ಲಕ್ಷ್ಮೇಶ್ವರ: ತಾಲ್ಲೂಕಿನ ಒಡೆಯರ ಮಲ್ಲಾಪೂರ ಗ್ರಾಮದಲ್ಲಿ ಆಯುಷ್ ಆಸ್ಪತ್ರೆ ಆರಂಭಿಸುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಮನವಿಗೆ ಸ್ಪಂದಿಸಿದ ಆರೋಗ್ಯ ಸಚಿವ ದಿನೇಶ ಗುಂಡುರಾವ್ ಅವರು ಅತಿಶಿಘ್ರದಲ್ಲಿ ಹತ್ತು ಹಾಸಿಗೆಯ ಆಯುಷ್ ಆಸ್ಪತ್ರೆಗೆ ಭೂಮಿ ಪೂಜೆ ನೇರವೇರುವುದು ಅಂತ ಹೇಳಿದ್ದು ತಾಲೂಕಿನ ಜನರಲ್ಲಿ ಹರ್ಷ ಮೂಡಿದೆ ಎಂದು ಕೆಪಿಸಿಸಿ ಸದಸ್ಯರಾದ ಆನಂದಸ್ವಾಮಿ ಗಡ್ಡದೇವರಮಠ ಹಾಗೂ ಗ್ರಾಮ ಪಂಚಾಯತಿ ಸದಸ್ಯ ಪದ್ಮರಾಜ ಪಾಟೀಲ್ ಹೇಳಿದರು.
ಲಕ್ಷ್ಮೇಶ್ವರ ಸುದ್ದಿ: ಪರಮೇಶ ಲಮಾಣಿ.
ಈ ಕುರಿತು ಪತ್ರಿಕೆಯ ಜತೆ ಮಾತನಾಡಿದ ಅವರು, ಒಡೆಯರ ಮಲ್ಲಾಪೂರ ಗ್ರಾಮದಲ್ಲಿ ಆಯುಷ್ ಇಲಾಖೆಗೆ ಸೇರಿದ ನಿವೇಶನ ಇದ್ದು, ಇಲ್ಲಿಯೂ ಆಸ್ಪತ್ರೆ ತೆರೆಯುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ನಮ್ಮ ಮನವಿಗೆ ಸ್ಪಂದಿಸಿದ ಆರೋಗ್ಯ ಇಲಾಖೆ ಸಚಿವ ದಿನೇಶ ಗುಂಡೂರಾವ್ ಅವರು ಶಿರಹಟ್ಟಿ ತಾಲೂಕಿನ ನೂರು ಹಾಸಿಗೆಗಳುಳ್ಳ ಆಸ್ಪತ್ರೆಯ ಶಂಕುಸ್ಥಾಪನೆ ಕಾರ್ಯಕ್ರಮಕ್ಕೆ ಆಗಮಿಸಿ ಭಾಷಣ ಮಾಡುತ್ತ, ಶಿರಹಟ್ಟಿಗೆ ನೂರು ಹಾಸಿಗೆಗಳುಳ್ಳ ಆಸ್ಪತ್ರೆಗೆ ಶಂಕು ಸ್ಥಾಪನೆಯಾಗಿದ್ದು, ಮತ್ತು ನಿಮ್ಮ ಕ್ಷೇತ್ರದ ಒಡೆಯರ ಮಲ್ಲಾಪೂರ ಗ್ರಾಮದಲ್ಲಿ ಆದಷ್ಟು ಬೇಗ ಭೂಮಿ ಪೂಜೆ ನೇರವೇರುವ ಭರವಸೆ ನೀಡಿದ್ದಾರೆ. ಇದರಿಂದ ಕ್ಷೇತ್ರದ ಜನತೆಗೆ ಹರ್ಷವ್ಯಕ್ತವಾಗಿದೆ. ಈ ಭಾಗದ ನೀರಿಕ್ಷೆಯನ್ನ ಹುಸಿಗೊಳಿಸದ ಸರ್ಕಾರಕ್ಕೆ ಧನ್ಯವಾದ ತಿಳಿಸಲು ಖುಷಿಯಾಗುತ್ತದೆ ಎಂದರಲ್ಲದೇ, ಈ ಭಾಗದ ಜನರಿಗೆ ಈ ಆಸ್ಪತ್ರೆ ಅನೂಕೂಲವಾಗಲಿದ್ದು , ಜನರು ಸದುಪಯೋಗ ಪಡಿಸಿಕೊಳ್ಳಲಿದ್ದಾರೆ ಎಂದರು.
ಕೋಟ್:
ಲಕ್ಷ್ಮೇಶ್ವರ ತಾಲೂಕಿನ ಒಡೆಯರ ಮಲ್ಲಾಪೂರ ಗ್ರಾಮದಲ್ಲಿ ಹತ್ತು ಹಾಸಿಗೆ ಆಯುಷ್ ಆಸ್ಪತ್ರೆ ಗೆ ಮಂಜೂರಾತಿಗೆ ಕುಟುಂಬ ಕಲ್ಯಾಣ ಮತ್ತು ಆರೋಗ್ಯ ಇಲಾಖೆ ಸಚಿವರು ದಿನೇಶ ಗುಂಡೂರಾವ್ ಅವರಿಗೆ ಮನವಿ ಸಲ್ಲಿಸಿದ್ವಿ, ಮನವಿಗೆ ಸ್ಪಂದಿಸಿದ ಸಚಿವರು ಆದಷ್ಟು ಬೇಗ ಭೂಮಿಪೂಜೆ ನೇರವೇರಿಸುವ ಭರವಸೆ ನೀಡಿದ್ದು ತುಂಬಾ ಖುಷಿಯ ವಿಚಾರವಾಗಿದೆ.
ಉತ್ತಮ ಆಸ್ಪತ್ರೆಗಳಿಂದಾಗಿ ಮನುಷ್ಯನ ಆಯುಷ್ಯ ಹೆಚ್ಚಾಗಿದೆ. ಆಯುರ್ವೇದ ಚಿಕಿತ್ಸಾ ಪದ್ಧತಿ ಕಡೆಗೆ ಜನರ ಒಲವು ಹೆಚ್ಚುತ್ತಿದೆ. ಚಿಕಿತ್ಸೆ ಜತೆಗೆ ವಿರಾಮ ಪಡೆದು ಬರುತ್ತಿದ್ದಾರೆ. ಇನ್ನು ಮುಂದೆ ಇಲ್ಲೇ ಅಂಥಹ ಚಿಕಿತ್ಸೆ ದೊರೆಯಲಿದೆ.
ಆನಂದಸ್ವಾಮಿ ಜಿ ಗಡ್ಡದೇವರಮಠ, ಕೆಪಿಸಿಸಿ ಸದಸ್ಯರು
ಕೋಟ್:
ನಮ್ಮ ಗ್ರಾಮದ ವತಿಯಿಂದ ಈ ಭಾಗದ ಭರವಸೆಯ ನಾಯಕರಾದ ಕೆಪಿಸಿಸಿ ಸದಸ್ಯ ಆನಂದಸ್ವಾಮಿ ಗಡ್ಡದೇವರಮಠ ಅವರಿಗೆ ಆಯುಷ್ ಆಸ್ಪತ್ರೆಯ ಬಗ್ಗೆ ಮಾಹಿತಿ ನೀಡಿ ಸಚಿವರ ಗಮನಕ್ಕೆ ತಂದು ಮಂಜೂರು ಮಾಡಿಸಲು ಕೋರಿದ್ದೆವು. ನಮ್ಮ ಮನವಿಗೆ ಸ್ಪಂದಿಸಿ ನಮ್ಮನ್ನು ಸಚಿವರ ಕಡೆಗೆ ಕರೆದುಕೊಂಡು ಹೋಗಿ ಆಸ್ಪತ್ರೆಯ ವಿಚಾರವಾಗಿ ಮನವಿ ಸಲ್ಲಿಸಿದ್ದೆವು. ನಮ್ಮ ಕನಸು ನನಸು ಮಾಡುವ ಕೆಲಸ ಬಹುಬೇಗ ಆಗುವದಕ್ಕೆ ಸಚಿವರು ಭರವಸೆ ನೀಡಿದ್ದರೆ.
ಪದ್ಮರಾಜ ಪಾಟೀಲ್, ಗ್ರಾಮ ಪಂಚಾಯತಿ ಸದಸ್ಯರು ಒಡೆಯರ ಮಲ್ಲಾಪೂರ.