ಲಕ್ಮೇಶ್ವರ: ವಿದ್ಯಾರ್ಥಿಗಳು ಉನ್ನತಮಟ್ಟದ ಶಿಕ್ಷಣ ಪಡೆದು ವಿದ್ಯಾವಂತರಾಗಿ ಸಮಾಜಕ್ಕೆ ಹಾಗೂ ಹೆತ್ತ ತಂದೆ ತಾಯಿಯರಿಗೆ ಗೌರವ ತಂದ ಕೊಡಬೇಕು ಹಾಗೂ ಸಮಾಜದಿಂದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮಾಡುವುದರಿಂದ ವಿದ್ಯಾರ್ಥಿಗಳಿಗೆ ಓದುವುದಕ್ಕೆ ಇನ್ನು ಹೆಚ್ಚು ಪ್ರೋತ್ಸಾಹ ಕೊಟ್ಟತ್ತಾಗುತ್ತದೆ ಇಂಥ ಕಾರ್ಯಕ್ರಮ ಮಾಡಿ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಕೊಡಬೇಕು ಎಂದು ಶಾಸಕ ಡಾ.ಚಂದ್ರು ಲಮಾಣಿ ಹೇಳಿದರು.
ಅವರು ಪಟ್ಟಣದ ಚನ್ನಮ್ಮನ ವನ ಸಭಾಭವನದಲ್ಲಿ ಜರುಗಿದ ತಾಲೂಕು ಕನಕ ನೌಕರರ ಸಂಘ ಲಕ್ಷ್ಮೆಶ್ವರ ತಾಲೂಕು ಹಾಲುಮತದ ಸಮಾಜದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ನಿವೃತ್ತ ನೌಕರರಿಗೆ ಮತ್ತು ಸಾಧಕರಿಗೆ ಸನ್ಮಾನ ಸಮಾರಂಭ ಹಾಗೂ ಲಕ್ಷ್ಮೇಶ್ವರ ತಾಲೂಕು ಕನಕ ನೌಕರರ ಪತ್ತಿನ ಸಹಕಾರ ಸಂಘದ ಉದ್ಘಾಟನಾ ಸಮಾರಂಭವನ್ನು ಉದ್ಘಾಟಿಸಿದರು ಮಾತನಾಡಿದರು.
ಈ ವೇಳೆಗೆ ದಿವ್ಯ ಸಾನಿಧ್ಯ ವಹಿಸಿದ್ದ ಶ್ರೀ ಡಾ. ಬಸವರಾಜ್ ದೇವರು ರೇವಣ ಸಿದ್ದೇಶ್ವರ ಮಹಾ ಮಠ ಮನ್ಸೂರ ಧಾರವಾಡ, ಪರಮ ಪೂಜ್ಯ ಶ್ರೀ ಸಿದ್ದಯ್ಯ ಷಣ್ಮುಖಯ್ಯ ಅಮೋಘೀಮಠ ಹುಲ್ಲೂರ ಆಶೀರ್ವಚನ ನೀಡಿದರು.
ಈ ಸಂದರ್ಭದಲ್ಲಿ ಮಾಜಿ ಶಾಸಕರಾದ ಜಿ ಎಂ ಮಹಾಂತಶೆಟ್ಟರ ರವರು, ರಾಮಣ್ಣ ಲಮಾಣಿ ರವರು, ರಾಮಕೃಷ್ಣ ದೊಡ್ಡಮನಿ ಅವರು, ಮಂಜುನಾಥ್ ಎಸ್ ಕೊಕ್ಕರಗುಂದಿ ಅಧ್ಯಕ್ಷರು ಕನಕ ನೌಕರರ ಸಂಘ ಲಕ್ಷ್ಮೆಶ್ವರ ಘಟಕ, ಶ್ರೀಮತಿ ಎಲ್ಲಮ್ಮ ದುರ್ಗನ್ನವರ ಪುರಸಭೆ ಅಧ್ಯಕ್ಷರು, ಮುಖಂಡರಾದ ಫಕೀರಪ್ಪ ಹೆಬಸೂರ, ಶೇಖಣ್ಣ ಕಾಳೆ, ವಿಜಿ ಪಡೆಗೇರಿ, ನಿಂಗಪ್ಪ ಬನ್ನಿ, ವೀರೇಂದ್ರಗೌಡ ಎಸ್ ಪಾಟೀಲ, ಹನುಮಂತಪ್ಪ ಹುರುಕನವರ, ರಾಮಣ್ಣ ರಿತ್ತಿ, ಸೋಮಣ್ಣ ಬೆಟಿಗೇರಿ, ಶ್ರೀಮತಿ ಅಡವೆಕ್ಕ ಬೆಟಗೇರಿ, ಅಪ್ಪಣ್ಣ ರಾಮಗಿರಿ, ಯಲ್ಲಪ್ಪ ಸೂರಣಗಿ, ಮುದಕಪ್ಪ ಗದ್ದಿ, ನಿಂಗಪ್ಪ ಬಂಕಾಪುರ, ಬಸವರಾಜ ಹೊಳಲಾಪುರ, ಮಲ್ಲಪ್ಪ ಗದ್ದಿ, ಮಂಜಪ್ಪ ಶರಸುರಿ, ಛಾಯಪ್ಪ ಬಸಾಪುರ, ಹಾಲಪ್ಪ ಸೂರಣಗಿ, ನೀಲಪ್ಪ ಶರಸೂರಿ, ರಾಮಣ್ಣ ಗೋಣಿಯಪ್ಪನವರ ಹಾಗೂ ಸಂಘದ ಎಲ್ಲ ಪದಾಧಿಕಾರಿಗಳು ಸಮಾಜದ ಮುಖಂಡರು ಗುರು ಹಿರಿಯರು ವಿದ್ಯಾರ್ಥಿ ಮಿತ್ರರು ತಾಯಿಂದಿರು ಉಪಸ್ಥಿತರಿದ್ದರು.