ಲಕ್ಷ್ಮೇಶ್ವರ: ಪೂರ್ವ ಮುಂಗಾರು ಮಳೆ ಉತ್ತಮವಾಗಿದ್ದು, ಗದಗ ಜಿಲ್ಲೆಯ ರೈತರ ಮೊಗದಲ್ಲಿ ಸಂತಸ ತಂದಿದೆ. ಲಕ್ಷ್ಮೇಶ್ವರ ತಾಲೂಕಿನಲ್ಲಿ ಬಿತ್ತನೆ ಕೂಡ ಚುರುಕುಗೊಂಡಿದೆ. ಕೆಲವರು ಈಗಾಗಲೇ ಬಿತ್ತನೆ ಮಾಡಿದ್ದರೆ, ಬಹುತೇಕರು ಬಿತ್ತನೆಗೆ ಹೊಲ ಸಿದ್ಧಗೊಳಿಸುವಲ್ಲಿ ತೊಡಗಿದ್ದಾರೆ. ಹಾಗಿದ್ದರೆ, ಜಿಲ್ಲೆಯಲ್ಲಿ ಹೇಗಿದೆ ಕೃಷಿ ಚಟುವಟಿಕೆ..? ಬೀಜ-ಗೊಬ್ಬರ ದಾಸ್ತಾನು ಎಷ್ಟಿದೆ ಎಂಬ ಕುರಿತು ಇಲ್ಲಿದೆ ಸಿಟಿ ಎಕ್ಸಪ್ರೆಸ್ ಗದಗ ವರದಿ.
ಲಕ್ಷ್ಮೇಶ್ವರ ಸುದ್ದಿ:ಪರಮೇಶ ಎಸ್ ಲಮಾಣಿ.
ತಾಲೂಕಿನಲ್ಲಿ ಮಾರ್ಚ್ 1 ರಿಂದ ಮೇ 31ರವರೆಗೆ ಪೂರ್ವ ಮುಂಗಾರು ಮಳೆ ಎಂದು ಕರೆಯಲಾಗುತ್ತದೆ. ಈ ಅವಧಿಯಲ್ಲಿ ವಾಡಿಕೆಯಂತೆ ಜಿಲ್ಲೆಯಲ್ಲಿ 93 ಎಂ.ಎಂ. ಮಳೆ ಆಗಬೇಕಿತ್ತು. ಆದರೆ, ಲಕ್ಷ್ಮೇಶ್ವರ ತಾಲೂಕಿನಲ್ಲಿ 71 ಎಂ.ಎಂ. ಮಳೆಯಾಗಿದ್ದು, ಶೇ.16ರಷ್ಟು ಹೆಚ್ಚಾಗಿದೆ. ಇನ್ನು ಮೇ ತಿಂಗಳು ನೋಡುವುದಾದರೆ, ವಾಡಿಕೆಯಂತೆ 55 ಎಂ.ಎಂ. ಆಗಬೇಕಿತ್ತು. ಆದರೆ, ಆಗಿರುವುದು 78 ಎಂ.ಎಂ. ಹಾಗಾಗಿ, ಶೇ.170ರಷ್ಟು ಹೆಚ್ಚು ಮಳೆಯಾಗಿದೆ. ಇದರಿಂದ ಬಿತ್ತನೆಗೆ ಭೂಮಿ ತೇವಗೊಂಡಿದ್ದು, ಕೃಷಿ ಚಟುವಟಿಕೆ ಚುರುಕುಗೊಂಡಿದೆ.
ಲಕ್ಷ ಹೆಕ್ಟೇರ್ ಬಿತ್ತನೆ ಗುರಿ: ಲಕ್ಷ್ಮೇಶ್ವರ ತಾಲೂಕಿನಲ್ಲಿ ಈ ಮುಂಗಾರಿನಲ್ಲಿ ಲಕ್ಷ ಹೆಕ್ಟೇರ್ ಬಿತ್ತನೆಗೆ ಕೃಷಿ ಇಲಾಖೆ ಗುರಿ ಇಟ್ಟುಕೊಂಡಿದೆ. ಬಿತ್ತನೆಗೆ ಅಗತ್ಯ ಬೀಜ-ಗೊಬ್ಬರವನ್ನು ದಾಸ್ತಾನು ಮಾಡಿದೆ. ಕಳೆದ ವರ್ಷ ಹೆಸರು,ಮೆಕ್ಕೆಜೋಳ, ಸೇಂಗಾ ಬೆಳೆಗೆ ಉತ್ತಮ ಬೆಲೆ ಸಿಕ್ಕಿತ್ತು. ಹಾಗಾಗಿ, ರೈತರು ಈ ಬಾರಿಯೂ ಹೆಸರು, ಸೋಯಾಬೀನ್, ಮೆಕ್ಕೆಜೋಳ ಬಿತ್ತನೆಯತ್ತ ಮುಖ ಮಾಡಿದ್ದಾರೆ. ಜೊತೆಗೆ ಭತ್ತ, ಶೇಂಗಾ, ಕಬ್ಬು, ತೊಗರಿ ಸೇರಿದಂತೆ ಮತ್ತಿತರ ಬೆಳೆ ಬಿತ್ತನೆಯಲ್ಲಿ ತೊಡಗಿದ್ದಾರೆ.
ಬಿತ್ತನೆಗೆ ರೈತರ ಉತ್ಸಾಹ :ಕಳೆದ ಬಾರಿ ತಾಲೂಕಿನ ಕೆಲವೆಡೆ ಮುಂಗಾರು ಮಳೆ ಕೈ ಕೊಟ್ಟಿದ್ದರಿಂದ ರೈತರಿಗೆ ನಷ್ಟವಾಗಿತ್ತು. ಈ ಬಾರಿ ಪೂರ್ವ ಮುಂಗಾರು ಉತ್ತಮ ಮಳೆಯಾಗಿದೆ. ಬಿತ್ತನೆಗೆ ಭೂಮಿ ಹದಗೊಂಡಿದ್ದರಿಂದ ರೈತರು ಉತ್ಸಾಹದಿಂದ ಬಿತ್ತನೆಗೆ ಸಜ್ಜಾಗಿದ್ದಾರೆ. ಈಗಾಗಲೇ ತಾಲೂಕಿನಲ್ಲಿ ಶೇ.57 ರಷ್ಟು ಬಿತ್ತನೆಯಾಗಿದ್ದು, ಇನ್ನುಳಿದ ರೈತರು ಬಿತ್ತನೆಗೆ ಹೊಲ ಸಿದ್ಧಗೊಳಿಸುತ್ತಿದ್ದಾರೆ. ಜಿಲ್ಲೆಯಲ್ಲಿ ಲಕ್ಷ ಹೆಕ್ಟೇರ್ ಭೂಮಿಯಲ್ಲಿ ಬಿತ್ತನೆ ಗುರಿ ಹೊಂದಲಾಗಿದೆ. ಅದರಲ್ಲಿ ಮೆಕ್ಕೆಜೋಳ, ಭತ್ತ , ಹೆಸರು, ಶೇಂಗಾ ಲಕ್ಷ ಹೆಕ್ಟೇರ್ ಸೇರಿ ವಿವಿಧ ಬೆಳೆಗಳನ್ನು ಬೆಳೆಯಲು ರೈತರು ಮುಂದಾಗಿದ್ದಾರೆ.
ಭೂಮಿ ಉಳುತ್ತಿರುವ ರೈತ-ಬೀಜ-ಗೊಬ್ಬರ ದಾಸ್ತಾನು ಇಷ್ಟಿದೆ:ಮುಂಗಾರು ಉತ್ತಮ ಮಳೆ ಆಗಿದ್ದರಿಂದ ಈ ಬಾರಿ ಹೆಚ್ಚಿನ ಪ್ರಮಾಣದಲ್ಲಿ ಬಿತ್ತನೆ ಆಗುವ ನಿರೀಕ್ಷೆ ಹಿನ್ನೆಲೆಯಲ್ಲಿ ಸಾವಿರಾರು ಕ್ವಿಂಟಾಲ್ ಬೀಜಕ್ಕೆ ಬೇಡಿಕೆ ಇದೆ. ಆದರೆ, ಕೃಷಿ ಇಲಾಖೆಯು ರೈತರ ಬೇಡಿಕೆಯಂತೆ ಕ್ವಿಂಟಾಲ್ ಗಂಟಲೆ ವಿವಿಧ ಬೀಜಗಳನ್ನು ದಾಸ್ತಾನು ಮಾಡಿಕೊಂಡಿದೆ. ಆ ಪೈಕಿ ಭತ್ತ,ಹೆಸರು,ಮೆಕ್ಕೆಜೋಳ ಸಾವಿರ ಕ್ವಿಂಟಾಲ್ ಬೀಜಗಳನ್ನು ಬೇಡಿಕೆಗೆ ತಕ್ಕಂತೆ ಸಂಗ್ರಹಿಸಲಾಗಿದೆ. ಅದೇ ರೀತಿ ಮೆಟ್ರಿಕ್ ಟನ್ ವಿವಿಧ ರಸಗೊಬ್ಬರದ ಬೇಡಿಕೆ ಇದೆ.ಈಗಾಗಲೇ ಗೊಬ್ಬರ ದಾಸ್ತಾನುಗೊಂಡಿದೆ. ಅದರಲ್ಲಿ ಯೂರಿಯಾ ಮೆ.ಟನ್, ಡಿಎಪಿ, ಎಂಒಪಿ ಕಾಂಪ್ಲೆಕ್ಸ್,ಎಸ್‌ಎಸ್‌ಪಿ ಮೆ.ಟನ್ ರಸಗೊಬ್ಬರ ಸಂಗ್ರಹಿಸಲಾಗಿದೆ. ಅದರೊಂದಿಗೆ ರೈತರ ಬೇಡಿಕೆ ಅನುಸಾರ ಗೊಬ್ಬರ ಪೂರೈಸಲು ಕೃಷಿ ಇಲಾಖೆ ಸಿದ್ಧವಿದೆ ಎಂದು ಕೃಷಿ ಇಲಾಖೆ ಅಧಿಕಾರಿ ಚಂದ್ರಶೇಖರ ನರಸಮ್ಮನ್ನವರ್ ತಿಳಿಸಿದ್ದಾರೆ.
ಬೀಜ-ಗೊಬ್ಬರ ಕೊರತೆ ಇಲ್ಲ : ಸಿಟಿ ಎಕ್ಸಪ್ರೆಸ್ ಜೊತೆಗೆ ಮಾತನಾಡಿದ ಕೃಷಿ ಇಲಾಖೆ ಅಧಿಕಾರಿ ನರಸಮ್ಮನ್ನವರ್, “ಈ ವರ್ಷ ಪೂರ್ವ ಮುಂಗಾರು ಮಳೆ ಉತ್ತಮವಾಗಿದ್ದರಿಂದ ಬಿತ್ತನೆ ಭರದಿಂದ ಸಾಗಿದೆ. ಆ ನಿಟ್ಟಿನಲ್ಲಿ ಕೃಷಿ ಇಲಾಖೆಯಿಂದ ಸರ್ಕಾರದ ಸಹಾಯಧನದಲ್ಲಿ ಕೇಂದ್ರಗಳಲ್ಲಿ ಸಕಾಲದಲ್ಲಿ ಬೀಜ ವಿತರಿಸುತ್ತಿದ್ದೇವೆ. ಅದೇ ರೀತಿ ರಸಗೊಬ್ಬರವನ್ನು ಕೊಡುತ್ತಿದ್ದೇವೆ. ಬೀಜ-ಗೊಬ್ಬರದಲ್ಲಿ ಯಾವುದೇ ರೀತಿ ಕೊರತೆ ಇಲ್ಲ. ಸಾಕಷ್ಟು ಪ್ರಮಾಣದಲ್ಲಿ ಸಂಗ್ರಹಿಸಿ ಇಡಲಾಗಿದೆ. ಈಗಾಗಲೇ ಸಾವಿರ ಕ್ವಿಂಟಾಲ್ ಬೀಜವನ್ನು ರೈತರಿಗೆ ವಿತರಿಸಲಾಗಿದೆ. ಬಿತ್ತನೆಗೆ ರೈತರಿಗೆ ಅನುಕೂಲ ಕಲ್ಪಿಸಲು ಕೃಷಿ ಇಲಾಖೆ ಸರ್ವ ರೀತಿಯಲ್ಲೂ ಸನ್ನದ್ಧವಾಗಿದೆ” ಎಂದರು.
ಭೂಮಿ ಉಳುತ್ತಿರುವ ರೈತ-ಕಾಂಪ್ಲೇಕ್ಸ್ ಗೊಬ್ಬರ ಹೆಚ್ಚು ಬಳಸಿ:”ಕಳೆದ ವರ್ಷಗಳಿಂದ ರೈತರು ಅತೀ ಹೆಚ್ಚು ಯೂರಿಯಾ, ಡಿಎಪಿ ಗೊಬ್ಬರವನ್ನೆ ಬಳಸಿದ್ದರಿಂದ ಭೂಮಿಯಲ್ಲಿ ಪೋಟ್ಯಾಶ್ ಅಂಶದ ಕೊರತೆ ಉಂಟಾಗಿದೆ. ಹಾಗಾಗಿ, ಡಿಎಪಿ ಬದಲು ಕಾಂಪ್ಲೇಕ್ಸ್ ಗೊಬ್ಬರ ಹೆಚ್ಚು ಬಳಕೆ ಮಾಡುವಂತೆ ರೈತರಲ್ಲಿ ಜಾಗೃತಿ ಮೂಡಿಸುತ್ತಿದ್ದೇವೆ. ಕಾಂಪ್ಲೇಕ್ಸ್ ಗೊಬ್ಬರ ಬಳಕೆಯಿಂದ ಹೆಚ್ಚಿನ ಇಳುವರಿ ಬರುತ್ತದೆ. ಬೆಳೆಗಳಲ್ಲಿ ರೋಗ ನಿರೋಧಕ ಶಕ್ತಿ ಅಧಿಕವಾಗುತ್ತದೆ” ಎನ್ನುತ್ತಾರೆ ರೈತರು.
ಈ ವರ್ಷ 8 ದಿನ ಮೊದಲೇ ಬಿತ್ತನೆ:”ಮುಂಗಾರಿಗಿಂತ ಮೊದಲೇ ಒಳ್ಳೆಯ ರೀತಿಯಲ್ಲಿ ಮಳೆ ಆಗಿದೆ. ಬಿತ್ತನೆಗೆ ಇದು ಒಳ್ಳೆಯ ಸಮಯ. ಹಾಗಾಗಿ,10 ಎಕರೆಯಲ್ಲಿ ಮೆಕ್ಕೆಜೋಳ ಬಿತ್ತಲು ಕುಂಟಿ ಹೊಡೆಯುತ್ತಿದ್ದೇನೆ. ಕಳೆದ ವರ್ಷಕ್ಕಿಂತ 8 ದಿನ ಮೊದಲೇ ಈ ಸಲ ಬಿತ್ತನೆ ಆಗಲಿದೆ. ಎಲ್ಲರೂ ಟ್ರ್ಯಾಕ್ಟರ್ ಮೂಲಕ ಬಿತ್ತುತ್ತಿದ್ದಾರೆ. ಆದರೆ, ಅದರಿಂದ ವ್ಯವಸ್ಥಿತವಾಗಿ ಬಿತ್ತನೆ ಆಗುವುದಿಲ್ಲ. ಆದ್ದರಿಂದ ನಾವು ಎತ್ತುಗಳಿಂದಲೇ ಬಿತ್ತುತ್ತೇವೆ” ಎಂಬುದು ಬೈಲಹೊಂಗಲ ರೈತ ಸುರೇಶ ಮಾಳಗಿಮನಿ ಅಭಿಪ್ರಾಯ.
ಎಲ್ಲಾ ಟ್ರ್ಯಾಕ್ಟರ್ ಮೂಲಕವೇ ಬಿತ್ತನೆ: ಲಕ್ಷ್ಮೇಶ್ವರ ತಾಲ್ಲೂಕಿನ ಹರದಗಟ್ಟಿ ಗ್ರಾಮದ ರೈತ ಸೋಮ್ಲಪ್ಪ ನಾಯಕ ಮಾತನಾಡಿ, “ಒಳ್ಳೆಯ ಮಳೆ ಆಗಿದ್ದರಿಂದ ಈ ವರ್ಷ ಬಿತ್ತನೆ ಒಳ್ಳೆಯ ರೀತಿ ಆಗಲಿದೆ. ನಾನು 9 ಎಕರೆಯಲ್ಲಿ ಮೆಕ್ಕೆಜೋಳ ಬಿತ್ತಿದ್ದೇನೆ.1 ಎಕರೆಗೆ ಬೀಜ-ಗೊಬ್ಬರ, ಟ್ರ್ಯಾಕ್ಟರ್ ಬಾಡಿಗೆ ಸೇರಿ 10 ಸಾವಿರ ರೂ. ಖರ್ಚಾಗುತ್ತದೆ.ಕೂಲಿ ಆಳುಗಳ ಕೊರತೆಯಿಂದ ಎಲ್ಲಾ ಟ್ರ್ಯಾಕ್ಟರ್ ಮೂಲಕವೇ ಮಾಡುತ್ತೇವೆ.ಒಮ್ಮೆ ಎಡೆಕುಂಟೆ ಹೊಡೆಯಲು ಬಾಡಿಗೆ ಎತ್ತುಗಳನ್ನು ತೆಗೆದುಕೊಳ್ಳುತ್ತೇವೆ. ಒಬ್ಬರೇ ಕೃಷಿ ಮಾಡುವವರಿಗೆ ಎತ್ತುಗಳನ್ನು ಸಾಕಲು ಆಗುವುದಿಲ್ಲ.ಈ ವರ್ಷ ಅತೀ ಹೆಚ್ಚು ಮಳೆ ಆಗುವ ಸಾಧ್ಯತೆ ಇದೆ. ಎಂದು ಹೇಳಿದರು