬೆಂಗಳೂರು.
- ಡಾ.ರಾಮಾಶಾಸ್ತ್ರಿ ಎಸ್.ಜೀರೆ. ಅಧ್ಯಕ್ಷರು, ಸಾಯಿರಾಮ್ ಟ್ರಸ್ಟ್ ಕಮೀಟಿ, ಗಜೇಂದ್ರಗಡ, ಜಿ.ಗದಗ
- ಶ್ರೀಮತಿ ಸುನಿತಾ ಬುರುಡಿ – ಕಿರಿಯ ತರಬೇತಿ ಅಧಿಕಾರಿಗಳು, ಶ್ರೀ ಕೆ.ಎಚ್.ಪಾಟೀಲ ಸರ್ಕಾರಿ ಐಟಿಐ (W) ಗದಗ-ಬೆಟಗೇರಿ
- ಪ್ರಕಾಶಗೌಡ ಜಿ.ಪಾಟೀಲ. ಪ್ರಾಂಶುಪಾಲರು ಜೆ.ಟಿ.ಕಾಲೇಜು, ಗದಗ. ಭೌತಶಾಸ್ತ್ರದಲ್ಲಿ ಸಹ ಪ್ರಾಧ್ಯಾಪಕರು.
- ಭೀಮನಗೌಡ ಆರ್ ಮಿರ್ಜೆ. ನಿವೃತ್ತ ಪಿಕೆಪಿಎಸ್ ವ್ಯಸವ್ಥಾಪಕರು, ಅಡಹಳಟ್ಟಿ, ಜಿ.ಬೆಳಗಾವಿ
ಆಯೋಜಕರ ಸಂದೇಶ
“ಸಮಾಜದಲ್ಲಿ ಮಾದರಿಯಾಗಿರುವ ವ್ಯಕ್ತಿಗಳನ್ನು ಗೌರವಿಸುವುದು, ಅವರ ಸಾಧನೆಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸುವುದು ನಮ್ಮ ಸಂಸ್ಥೆಯ ಧ್ಯೇಯವಾಗಿದೆ. ‘ಸಾಧಕರ ಸಂಮಾನ – 2025’ ಕಾರ್ಯಕ್ರಮವು ವಿದ್ಯಾರ್ಥಿ ಸಮುದಾಯದಲ್ಲಿ ಪ್ರೇರಣೆ ಮೂಡಿಸಿ, ಸಮಾಜಮುಖಿ ಚಟುವಟಿಕೆಗಳಿಗೆ ಉತ್ತೇಜನ ನೀಡಲಿದೆ” ಎಂದು ಅವರು ಅಭಿಪ್ರಾಯಪಟ್ಟರು.
ಈ ಸಮಾರಂಭವನ್ನು ಯಶಸ್ವಿಯಾಗಿ ನಡೆಸಲು ಶಾಲೆಯ ಮುಖ್ಯೋಪಾಧ್ಯಾಯರು, ಶಿಕ್ಷಕ ವೃಂದ, ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಗಳು ಶ್ರಮಿಸುತ್ತಿದ್ದಾರೆ. ಸಾಂಸ್ಕೃತಿಕ ಕಾರ್ಯಕ್ರಮಗಳು, ವಿದ್ಯಾರ್ಥಿಗಳ ಕಲಾತ್ಮಕ ಪ್ರದರ್ಶನ ಹಾಗೂ ಅತಿಥಿಗಳ ಉಪನ್ಯಾಸಗಳು ಕಾರ್ಯಕ್ರಮದ ವಿಶೇಷ ಆಕರ್ಷಣೆಯಾಗಿವೆ.