ಲಕ್ಷ್ಮೇಶ್ವರ: ರಾಜ್ಯ ಕಾಂಗ್ರೆಸ್ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಶಕ್ತಿ ಯೋಜನೆ ಮಹಿಳೆಯರಿಗೆ ಉಚಿತ ಬಸ್ ಸೇವೆ 500 ಕೋಟಿ ಗಡಿದಾಟಿದ ಹಿನ್ನೆಲೆ ರಾಜ್ಯಾದ್ಯಂತ ಹಮ್ಮಿಕೊಂಡಿರುವ ಸಂಭ್ರಮಾಚರಣೆಯ ಅಂಗವಾಗಿ ಲಕ್ಷ್ಮೇಶ್ವರ ಪಟ್ಟಣದ ಬಸ್ ನಿಲ್ದಾಣದಲ್ಲಿ ಎರಡು ಬಸ್ಸುಗಳಿಗೆ ಪೂಜೆ ಸಲ್ಲಿಸಿ ಸಿಹಿ ಹಂಚುವ ಮೂಲಕ ಸಂಭ್ರಮಾಚರಣೆ ಆಚರಿಸಲಾಯಿತು.
ಸಂಭ್ರಮಾಚರಣೆ ಕುರಿತು ಪಂಚ ಗ್ಯಾರಂಟಿ ತಾಲೂಕಾಧ್ಯಕ್ಷ ರಾಜು ಮಡಿವಾಳರ ಮಾತನಾಡಿ ಸರಕಾರ ಮಹಿಳೆಯರಿಗೆ ಉಚಿತ ಬಸ್ ವ್ಯವಸ್ಥೆ ಕಲ್ಪಿಸಿದ್ದರಿಂದ ಬಡ ಮಹಿಳೆಯರು ವ್ಯಾಪಾರ ಮಾಡುವ ಮೂಲಕ ತಮ್ಮ ಜೀವನವನ್ನು ಕಟ್ಟಿಕೊಂಡಿದ್ದಾರೆ. ನಮ್ಮ ತಾಲೂಕಿನಲ್ಲಿ ಮಹಿಳೆಯರು ವ್ಯಾಪಾರ ವಹಿವಾಟು ಮಾಡಲು ಬಸ್ ವ್ಯವಸ್ಥೆ ತುಂಬಾನೆ ಅನುಕೂಲ ವಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಪುರಸಭೆಯ ಅಧ್ಯಕ್ಷರು ಯಲ್ಲವ್ವ ದುರ್ಗಣ್ಣವರ, ತಿಪ್ಪಣ್ಣ ಸಂಶಿ ಆಶ್ರಯ ಸಮಿತಿ ಪುರಸಭೆ, ಮಾಜಿ ಶಾಸಕರು ರಾಮಣ್ಣ ಲಮಾಣಿ, ಹಾಗೂ ಫಕೀರೇಶ ಮ್ಯಾಟ್ಟಣ್ಣನವರ, ಶಶಿಕಲಾ ಬಡಿಗೇರ, ಜಯಮ್ಮ ಕಳ್ಳಿ ಹಾಗೂ ಇನ್ನೂ ಅನೇಕರು ಉಪಸ್ಥಿತರಿದ್ದರು.