ಗದಗ: ಏಷ್ಯನ್ ಸರ್ಫಿಂಗ್ ಚಾಂಪಿಯನಶಿಫ್ 2025 ರ ಸರ್ಫಿಂಗ್ ಸ್ಪರ್ಧೆಯಲ್ಲಿ ಭಾಗವಹಿಸಿ ಸೆಮಿಫೈನಲ್ ಗೆದ್ದು ಫೈನಲ್ ಪಂದ್ಯಕ್ಕೆ ಆಯ್ಕೆ ಆಗಿ ಫೈನಲ್ ಪಂದ್ಯದಲ್ಲಿ ಕಂಚಿನ ಪದಕವನ್ನು ಪಡೆದು ದೇಶದ ಕಿರ್ತಿ ಹೆಚ್ಚಿಸಿದ ಗದಗ ಜಿಲ್ಲಾ ಮುಂಡರಗಿ ತಾಲೂಕಿನ ಮುರಡಿ ತಾಂಡಾದ ಬಂಜಾರ ಸಮಾಜದ ರಮೇಶ್ ಹನುಮಪ್ಪ ಬೂದಿಹಾಳ ಅವರ ಸಾಧನೆಗೆ ರಾಜ್ಯದ ಜನತೆ ಅಭಿನಂದಿಸುತ್ತಿದ್ದಾರೆ.
ಬೆಂಗಳೂರಿನ ವಿಧಾನಸೌಧದಲ್ಲಿ ರಾಜ್ಯ ಸರ್ಕಾರದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ರಮೇಶ ಹನುಮಪ್ಪ ಬೂದಿಹಾಳ ರವರಿಗೆ ಸನ್ಮಾನಿಸಿದರು.

ಈ ಸಂದರ್ಭದಲ್ಲಿ, ಗದಗ ಜಿಲ್ಲಾ ಉಸ್ತುವಾರಿಗಳು ಹಾಗೂ ಕರ್ನಾಟಕ ಸರ್ಕಾರದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವರು ಹಾಗೂ ಪ್ರವಾಸೋದ್ಯಮ ಇಲಾಖೆ ಸಚಿವರಾದ ಎಚ್. ಕೆ ಪಾಟೀಲ್, ಆದರಳ್ಳಿ ಗವಿಸಿದ್ದೇಶ್ವರ ಮಠದ ಪುಜ್ಯರಾದ ಡಾ. ಕುಮಾರ್ ಮಹಾರಾಜರು, ಮತ್ತು ಮನೋಜ ರಾಠೋಡ, ರೋಹಿತ್ ಲಮಾಣಿ, ಗಣೇಶ ಬೂದಿಹಾಳ , ಕೃಷ್ಣ ನಗರ ಮತ್ತಿತರಿದ್ದರು.