ಲಕ್ಷ್ಮೇಶ್ವರ: ಪಟ್ಟಣ ಮತ್ತು ಗ್ರಾಮೀಣ ಪ್ರದೇಶದ ರಸ್ತೆಗಳನ್ನು ಅಭಿವೃದ್ಧಿ ಪಡಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇನೆ. ಜನರ ಬಹು ವರ್ಷಗಳ ರಸ್ತೆಯ ಬೇಡಿಕೆಗಳನ್ನು ಎಲ್ಲರ ಸಹಕಾರದಿಂದ ಈಡೇರಿಸುವ ಕೆಲಸ ಮಾಡುತ್ತಿದ್ದೇನೆ ಎಂದು ಶಾಸಕ ಡಾ. ಚಂದ್ರು ಲಮಾಣಿ ಹೇಳಿದರು.
ಲಕ್ಷ್ಮೇಶ್ವರ ವರದಿ: ಪರಮೇಶ ಲಮಾಣಿ
ಲಕ್ಷ್ಮೇಶ್ವರ ಪಟ್ಟಣದ ಬಾನು ಮಾರ್ಕೆಟ್ ನಿಂದ ದೂದನಾನಾ ದರ್ಗಾದವರೆಗೆ ನಡೆದ ₹ 2 ಕೋಟಿ ವೆಚ್ಚದಡಿ ಕಾಂಕ್ರೀಟ್ ರಸ್ತೆ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕಳೆದ 20 ವರ್ಷಗಳಿಂದ ಕ್ಷೇತ್ರದಲ್ಲಿ ಅಭಿವೃದ್ಧಿ ಕಾಣದ ರಸ್ತೆಗಗಳಿಗೂ ಅನುದಾನ ತಂದು ಅಭಿವೃದ್ಧಿಪಡಿಸುವ ಕೆಲಸ ಮಾಡುತ್ತಿದ್ದೆವೆ ಎಂದರು
‘ನಾನು ಶಾಸಕನಾದ ಮೇಲೆ ತಾಲ್ಲೂಕಿನ ಎಲ್ಲಾ ಕ್ಷೇತ್ರಗಳಲ್ಲಿಯೂ ಅಭಿವೃದ್ಧಿ ಕಾಣುತ್ತಿದೆ. ನನ್ನ ಅಧಿಕಾರ ಮುಗಿಯುವುದರೊಳಗೆ ತಾಲ್ಲೂಕಿನ ಎಲ್ಲಾ ರಸ್ತೆಗಳನ್ನು ಡಾಂಬರ್ ರಸ್ತೆಗಳನ್ನಾಗಿ ಮಾಡಲಾಗುವುದು’ ಎಂದು ಭರವಸೆ ವ್ಯಕ್ತಪಡಿಸಿದರು.
ಕೆಲಸ ನಡೆಯುವ ಸ್ಥಳದಲ್ಲಿ ಕೆಲವರ ಅಡಚಣೆ, ಕ್ರಮಕ್ಕೆ ಮನವಿ:
ನಾವು ಮತ್ತು ಸಂಬಂಧಿಸಿದ ಪುರಸಭೆ ಸದಸ್ಯರು ಮತ್ತು ಹಿರಿಯರು ಕಷ್ಟಪಟ್ಟು ಅನುದಾನ ತರುತ್ತೆವೆ. ಆದರೆ ಕೆಲವರು ಕೆಲಸ ಮಾಡುವ ಸಮಯದಲ್ಲಿ ಕೆಲಸಗಳಿಗೆ ಅಡ್ಡಿ ಪಡಿಸುತ್ತಾರೆ. ಮಣ್ಣು ಕಳಪೆ ಆಗಿದೆ, ಸಿಮೆಂಟ್ ಸರಿಯಿಲ್ಲ ಎಂದು ಸುಳ್ಳು ಆರೋಪ ಮಾಡಿ ಕೆಲಸ ನಿಲ್ಲಿಸುವಂತೆ ದಾಂದಲೆ ಮಾಡುತ್ತಾರೆ. ಅವರು ಹೇಳುವ ಮಣ್ಣು ತಗೆದುಕೊಂಡರೆ ಮಾತ್ರ ಸರಿಯಿದೆ ಎನ್ನುವ ಇವರು ಬೇರೆ ಕಡೆಯಿಂದ ಅದೇ ಮಣ್ಣು ತಂದರೆ ಕಳಪೆ ಎನ್ನುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರಲ್ಲದೇ, ಹೀಗಾದರೆ ಅಭಿವೃದ್ಧಿ ಕೆಲಸಗಳು ಕುಂಠಿತವಾಗುತ್ತದೆ. ಇಂತಹರ ಮೇಲೆ ಸಂಭವಿಸಿದ ಪುರಸಭೆ ಅಧಿಕಾರಿಗಳು, ಸದಸ್ಯರು ಜಿಲ್ಲಾಧಿಕಾರಿಗಳಿಗೆ ಕ್ರಮ ಕೈಗೊಳ್ಳುವಂತೆ ಪತ್ರ ಬರೆಯಬೇಕು ಎಂದರು.
ಗುತ್ತಿಗೆದಾರರು ಯಾವುದೇ ಕಾರಣಕ್ಕೂ ಕಳಪೆ ಗುಣಮಟ್ಟದ ಮಣ್ಣು, ಸಿಮೆಂಟ್ ಮತ್ತು ಸಾಮಗ್ರಿಗಳನ್ನು ಬಳಸಬಾರದು ಎಂದು ಹೇಳಿದರು. ನಾನು ಆಗಾಗ ಬಂದು ಕಾಮಗಾರಿಯನ್ನು ವಿಕ್ಷಣೆ ಮಾಡುತ್ತೆನೆ. ಕಳಪೆ ಕಂಡು ಬಂದರೆ ಸಂಭವಿಸಿದ ಅಧಿಕಾರಿಗೆ ಕ್ರಮ ಜರುಗಿಸಲು ಪತ್ರ ಬರೆಯಲಾಗುವುದು ಎಂದು ಗುತ್ತಿಗೆದಾರರಿಗೆ ಎಚ್ಚರಿಸಿದರು.
ಈ ಸಂದರ್ಭದಲ್ಲಿ ಪುರಸಭೆ ಮುಖ್ಯಾಧಿಕಾರಿ ಮಹಾಂತೇಶ ಬೆಳಗಿ, ಯಲ್ಲವ್ವ ದುರ್ಗನವರ, ಉಪಾಧ್ಯಕ್ಷ ಪೀರ್ದೋಷ ಆಡೂರ, ವಾಣಿ ಹತ್ತಿ, ವಿಜಯ ಕರಡಿ,ರಾಮು ಗಡದವರ, ಸಾಹೇಬಜಾನ್ ಹವಾಲ್ದಾರ್, ಝಾಕೀರ ಹುಸೇನ್ ಹವಾಲ್ದಾರ್, ಸುಲೇಮಾನ ಕಣಕೆ, ದಾದಾಪೀರ ಮೂಜಾಲೆ, ಎಂ.ಆರ್.ಪಾಟೀಲ್ ಅಶ್ವೀನಿ ಅಂಕಲಕೋಟಿ, ಪೂರ್ಣಿಮಾ ಪಾಟೀಲ್ ಸೇರಿದಂತೆ ಅನೇಕರು ಹಾಜರಿದ್ದರು.