ಲಕ್ಷ್ಮೇಶ್ವರ: ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ತಾಲ್ಲೂಕು ಪಂಚಾಯಿತಿ ತ್ರೈಮಾಸಿಕ ಸಭೆಯು ಶಾಸಕ ಡಾ. ಚಂದ್ರು ಲಮಾಣಿ ಅವರ ಅಧ್ಯಕ್ಷತೆಯಲ್ಲಿ ಬುಧವಾರ ನಡೆಯಿತು.
ಲಕ್ಷ್ಮೇಶ್ವರ ಸುದ್ದಿ: ಪರಮೇಶ ಲಮಾಣಿ.
‘ಜನರು ಸಮಸ್ಯೆಯಲ್ಲಿ ಸಿಲುಕಿದಾಗ ಅಧಿಕಾರಿಗಳು ಮತ್ತು ಸಮಿತಿ ಸದಸ್ಯರು ಸ್ಪಂದಿಸಬೇಕು. ಅದಕ್ಕಾಗಿ ಸರ್ಕಾರ ವಿವಿಧ ಸಮಿತಿಗಳಿಗೆ ನೇಮಕ ಮಾಡಿದ್ದು, ಅವರ ಕೆಲಸಗಳಿಗೆ ಅಧಿಕಾರಿಗಳು ಸಹಕರಿಸಬೇಕು’ ಎಂದು ಶಾಸಕರ ಡಾ.ಚಂದ್ರು ಲಮಾಣಿ ಸಭೆಗೆ ತಿಳಿಸಿದರು.
ಇಲ್ಲಿನ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ, ಬುಧವಾರ ನಡೆದ ತಾಲ್ಲೂಕು ಪಂಚಾಯಿತಿ ತ್ರೈಮಾಸಿಕ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
‘ತಾಲ್ಲೂಕಿನಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮತ್ತು ಹೆಸ್ಕಾಂ, ಇಲಾಖೆಯು ಹೆಚ್ಚಿನ ಕೆಲಸ ಮಾಡಬೇಕಾಗಿದೆ. 150 ಪಡಿತರ ಚೀಟಿ ಹೊಂದಿದ ಹಳ್ಳಿಗಳಿಗೆ ರೇಷನ್ ನೀಡುತ್ತಿಲ್ಲ, ಅದನ್ನು ಅಧಿಕಾರಿಗಳು ಸರಿಪಡಿಸಬೇಕು’ ಎಂದು ಆಹಾರ ಇಲಾಖೆಯ ಅಧಿಕಾರಿ ಬಸವರಾಜಗೆ ತಿಳಿಸಿದರು.
ನಿರ್ಮಿತಿ ಕೇಂದ್ರದವರು ಯಾರಿಗೂ ಸ್ಪಂದನೆ ನೀಡುವದಿಲ್ಲ, ಯಾವುದೇ ಸಭೆಗೆ ಹಾಜರಾಗುದಿಲ್ಲ , ಗುತ್ತಿಗೆ ಆಧಾರದ ಮೇಲೆ ಇರುವ ಸಿಬ್ಬಂದಿಗಳಿಗೆ ಕಳಿಸಿಕೊಡುತ್ತಾರೆ. ನಿರ್ಮಿತ ಕೇಂದ್ರ ಸುಪರ್ ವೈಸರ್ ಬಸವರಾಜ ಅವರಿಗೆ ಸಭೆಗೆ ಕಳಿಸುತ್ತಾರೆ. ಶಾಲೆ, ಸೌಚಾಲಯ, ಅಂಗನವಾಡಿಯು ಇವರ ಇಲಾಖೆ ಆಗಿದೆ. ಆದರೆ ಕಳಪೆ ಮಟ್ಟದಲ್ಲಿ ಆಗಿವೆ ಇದಕ್ಕೆ ಉದಾಹರಣೆಗೆ ಲಕ್ಷ್ಮೇಶ್ವರ ಪಟ್ಟಣ ಮೌಲಾನಾ ಆಜಾದ ಶಾಲೆ ಕಳಪೆ ಮಟ್ಟದಾಗಿದೆ, ಇದಕ್ಕೆ ತನಿಖೆ ನಡೆಸಲು ಶಾಸಕ ಚಂದ್ರು ಲಮಾಣಿ ಸೂಚನೆ ನೀಡಿದರು.
ಹೆಸ್ಕಾಂ ಇಲಾಖೆಯ ಲೈನ್ಮೆನ್ ಗಳು ರೈತರ ಸಣ್ಣಪುಟ್ಟ ಕೆಲಸಕ್ಕೂ ಹಣ ಕೇಳುತ್ತಾರೆ ಎಂಬ ಆರೋಪ ಬರ್ತಾಯಿದೆ. ಅಂತಹವರ ವಿರುದ್ಧ ಕ್ರಮ ಜರುಗಿಸಬೇಕೆಂದು ಅಧಿಕಾರಿಗಳಿಗೆ ತಾಕಿತು ಮಾಡಿದರು.
ಶಾಲೆಬಿಟ್ಟ ಮಕ್ಕಳನ್ನು ಮತ್ತೆ ಶಾಲೆಗೆ ಕರೆತರುವ ಕೆಲಸ ಮಾಡಬೇಕು. ಅದಕ್ಕಾಗಿ ಸ್ಥಳೀಯ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ನೆರವನ್ನು ಪಡೆಯಬೇಕೆಂದು ಶಾಸಕರು ತಿಳಿಸಿದರು.
ಸಭೆಯಲ್ಲಿ ತಾಲ್ಲೂಕು ಪಂಚಾಯಿತಿ ಆಡಳಿತಾಧಿಕಾರಿ, ಎಂ.ವಿ ಚಳಕೇರಿ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಕೃಷ್ಣಪ್ಪ ಧರ್ಮರ್ ಸೇರಿದಂತೆ ಹಲವರು ಇದ್ದರು.