ಗದಗ: ರಾಜ್ಯ ಹಾಗೂ ದೇಶದಲ್ಲಿ ಆಗುತ್ತಿರುವ ಇತ್ತೀಚಿನ ಬೆಳವಣಿಗೆಗಳ ಕುರಿತು,ಗದಗನಲ್ಲಿ ಕೋಡಿಮಠದ ಶ್ರೀಗಳು ಮಾಧ್ಯಮಗಳೆದುರು ಮಾತನಾಡಿದ್ದಾರೆ. ಸಚಿವ ಕೆ.ಎನ್. ರಾಜಣ್ಣ ಅವರ ರಾಜೀನಾಮೆ ವಿಚಾರವನ್ನು ಉಲ್ಲೇಖಿಸಿದ ಶ್ರೀಗಳು, “ಅರಸನ ಅರಮನೆಗೆ ಕಾರ್ಮೋಡ ಕವಿದಿತೆಂಬುದನ್ನು ಎರಡು ತಿಂಗಳ ಹಿಂದೆಯೇ ನಾನು ಹೇಳಿದ್ದೆ. ಈಗ ಅದೇ ಮಾತು ನಿಜವಾಗಿದೆ. ಕೇಂದ್ರ ಹಾಗೂ ರಾಜ್ಯ ರಾಜಕೀಯಕ್ಕೆ ಅಪಾಯದ ಸೂಚನೆಗಳು ಕಾಣಿಸುತ್ತಿವೆ. ಕೇಂದ್ರದಲ್ಲಿ ಉಪ ರಾಷ್ಟ್ರಪತಿ ರಾಜೀನಾಮೆ ನೀಡಿದರೆ, ರಾಜ್ಯದಲ್ಲಿ ಕೆ.ಎನ್. ರಾಜಣ್ಣ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ,” ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ರಾಜಕೀಯದಲ್ಲಿ ‘ಕಾರ್ಮೋಡ’
“ನಾವು ಯುಗಾದಿ ಹಾಗೂ ಸಂಕ್ರಾಂತಿ ಸಂದರ್ಭದಲ್ಲಿ ಭವಿಷ್ಯ ಹೇಳುತ್ತೇವೆ. ರಾಜಕೀಯದಲ್ಲೂ ಈಗ ಕಾರ್ಮೋಡ ಇದೆ,” ಎಂದು ಸ್ವಾಮೀಜಿಗಳು ಹೇಳಿದರು.
ಅರಸನ ಅರಮನೆಯಲ್ಲಿ ಕಾರ್ಮೋಡ..
ಧರ್ಮಸ್ಥಳ ವಿಚಾರದಲ್ಲಿ ಅಪಪ್ರಚಾರವೇ ಪ್ರಬಲ..
ಇದೇ ವೇಳೆ, ಧರ್ಮಸ್ಥಳದ ವಿಷಯಕ್ಕೆ ಸಂಬಂಧಿಸಿದಂತೆ ಮಾತನಾಡಿದ ಶ್ರೀಗಳು, “ಸಮಾಚಾರ, ಪ್ರಚಾರ, ವಿಚಾರ, ಅಪಪ್ರಚಾರ — ಇವುಗಳಲ್ಲಿ ಪ್ರಬಲವಾದದ್ದು ಅಪಪ್ರಚಾರವೇ. ದೌರ್ಬಾಗ್ಯವೆಂದರೆ, ಸತ್ಯ ಹೊರಬರುವ ಮೊದಲು ಅಪಪ್ರಚಾರವೇ ಜನಮನದಲ್ಲಿ ಕೆಲಸ ಮಾಡುತ್ತದೆ. ಸತ್ಯ ಬಯಲಾಗುವವರೆಗೂ ನಿರೀಕ್ಷೆಯೊಂದಿಗೆ ಕಾಯುವುದು ಮುಖ್ಯ,” ಎಂದು ಹೇಳಿದರು.
ಧರ್ಮ ಹಾಗೂ ಪೂಜಾ ಪರಂಪರೆ ಬಗ್ಗೆ ಎಚ್ಚರಿಕೆ
ನೀಡಿದ ನೀಡಿದ ಸ್ವಾಮೀಜಿಗಳು, “ಒಳ್ಳೆಯ ದೇವರ ಗುಡಿಗಳ ಪೂಜೆ ಕ್ರಮೇಣ ನಿಲ್ಲುವ ಕಾಲ ಬರುತ್ತದೆ. “ಹಣೆ ಮೇಲೆ ವಿಭೂತಿ ಇಟ್ಟು ಹಣೆ ಕೆತ್ತಿಸ್ಯಾರು..ನಾಮ ಇಟ್ಟು ನಾಮ ಅಳಿಸುವ ಕಾಲ ಬರುತ್ತದೆ. ಧರ್ಮಕ್ಕೆ ಅವಹೇಳನ ಮಾಡುವ ಈ ಸಂದರ್ಭಗಳನ್ನು ಧೈರ್ಯದಿಂದ ಎದುರಿಸಿ, ಧರ್ಮವನ್ನು ಉಳಿಸಿಕೊಳ್ಳಬೇಕು,” ಎಂದು ಸಲಹೆ ನೀಡಿದರು.
ಹಾಲುಮತದವರ ಪಾತ್ರ ಹಾಗೂ ಶಕ್ತಿ
ಸಮಾಜದಲ್ಲಿ ಹಾಲುಮತದವರ ಪಾತ್ರವನ್ನು ಉಲ್ಲೇಖಿಸಿದ ಶ್ರೀಗಳು, “ಹಾಲು ಕೆಟ್ಟರೂ ಹಾಲು ಮತ ಕೆಡುವುದಿಲ್ಲ. ಹಾಲುಮತದವರಿಗೆ ಅಧಿಕಾರ ಬಂದರೆ, ಅದು ಕಸಿದುಕೊಳ್ಳುವದು ಕಷ್ಟ. ಅವರಾಗಿಯೇ ಅಧಿಕಾರವನ್ನು ಬಿಡಬೇಕು. ಹಕ್ಕು ಬುಕ್ಕರು ವಿಜಯನಗರ ಸಾಮ್ರಾಜ್ಯವನ್ನು ಸ್ಥಾಪಿಸಿದರು, ವಿಜಯದಶಮಿ ಆಚರಣೆ ಇಂದಿಗೂ ನಡೆಯುತ್ತಿದೆ. ಛತ್ರಪತಿ ಶಿವಾಜಿಯೂ ಹಾಲುಮತದವರೇ. ಹಾಲುಮತದವರಿಂದ ಸಮಾಜಕ್ಕೆ ಲೋಕೋತ್ತರ ಕಾಣಿಕೆಗಳಿವೆ, ಅವರಿಗೆ ದೈವಬಲವಿದೆ. ಚುನಾವಣೆಗಳಲ್ಲಿ ಮೊದಲ ಮತವನ್ನೂ ಹಾಲುಮತದವರೇ ಹಾಕಿಸುತ್ತಾರೆ,” ಎಂದು ಹೇಳಿದರು.
ಸಿದ್ದರಾಮಯ್ಯ ಕುರಿತ ಸ್ಪಷ್ಟನೆ..
“ನಾನು ಸಿದ್ದರಾಮಯ್ಯ ಅವರ ಬಗ್ಗೆ ಹೇಳಿಲ್ಲ, ಸಮಾಜದ ಕುರಿತು ಹೇಳಿದ್ದೇನೆ. ಹಾಲುಮತದವರಿಗೆ ಅಧಿಕಾರ ಬಂದರೆ ಬಿಡಿಸಿಕೊಳ್ಳುವುದು ಕಷ್ಟ, ಅವರೇ ಬಿಟ್ಟರೆ ಮಾತ್ರ ಸಾಧ್ಯ. ಕಳೆದ ಬಾರಿ ಐದು ವರ್ಷ ಸಿಎಂ ಆಗಿದ್ದವರು ಸ್ವಯಂ ಬಿಟ್ಟರಾ?” ಎಂದು ಪ್ರಶ್ನಿಸಿದರು.