ಲಕ್ಷೇಶ್ವರ: ನಗರದ ಪೋಸ್ಟ ಆಫೀಸ್ ಎದುರಿನ ರಸ್ತೆಯಿಂದ ಶಿಗ್ಲಿ ನಾಕಾ ದವರೆಗಿನ ರಸ್ತೆ ಮಧ್ಯದಲ್ಲಿ ಡಿವೈಡರ್ ಅಳವಡಿಸುವಂತೆ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಸೇನೆ ಲಕ್ಷ್ಮೇಶ್ವರ ತಾಲೂಕ ಘಟಕ ಹಾಗೂ ಜಿಲ್ಲಾ ಘಟಕದ ವತಿಯಿಂದ ರಸ್ತೆ ತಡೆಮಾಡಿ ಪ್ರತಿಭಟನೆ ನಡೆಯಿತು.
ಲಕ್ಷ್ಮೇಶ್ವರ ಸುದ್ದಿ:ಪರಮೇಶ ಲಮಾಣಿ
ಉದ್ದೇಶಿಸಿ ಮಾತನಾಡಿದ ಜಿಲ್ಲಾಧ್ಯಕ್ಷ ಶರಣು ಗೋಡಿ , ತಾಲೂಕ ಅಧ್ಯಕ್ಷ ನಾಗೇಶ ಅಮರಾಪೂರ, ಕಾರ್ಯ ಅಧ್ಯಕ್ಷ ಇಸ್ಮಾಯಿಲ್ ಆಡೂರ ರಾಜ್ಯ ಹೆದ್ದಾರಿಯಾದ ಪಾಳಾ-ಬದಾಮಿ ರಸ್ತೆ ಇದ್ದು, ಕಳೆದ 2-3 ವರ್ಷಗಳ ಹಿಂದೆ ಲಕ್ಷ್ಮೇಶ್ವರ ಗದಗ ಸರ್ಕಲ್ ದಿಂದ ಶಿಗ್ಲಿ ನಾಕಾದವರಿಗೆ ಸಿ.ಸಿ. ರಸ್ತೆ ನಿರ್ಮಾಣ ಮಾಡಿ ಪೋಸ್ಟ ಆಫೀಸಿನಿಂದ ಶಿಗ್ಲಿನಾಕಾದ ವರೆಗೆ ರಸ್ತೆ ಮಧ್ಯದಲ್ಲಿ ಡಿವೈಡರ್ ಅಳವಡಿಸುವಂತೆ 23 ಮೇ, ರಂದು ಹೊಸ ಬಸ್ ನಿಲ್ದಾಣದ ಹತ್ತಿರ ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ 20 ದಿನದ ಗಡುವನ್ನು ಕೊಟ್ಟು ಈ ಕುರಿತು ಮನವಿಯನ್ನು ಸಲ್ಲಿಸಿದರು ಕ್ಯಾರೆ ಎನ್ನದಿರುವುದು ವಿಷಾದಕರ ಸಂಗತಿ.
ಈ ರಸ್ತೆಯಲ್ಲಿ ದಿನನಿತ್ಯ ಅನೇಕ ಅಪಘಾತಗಳು ಸಂಘವಿಸುತ್ತಿವೆ. ಇಲ್ಲಿ ಹೆಚ್ಚಿನ ವಾಹನ ದಟ್ಟಣೆ ಇರುವುದರಿಂದ ವಾಹನ ಚಾಲಕರು ರಸ್ತೆಗೆ ಡಿವೈಡರ್ ಇಲ್ಲದೇ ‘ಇರುವುದರಿಂದ ತಮ್ಮ ಮನಸಾ ಇಚ್ಛೆ ವಾಹನವನ್ನು ಅಡ್ಡಾದಿಡ್ಡಿ ಚಲಾಯಿಸುತ್ತಿದ್ದಾರೆ. ಇದರಿಂದ ಇಲ್ಲಿ ಶಾಲಾ ಕಾಲೇಜು ವಿದ್ಯಾರ್ಥಿಗ:ಳು, ವಯೋವೃದ್ಧರು, ಬೇರೆ ಬೇರೆ ಗ್ರಾಮಗಳಿಂದ ವ್ಯಾಪಾರಕ್ಕಾಗಿ ಲಕ್ಷ್ಮೇಶ್ವರ ನಗರಕ್ಕೆ ಬರುತ್ತಾರೆ. ಜನರ ಜೀವನ ರಕ್ಷಣೆ ಮಾಡುವ ಅಧಿಕಾರಿಗಳೇ ನಿರ್ಲಕ್ಷ್ಯ ತೋರಿಸಿದರೆ ಯಾರು ಸಾರ್ವಜನಿಕರ ಜೀವಕ್ಕೆ ಬೆಲೆಯೇ ಇಲ್ಲದಂತಾಗಿದೆ. ಒಂದು ವೇಳೆ ತಮ್ಮ ಕುಟುಂಬದ ಸದಸ್ಯರಿಗೆ ಹೀಗಾಗಿದ್ದರೆ ತಾವು ಸಹಿಸಿಕೊಳ್ಳುತ್ತಿದ್ದೀರಾ.
ಬಸ್ಸ್ಟ್ಯಾಂಡ್ ಹತ್ತಿರ ಮಧ್ಯರಾತ್ರಿ ರಸ್ತೆ ದೀಪಗಳು ಇಲ್ಲದ್ದರಿಂದ ಕಳ್ಳ ರು ಹೆಚ್ಚಾಗುತ್ತಿದ್ದು, ಸುಮಾರು ಮನೆಗಳು ಕಳ್ಳತನವೂ ಆಗಿದೆ. ಇದರ ಬಗ್ಗೆ ಬೆಳಕಿನ ವ್ಯವಸ್ಥೆ ಮಾಡಲು ಪುರಸಭೆಗೆ ಮನವಿ ಮಾಡಿಕೊಂಡಾಗ ಅವರು ತಮ್ಮ ಇಲಾಖೆಗೆ ಬರುತ್ತದೆ ಅವರು ಮಾಡಿದ ನಂತರ ನಾವು ಮಾಡುತ್ತೇವೆ ಎಂದು ಹಾರಿಕೆ ಉತ್ತರ ನೀಡುತ್ತಾರೆ ಹಾಗಾದರೆ ನಾವು ಕೇಳುವುದಾದರೂ ಯಾರನ್ನು ಎಂಬುದು ತಿಳಿಯಾದಾಗಿದೆ. ತಕ್ಷಣ ಕಾಮಗಾರಿಯನ್ನು ಕೈಗೊಳ್ಳದಿದ್ದರೆ ನಮ್ಮ ವೇದಿಕೆಯಿಂದ ಹಾಗೂ ಸಾರ್ವಜನಿಕರ ಸಹಯೋಗದೊಂದಿಗೆ ರಸ್ತೆ ಬಂದ್ ಮಾಡಿ, ಆಮರಣ ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳಲಾಗುವುದು. ಮುಂದಾಗುವ ಅನಾಹುತಗಳಿಗೆ ತಾವೇ ನೇರ ಜವಾಬ್ದಾರರು ಆಗುತ್ತೀರಿ ಎಂದು ಎಚ್ಚರಿಸಿದರು.
ಮನವಿ ಸ್ವೀಕರಿಸಿ ಮಾತನಾಡಿದ ಲೋಕೋಪಯೋಗಿ ಇಲಾಖೆ ಅಧಿಕಾರಿ ಫಕ್ಕೀರೇಶ ತಿಮ್ಮಾಪೂರ ಎರಡು ತಿಂಗಳ ಒಳಗಾಗಿ ಕಾಮಗಾರಿ ಪ್ರಾರಂಬಿಸಲಾಗುವುದು.
ಸಂದರ್ಭದಲ್ಲಿ ಮುತ್ತಣ್ಣ ಗಡದವರ್, ಯಲ್ಲಪ್ಪ ಹಂಜಗಿ, ಮಾಂತೇಶ ಉಮಚಗಿ, ಗೌಸ ಸವಣೂರ, ಬಾಬು ಮನಿಯಾರ, ಇರ್ಪಾನ್, ಲಕಮನ್, ಶರಣಪ್ಪ, ಫಕ್ಕೀರೇಶ ರಿತ್ತಿ, ಕಾಶಿಂ, ಝರೀನಾ, ಶಕುಂತಲಾ, ಪ್ರವೀಣ,ಅಭಿಷೇಕ, ಕೈಸರ್ ಮತ್ತಿತರಿದ್ದರು.