ಗದಗ ಜೂನ್ 26 : 2025/26 ನೇ ಸಾಲಿನಲ್ಲಿ ಆದರ್ಶ ವಿದ್ಯಾಲಯ ಕೊರ್ಲಹಳ್ಳಿ ತಾ; ಮುಂಡರಗಿ ಶಾಲೆಯಲ್ಲಿ ತರಗತಿ 7 ನೇ-01, 9ನೇ-4 ಹಾಗೂ ಆದರ್ಶ ವಿದ್ಯಾಲಯ ಇಟಗಿ ತಾ; ರೋಣ ಶಾಲೆಯಲ್ಲಿ ತರಗತಿ 7ನೇ-6, 8ನೇ-10, 9ನೇ-4ನೇ ಆದರ್ಶ ವಿದ್ಯಾಲಯಗಳಲ್ಲಿ ಖಾಲಿ ಸೀಟುಗಳ ಪ್ರವೇಶ ಪ್ರಕ್ರಿಯೆ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ಆಯಾ ಶಾಲೆಗಳಲ್ಲಿ ಆರ್ಜಿ ಸಲ್ಲಿಸಲು ಕೂನೆಯ ದಿ: 25-06-2025 ರಿಂದ 8-7-2025 ರ ವರೆಗೆ ಸಲ್ಲಿಸಬಹುದಾಗಿದೆ.. ಪರೀಕ್ಷೆ ನಡೆಯುವ ದಿ: ಆಯಾ ಬ್ಲಾಕ್‌ಗಳಲ್ಲಿ ದಿ: 15-7-2025 , ಅರ್ಜಿಯನ್ನು ಸೂಕ್ತ ದಾಖಲಾತಿಗಳೊಂದಿಗೆ ಸಂಬಂಧಿಸಿದ ಶಾಲಾ ಮುಖ್ಯ ಶಿಕ್ಷಕರಿಗೆ ಸಲ್ಲಿಸುವುದು, ಮಿಸಲಾತಿ ಅನ್ವಯ ಖಾಲಿ ಸೀಟುಗಳನ್ನು ಆಯಾ ತರಗತಿಗಳಿಗೆ ಭರ್ತಿ ಮಾಡಿಕೂಂಡು ದಾಖಲಾತಿ ಪ್ರಕ್ರಿಯನ್ನು ದಿ: 30-7-2025 ರೊಳಗಾಗಿ ಪೂರ್ಣಗೊಳಿಸುವುದು, ಮುಖ್ಯ ಶಿಕ್ಷಕರ ಜವಾಬ್ದಾರಿಯಾಗಿದೆ.
ಹೆಚ್ಚಿನ ಮಾಹಿತಿಗಾಗಿ ಆದರ್ಶ ವಿದ್ಯಾಲಯದ ಶಾಲಾ ಮುಖ್ಯ ಶಿಕ್ಷಕರಿಗೆ ಸಂಪರ್ಕಿಸುವುದು, ನೋಡಲ್ ಅಧಿಕಾರಿಗಳು ಡಯಟ್ ಗದಗ ಕೆ.ಪಿ ಸಾಲಿಮಠ, ಮೊಬೈಲ್ ನಂಬರ 8762487691 ಸಂಪರ್ಕಿಸಲು ಕೋರಲಾಗಿದೆ ಎಂದು ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಉಪನಿರ್ದೇಶಕರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.