ಲಕ್ಷ್ಮೇಶ್ವರ: ವಕ್ಫ್ ಬೋರ್ಡನಿಂದ ಇಲ್ಲಿನ ದರ್ಗಾ ಸುಧಾರಣೆ ಮತ್ತಿತ್ತರ ಅಭಿವೃದ್ಧಿ ಕಾರ್ಯಗಳಿಗೆ ಎಲ್ಲಾ ನೇರವು ನೀಡುವುದಾಗಿ ವಕ್ಫ್ ಬೋರ್ಡ್ ಅಧ್ಯಕ್ಷ ಹಾಪೀಜ್ ಸೈಯದ್ ಮೊಹಮ್ಮದ ಅಲಿ ಅಲ್ ಹುಸೈನಿ ಭರವಸೆ ನೀಡಿದರು.
ಲಕ್ಷ್ಮೇಶ್ವರ ಸುದ್ದಿ:ಪರಮೇಶ ಎಸ್ ಲಮಾಣಿ
ನೂತನವಾಗಿ ಆಯ್ಕೆಯಾದ ಕರ್ನಾಟಕ ರಾಜ್ಯ ವಕ್ಫ್ ಮಂಡಳಿಯ ಅಧ್ಯಕ್ಷರು ಹಾಗೂ ನಶೀನ್ ಹಜರತ್ ಖ್ವಾಜಾ ಬಂದೆನವಾಜ ಗುಲ್ಬರ್ಗಾ ಹಾಗೂ ಹಾಫೀಜ್ ಸೈಯ್ಯದ ಮೊಹಮ್ಮದ ಅಲಿ ಅಲ್- ಹುಸೈನಿ ರವರಿಗೆ ಸನ್ಮಾನ ಸಮಾಜರಂಭದಲ್ಲಿ ಪಾಲ್ಗೊಂಡು ಮಾತನಾಡಿದರು.
ಮುತ್ತುವಲ್ಲಿಗಳಾಗಲಿ ಕಮೀಟಿಗಳಾಗಲಿ ದರ್ಗಾಗಳಾಗಲಿ ಯಾರೇ ಕಾರ್ಯ ನಿರ್ವಹಿಸಿದರು ಪ್ರಾಮಾಣಿಕವಾಗಿ ನಿಯತವಾಗಿ ಪಾರದರ್ಶಕವಾಗಿ ಕಾರ್ಯ ನಿರ್ವಹಿಸಬೇಕು. ಏಕೆಂದರೆ ಎಲ್ಲದಕ್ಕೂ ವಕ್ಫ್ ಬೋರ್ಡ್ ಜವಾಬ್ದಾರಿ ಆಗಿರುತ್ತದೆ ಎಂದರು.
ಕಾಂಗ್ರೆಸ್ ಪಕ್ಷದ ಕೆಪಿಸಿಸಿ ಸದಸ್ಯ ಆನಂದಸ್ವಾಮಿ ಗಡ್ಡದೇವರಮಠ ಮಾತನಾಡಿ, ರಾಜಕೀಯವಾಗಿ ಎಲ್ಲಾ ಧರ್ಮದಲ್ಲಿ ಜಾತಿ ಜಾತಿಯಲ್ಲಿ ಜಗಳ ಹಚ್ಚುವ ಕೆಲಸವಾಗುತ್ತಿದೆ.ಆದರೆ ಒಗ್ಗಟ್ಟಿನಿಂದ ಇರುವ ಧರ್ಮ ಎಂದರೆ ಅದು ಮುಸ್ಲಿಂ ಧರ್ಮ. ಈಗಾಗಲೇ ಲಕ್ಷ್ಮೇಶ್ವರಕ್ಕೆ ಅಲ್ಪ ಸಂಖ್ಯಾತರ ಇಲಾಖೆಯಿಂದ 2 ಕೋಟಿ ಅನುದಾನ ಬಿಡುಗಡೆಯಾಗಿದೆ ಎಂದು ಹೇಳಿದರು.
ನಂತರ ವಿಧಾನ ಪರಿಷತ್ ಸದಸ್ಯ ಸಲೀಂ ಅಹಮ್ಮದ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯನೊಂದಿಗೆ ಚರ್ಚಿಸಿ ಆರ್ಥಿಕ ನೆರವು ದೊರಕಿಸಿಕೊಡುವ ಭರವಸೆ ನೀಡಿದರು.
ವೇದಿಕೆ ಮೇಲೆ ಆಶೀಫ್ ಅಲಿ ಹೀರಾಹುಸೇನ್, ಸುಜಾತಾ ದೊಡ್ಡಮನಿ, ಯಲ್ಲವ್ವ ದುರ್ಗಣ್ಣವರ, ಹುಮಾಯೂನ್ ಮಾಗಡಿ, ಸುಲೇಮಾನ ಕಣಕೆ, ಡಾ.ಅಬ್ದುಲ್ ಕರಿಮಸಾಬ್, ಎಂ.ಎಂ.ಗದಗ, ಸೈಯದ್ ಅಲಿ, ಹುಸೇನ್ ಹೈದರಲಿ, ದೀಶಾಂತ ಪಠಾಣ, ರಾಮಣ್ಣ ಲಮಾಣಿ, ದಾದಾಪೀರ ಮುಚಾಲೇ, ವೀರಯ್ಯ ಮಠಪತಿ, ಸಾಹೇಬ್ ಹವಾಲ್ದಾರ್, ನಜೀರ್ ಗದಗ, ಇಸ್ಮಾಯಿಲ್ ಆಡೂರ್, ಫೀರ್ದೋಷ ಆಡೂರ, ಕರೀಮಖಾನವರ ಸೇರಿದಂತೆ ದರ್ಗಾ ಹಾಗೂ ಅಂಜುಮನ್ ಕಮಿಟಿಯ ಪದಾಧಿಕಾರಿಗಳು ಮತ್ತು ಸಮಾಜದ ಮುಖಂಡರು ಉಪಸ್ಥಿತರಿದ್ದರು.