ಗದಗ:ಪ್ರಸ್ತುತ ದಿನಮಾನದಲ್ಲಿ ಮನುಷ್ಯ ಹಲವಾರು ಒತ್ತಡಗಳಲ್ಲಿ ಸಿಲುಕಿ ಬದುಕನ್ನು ಹತಗೊಳಿಸಿಕೊಳ್ಳುವ ಅಂಚಿನಲ್ಲಿ ನಿಂತಿದ್ದಾನೆ, ನೆಮ್ಮದಿಯಿಲ್ಲದೆ ಅಶಾಂತಿಯ ಆಗರಕ್ಕೆ ತನ್ನನ್ನ ತಾನೇ ದೂಡಿಕೊಂಡಿದ್ದಾನೆ, ಅನಾರೋಗ್ಯಕ್ಕೆ ತುತ್ತಾಗಿದ್ದಾನೆ, ಹತ್ತು ಹಲವಾರು ವಿಷಯಗಳ ವಾಸನೆಯಲ್ಲಿ ಮುಳುಗಿದ್ದಾನೆ. ಅಂತಿಮವಾಗಿ ಜೀವದ ಅಭದ್ರದ ತುತ್ತ ತುದಿಗೆ ಬಂದು ಬಿಟ್ಟಿದ್ದಾನೆ ಇಂತೆಲ್ಲಾ ಮಾನಸಿಕ ಒತ್ತಡಗಳಿಂದ ಹೊರ ಬರಬೇಕೆಂದರೆ ಯೋಗ ಒಂದೇ ಪೂರಕ ಸಾಧನವಾಗಿದೆ ಎಂದು ಖ್ಯಾತ ವೈದ್ಯರು ಹಾಗೂ ಯೋಗ ಗುರು ಡಾ.ಸತೀಶ ಹೊಂಬಾಳಿಯವರು ಅಭಿಪ್ರಾಯ ಪಟ್ಟರು.
ಅವರು ಸ್ಟುಡೆಂಟ್ ಎಜ್ಯುಕೇಶನ್ ಸೊಸೈಟಿಯ, ಸನ್ಮಾರ್ಗ ಪದವಿ ಪೂರ್ವ ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ಹಮ್ಮಿಕೊಳ್ಳಲಾದ ೧೧ ನೇ ಅಂತರಾಷ್ತ್ರೀಯ ಯೋಗ ದಿನಾಚರಣೆಯ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡುತ್ತಾ “ಒಂದೇ ಭೂಮಿ ಒಂದೇ ಆರೋಗ್ಯ”ಎಂಬ ಯೋಗ ದಿನಾಚರಣೆಯ ಗುರಿಯನ್ನು ಸಾಧಿಸಲು ಸಿದ್ದರಾಗಬೇಕು. ೧೪೪ ಆಸನಗಳಲ್ಲಿ ಸರಳವಾದ ಆಸನಗಳನ್ನು ಆಯ್ಕೆ ಮಾಡಿಕೊಂಡು ಯೋಗ ಚತ್ರವೃತ್ತಿ ನಿರೋಧ ಎಂಬ ಪತಂಜಲಿಯ ವಾಣಿಯನ್ನು ಜೀವನದಲ್ಲಿ ಅಳವಡಿಸಿಕೊಳ್ಳಲು ಕರೆಕೊಟ್ಟರು.
ಸಮಾರಂಭದಲ್ಲಿ ಸಂಸ್ಥೆಯ ನಿರ್ದೇಶಕರಾದ ಪ್ರೊ.ರೋಹಿತ್ ಒಡೆಯರವರು ಅತಿಥಿಗಳನ್ನು ಪರಿಚಯಿಸಿ ಪ್ರಾಸ್ತಾವಿಕ ನುಡಿಗಳನ್ನಾಡುತ್ತಾ ಯೋಗದಿಂದ ಭಾರತ ವಿಶ್ವಗುರು ಸ್ಥಾನಕ್ಕೆರಿದೆ. ಜೀವನ ಶೈಲಿಯ ಬದಲಾವಣೆಗೆ ಯೋಗ ಅವಶ್ಯಕವಾಗಿ ಪ್ರತಿಯೊಬ್ಬರಿಗೂ ಬೇಕು. ವಿದ್ಯಾರ್ಥಿಗಳಿಗೆ ದೈಹಿಕ , ಮಾನಸಿಕ, ಭಾವನಾತ್ಮಕ ನಿಯಂತ್ರಣ ಮತ್ತು ಸುಧಾರಣೆಗೆ ಯೋಗವನ್ನು ರೂಢಿಸಿಕೊಳ್ಳಲು ತಿಳಿಸಿದರು.
ಸಂಸ್ಥೆಯ ಚೇರಮನರಾದ ಪ್ರೊ.ರಾಜೇಶ ಕುಲಕರ್ಣಿಯವರು ಮಾತನಾಡಿ, ವಿದ್ಯಾರ್ಥಿಗಳಲ್ಲಿ ಆತ್ಮ ವಿಶ್ವಾಸ ಕೊರತೆ ನಿವಾರಣೆಗೆ ಆಲಸ್ಯತನದಿಂದ ಹೊರಬರಲು ಯೋಗವನ್ನು ರೂಢಿಸಿಕೊಳ್ಳಬೇಕು. ಅಂದಾಗ ವಿದ್ಯಾರ್ಥಿಗಳು ತಾವು ಇಟ್ಟುಕೊಂಡ ಗುರಿ ಸಾಧನಗಳನ್ನು ಸರಳವಾಗಿ ಸಾಧಿಸಬಹುದೆಂದು ನುಡಿದರು.
ಸಮಾರಂಭದಲ್ಲಿ ಅಧ್ಯಕ್ಷಿಯ ನುಡಿಗಳನ್ನಾಡಿದ ಪ್ರಾಚಾರ್ಯರಾದ ಪ್ರೊ.ಪ್ರೇಮಾನಂದ ರೋಣದರವರು, ಜ್ಞಾನ, ಭಕ್ತಿ, ಕರ್ಮ ಯೋಗಗಳು ವಿದ್ಯಾರ್ಥಿಯಲ್ಲಿ ಜಾಣ್ಮೆ, ಶಕ್ತಿ, ಭಾವನಾತ್ಮಕಗಳಲ್ಲಿ ಗಟ್ಟಿಗೊಳಿಸುತ್ತವೆ ಎಂಬ ಹೊಂಬಾಳಿ ಸರ್ ಅವರ ಮಾತುಗಳನ್ನು ಮನದಲ್ಲಿ ಮೂಡಿಸಿಕೊಂಡು ಮುನ್ನಡೆಯಬೇಕೆಂದರು.
ಸಮಾರಂಭದ ವೇದಿಕೆಯ ಮೇಲೆ ಸಂಸ್ಥೆಯ ನಿರ್ದೇಶಕರಾದ ಪ್ರೊ.ಪುನೀತ ದೇಶಪಾಂಡೆ, ಪ್ರೊ.ರಾಹುಲ್ ಒಡೆಯರ, ಪ್ರೊ.ಸಯ್ಯದ್ ಮತ್ತೀನ್ ಮುಲ್ಲಾ ಆಡಳಿತಾಧಿಕಾರಿಗಳಾದ ಶ್ರೀ.ಎಂ.ಸಿ.ಹಿರೇಮಠ ಉಪಸ್ಥಿತರಿದ್ದರು. ಮೊದಲಿಗೆ ಉಪನ್ಯಾಸಕಿ ಪ್ರೊ.ಹೀನಾ ಕೌಸರ್ ಸ್ವಾಗತಿಸಿದರು, ಪ್ರೊ.ಚೇತನಾ ಬೊಮ್ಮಣ್ಣನವರ ವಂದಿಸಿದರು. ಪ್ರೊ. ಎಚ್.ಎಸ್.ದಳವಾಯಿ ಕಾರ್ಯಕ್ರಮ ನಿರೂಪಿಸಿದರು.
ಇದೇ ಸಂದರ್ಭದಲ್ಲಿ ಸಂಸ್ಥೆಯಿಂದ ಸಿದ್ದಪಡಿಸಿದ ಯೋಗ ಪುಸ್ತಕವನ್ನು ಬಿಡುಗಡೆಗೊಳಿಸಲಾಯಿತು ನಂತರ ವಿದ್ಯಾರ್ಥಿಗಳಿಗೆ ಹಲವಾರು ಆಸನಗಳನ್ನು ಹೇಳಿಕೊಡುವುದರ ಜೊತೆಗೆ ಯೋಗದ ಬಗ್ಗೆ ಪಿಪಿಟಿ ಪ್ರೆಸೆಂಟೇಶನ್ ಮುಖಾಂತರ ತಿಳಿಸಲಾಯಿತು,