ಗದಗ, ಜೂನ್ 24:ಸಚಿವ ಹೆಚ್.ಕೆ.ಪಾಟೀಲರ ಅಕ್ರಮ ಗಣಿ ಪತ್ರ ಸಂಬಂಧ ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಎಚ್.ಡಿ. ಕುಮಾರಸ್ವಾಮಿ ನೀಡಿರುವ ಪ್ರತಿಕ್ರಿಯೆಗೆ ಗದಗ ಜಿಲ್ಲೆಯಲ್ಲಿಂದು ಸಚಿವ ಎಚ್.ಕೆ. ಪಾಟೀಲ ತಿರುಗೇಟು ನೀಡಿದ್ದಾರೆ.
ಈ ಕುರಿತು ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, “ಅಕ್ರಮ ಗಣಿ ವರದಿ ಇಟ್ಟುಕೊಂಡು ಸಿಎಂ ಸಿದ್ದರಾಮಯ್ಯ ಪೂಜೆ ಮಾಡುತ್ತಾ ಕುಳಿತಿದ್ರಾ ಎಂದು ಪ್ರಶ್ನೆ ಹಾಕುತ್ತಿರುವ ಕುಮಾರಸ್ವಾಮಿಯವರು, ತಮ್ಮ ಆಡಳಿತಾವಧಿಯಲ್ಲಿ ಅವರ ಕೈಯಲ್ಲಿದ್ದ ಅದೇ ವರದಿಗೆ ಏನು ಮಾಡಿದರು?” ಎಂಬ ಪ್ರಹಾರಮುಖ ಟೀಕೆ ಮಾಡಿದ್ದಾರೆ.
“ನೀವು ವರದಿಗೆ ಅಭಿಷೇಕ ಮಾಡ್ತಾ ಕುಳಿತಿದ್ರಾ?”
“ಅಕ್ರಮ ಗಣಿ ವರದಿ ನನ್ನ ಪತ್ರದ ಮುಖ್ಯ ವಿಷಯವಲ್ಲ. ನಾನು ಬರೆದ ಪತ್ರದುದ್ದಕ್ಕೂ ಒಂದು ವಿಚಾರವನ್ನು ಮಾತ್ರ ಜೋರಾಗಿ ಬರೆದಿದ್ದೇನೆ. ರಾಜ್ಯದ ಸಂಪತ್ತು ಮರಳಿ ಕನ್ನಡಿಗರಿಗೆ ದೊರಕಬೇಕು. ಅಕ್ರಮ ಗಣಿಕಾಯದ ಮೂಲಕ ನಷ್ಟವಾದ ಒಂದೂವರೆ ಲಕ್ಷ ಕೋಟಿ ರೂಪಾಯಿ ಮೌಲ್ಯದ ಸಂಪತ್ತನ್ನು ರಾಜ್ಯಕ್ಕೆ ತರುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ.” ಆದರೆ , ಅಕ್ರಮ ಗಣಿ ವರದಿ ಇಟ್ಟುಕೊಂಡು ಸಿಎಂ ಸಿದ್ದರಾಮಯ್ಯ ಇಷ್ಟು ದಿನ ಪೂಜೆ ಮಾಡುತ್ತಾ ಕುಳಿತಿದ್ರಾ ಎಂದು ಮಾತನಾಡುತ್ತೀರಿ. ಕುಮಾರಸ್ವಾಮಿ ಅವರೇ, ಇದೀಗ ನಾನು ಕೇಳೋಕೆ ಬಯಸ್ತಿನಿ.ಹಾಗಾದ್ರೆ ನೀವು ಸಿಎಂ ಇದ್ದಾಗ ಗಣಿ ಅಕ್ರಮದ ವರದಿ ನಿಮ್ಮ ಕೈಯಲ್ಲಿ ಇದ್ದವು. ಆಗ ಆ ವರದಿಗಳನ್ನ ಅಭಿಷೇಕ ಮಾಡುತ್ತ ಕುಳಿತ್ತಿದ್ರಾ..? ಎಂದು ತಿರುಗೇಟು ಕೊಟ್ಟಿದ್ದಾರೆ.
ಕುಮಾರಸ್ವಾಮಿಗೆ ನೇರ ಕರೆ
“ಮಾಜಿ ಸಿಎಂ ಆಗಿದ್ದ ಹೆಚ್.ಡಿ. ಕುಮಾರಸ್ವಾಮಿಯವರು ಈ ಹೋರಾಟದಲ್ಲಿ ಮುಂದಾಳತ್ವ ವಹಿಸಲಿ. ಅವರು ಬಹುದೊಡ್ಡ ಸ್ಥಾನದಲ್ಲಿದ್ದುಕೊಂಡಿದ್ದಾರೆ. ನನ್ನ ಪತ್ರದ ಉದ್ದೇಶ, ಕಾರಣದ ಬಗ್ಗೆ ಸುದೀರ್ಘವಾಗಿ ಪತ್ರದಲ್ಲಿ ಬರೆದಿದ್ದೇನೆ. ನಮ್ಮ ರಾಜ್ಯದಲ್ಲಿ ಒಂದು ಪದ್ಧತಿ ಇದೆ. ಬಹಳಷ್ಟು ಸಂದರ್ಭದಲ್ಲಿ ದಾರಿತಪ್ಪಿಸುವವರು ಇರ್ತಾರೆ. ಕುಂಭಕರ್ಣ, ರಾವಣ, ಅಂತಾ ಪೌರಾಣಿಕ ನಾಟಕ ಹೆಸರು ತೆಗೆದುಕೊಂಡು ಮಾತನಾಡ್ತಾರೆ. ಇಂತಹ ಮಾತುಗಳನ್ನು ಬಿಡಿ. ಪೌರಾಣಿಕ ಪಾತ್ರಗಳ ಹೆಸರುಗಳನ್ನ ತೆಗೆದುಕೊಂಡು ಮಾತನಾಡುವ ಬದಲು, ಪ್ರಜಾಪ್ರಭುತ್ವದ ಸ್ಥಿರತೆಗೆ ಧಕ್ಕೆಯಾಗುವ ಅಕ್ರಮ ಗಳಿಗೆ ತಡೆಯಲು ಕೈಜೋಡಿಸಲಿ. ಇದು ರಾಜಕೀಯದ ವಿಷಯವಲ್ಲ. ಇದು ಸಾರ್ವಜನಿಕ ಹಿತದ ಪ್ರಶ್ನೆ,” ಎಂದು ಅವರು ಹೇಳಿದ್ದಾರೆ.
“ನನ್ನ ಪತ್ರ ಕಸದ ಬುಟ್ಟಿಗೋ? ಕ್ರಮದ ತೊಟ್ಟಿಗೋ?”
ಹೆಚ್.ಕೆ. ಪಾಟೀಲ ತಮ್ಮ ಬರೆದ ಪತ್ರದ ಕುರಿತು ಮಾತನಾಡುತ್ತ, “ನನ್ನ ಪತ್ರ ಕಸದ ಬುಟ್ಟಿಗೆ ಹೋಗುತ್ತದೆಯೋ ಅಥವಾ ಕ್ರಮ ಕೈಗೊಳ್ಳುವ ದಿಕ್ಕಿಗೆ ಹೋಗುತ್ತದೆಯೋ ಕಾಲವೇ ಉತ್ತರಿಸಲಿ. ನಾನು ಯಾರಿಗೆ ಪತ್ರ ಬರೆದಿದ್ದೇನೆ, ಅವರು ಅದನ್ನು ನಿರ್ಧರಿಸಬೇಕು,” ಎಂದು ವಿವೇಚನೆಯುತವಾಗಿ ಹೇಳಿದರು.
ವ್ಯಕ್ತಿಗತ ಟೀಕೆಗೆ ಸ್ಪಷ್ಟ ಉತ್ತರ
2012ರ ಪ್ರಕರಣದ ಕುರಿತು ಕುಮಾರಸ್ವಾಮಿಯವರು ಮಾಡಿರುವ ಟೀಕೆಗೂ ಪಾಟೀಲ ಸ್ಪಷ್ಟನೆ ನೀಡಿದ್ದಾರೆ. “ನಾನು ಎಲ್ಲಿಯೂ ನನ್ನ ಪತ್ರದಲ್ಲಿ ಕುಮಾರಸ್ವಾಮಿ ಅವರ ಹೆಸರನ್ನೇ ಉಲ್ಲೇಖಿಸಿದ್ದೇ ಇಲ್ಲ. ಅವರೇ 2012 ರಲ್ಲಾದ ಪ್ರಕರಣ ಎತ್ತುತ್ತಿದ್ದಾರೆ ” ಎಂದು ಹಳೆಯ ಆರೋಪಗಳಿಗೆ ತೆರೆ ಹಾಕಿದರು.
ಒಟ್ಟಾರೆ, ಹೆಚ್.ಕೆ. ಪಾಟೀಲ ಮತ್ತು ಎಚ್.ಡಿ. ಕುಮಾರಸ್ವಾಮಿ ನಡುವಿನ ಈ ವಾಗ್ದಾಳಿ ಇದೀಗ ಅಕ್ರಮ ಗಣಿ ಪ್ರಕರಣದ Rajadharm ಕುರಿತು ರಾಜ್ಯ ರಾಜಕಾರಣದಲ್ಲಿ ನವಚರ್ಚೆಗೆ ಕಾರಣವಾಗಿದೆ. ಜನತೆ ಹಾಗೂ ಮಾಧ್ಯಮದ ಕಣ್ಣುಗಳು ಈಗ ಸಿಎಂ ಸಿದ್ದರಾಮಯ್ಯ ಅವರ ಮುಂದಿನ ಹೆಜ್ಜೆಯತ್ತ ನೆಟ್ಟಿವೆ.ಒಟ್ನಲ್ಲಿ “ಕುಮಾರಸ್ವಾಮಿ ಅವರ ಪೂಜೆಯೋ Vs ಹೆಚ್.ಕೆ.ಪಾಟೀಲರ ಅಭಿಷೇಕವೋ” ಇವರೆಡರ ಫಲಾಫಲ ಅನ್ನೋದನ್ನ ಕಾದು ನೋಡಬೇಕು!?