ಗದಗ: ದಿನಾಂಕ 08-09-2025ರಂದು ನಗರದ ಬೋಮರೆಡ್ಡಿ ಸರ್ಕಲ್ನಲ್ಲಿ ಸಂಚಾರ ಪೊಲೀಸ್ ಠಾಣೆಯ ಪಿಎಸ್ಐ ಶ್ರೀ ಕಿರಣ್ ಕುಮಾರ್ ಅವರ ನೇತೃತ್ವದಲ್ಲಿ ಥರ್ಡ್ ಐ ಕೇಸ್ಗಳ ತಪಾಸಣೆ ನಡೆಯಿತು.
ಈ ಸಂದರ್ಭದಲ್ಲಿ ಗದಗ-ಬೆಟಗೇರಿ ನಗರಸಭೆಯ ವಾರ್ಡ್ ನಂ.21ರ ಸದಸ್ಯರಾದ ಶ್ರೀ ಮೆಹಬೂಬ್ ತಂದಿ ದಸ್ತಗಿರಸಾಬ್ ನದಾಫ್ (ಚಿಮ್ಮಿ) ಅವರ ಹೆಸರಿನ ಮೋಟಾರ್ಸೈಕಲ್ (KA26 EF 4325) ಮೇಲೆ ಒಟ್ಟು 48 ಥರ್ಡ್ ಐ ಕೇಸ್ಗಳು ದಾಖಲಾಗಿರುವುದು ಪತ್ತೆಯಾಯಿತು.
ವಾಹನದ ಮೇಲೆ 48 ಕೇಸ್ಗಳಿರುವ ಬಗ್ಗೆ ಮಾಹಿತಿ ನೀಡಿದಾಗ, ಅವರು ತಕ್ಷಣವೇ ಯಾವುದೇ ವಾದವಿವಾದವಿಲ್ಲದೆ ಎಲ್ಲಾ ಕೇಸ್ಗಳನ್ನು ಕ್ಲೋಸ್ ಮಾಡಲು ಒಪ್ಪಿಕೊಂಡು, ಒಟ್ಟು ರೂ.12,500 ಹಣವನ್ನು ನಗದು ಪಾವತಿಸಿ 48 ಕೇಸ್ಗಳನ್ನು ಕ್ಲೋಸ್ ಮಾಡಿಸಿದರು.
ಈ ಕಾರ್ಯದಲ್ಲಿ ಎಎಸ್ಐ ಪರಶುರಾಮ್ ಲಮಾಣಿ, ಸಿಬ್ಬಂದಿ ಎನ್.ಎಂ. ಕೋಟಗಿ, ಹಸನ್, ಸಂತೋಷ್, ಹೋಮ್ಗಾರ್ಡ್ಗಳು ರವಿ ಹಾಗೂ ವಿನಾಯಕ್ ಉಪಸ್ಥಿತರಿದ್ದು, ನಗರಸಭೆ ಸದಸ್ಯನ ಶಿಸ್ತುಬದ್ಧ ನಡೆಗೆ ಎಲ್ಲರೂ ಅಭಿನಂದನೆ ಸಲ್ಲಿಸಿದರು.