ನಿನ್ನೆ ಕನ್ನಡ ರಾಜ್ಯೋತ್ಸವ ಪ್ರಯುಕ್ತ ಏರ್ಪಡಿಸಿದ್ದ ಕಾರ್ಯಕ್ರಮವೊಂದರಲ್ಲಿ ಹಿರಿಯ ರಾಜಕಾರಣಿ ಹಾಗೂ ಸಚಿವ ಎಚ್.ಕೆ.ಪಾಟೀಲ್ ತಮ್ಮ ಭಾಷಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಎನ್ನುವ ಬದಲಿಗೆ ಡಿ.ಕೆ ಎಂದು ಹೇಳಿ ಕ್ಷಣಮಾತ್ರದಲ್ಲೆ ಸರಿಪಡಿಸಿಕೊಂಡ ಘಟನೆ ನಡೆದಿದೆ.
ಕರ್ನಾಟಕದ ಕಾಂಗ್ರೆಸ್ ಆಡಳಿತದಲ್ಲಿ ಮುಖ್ಯಮಂತ್ರಿ ಸ್ಥಾನದ ಮೇಲೆ ಎಲ್ಲರ ಕಣ್ಣಿದೆ. ಕಾರಣ ಮುಡಾ ಹಗರಣ ಎದುರಿಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಿಎಂ ಕುರ್ಚಿ ಖಾಲಿಯಾಗುತ್ತೆ ಅನ್ನೋ ಬಿಸಿಬಿಸಿ ಚರ್ಚೆ ಪ್ರಚಲಿತದಲ್ಲಿದೆ. ಇದಕ್ಕೆ ಪುಷ್ಟಿಕರೀಸುವಂತೆ ಗದಗದಲ್ಲಿ ಸಚಿವ ಎಚ್ಕೆ ಪಾಟೀಲ್ (HK Patil) ಮುಖ್ಯಮಂತ್ರಿ ಹೆಸರನ್ನು ಹೇಳುವ ಸಂದರ್ಭದಲ್ಲಿ ಸಿದ್ದರಾಮಯ್ಯ ಬದಲಿಗೆ ಡಿ.ಕೆ ಶಿವಕುಮಾರ್ ಹೆಸರು ಪ್ರಸ್ತಾಪಿಸಿ, ಕ್ಷಣಮಾತ್ರದಲ್ಲೆ ಸರಿಪಡಿಸಿಕೊಂಡಿದ್ದಾರೆ.
ಮೈಸೂರು ರಾಜ್ಯಕ್ಕೆ ಕರ್ನಾಟಕ ನಾಮಕರಣದ ಐವತ್ತರ ಸಂಭ್ರಮಾಚರಣೆಯನ್ನು ಕಳೆದ ವರ್ಷ 2023ರ ನವಂಬರ್, 1,2,3 ರಂದು ಮೂರು ದಿನಗಳ ಕಾಲ ಗದಗ ನಗರದ ಸೊಸೈಟಿಯ ಆವರಣದಲ್ಲಿ ನಡೆದಿತ್ತು. ಗತವೈಭವ ಮರುಕಳಿಸುವ ಹಾಗೆ, ಐತಿಹಾಸಿಕ ಕಾರ್ಯಕ್ರಮಕ್ಕೆ ನಗರದ ಎಲ್ಲ ಜನತೆ ಸಾಕ್ಷಿಯಾಗಿದ್ದೀರಿ. ನಾಡಿನ ಮುಖ್ಯಮಂತ್ರಿಗಳಾದ ಡಿ.ಕೆ (ತಕ್ಷಣ ಎಚ್ಚೆತ್ತು ಭಾಷಣದ ಪ್ರತಿ ತೀಕ್ಷ್ಣವಾಗಿ ವೀಕ್ಷಿಸಿ) ಮಾನ್ಯ ಸಿದ್ಧರಾಮಯ್ಯನವರು, ಉಪಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ ಸೇರಿದಂತೆ, ಸಚಿವ ಸಂಪುಟದ ಎಲ್ಲ ಸಹೋದ್ಯೋಗಿಗಳು ಈ ಐತಿಹಾಸಿಕ ಸಮಾರಂಭದಲ್ಲಿ ಭಾಗವಹಿಸಿದ್ದರು ಎಂದು ಪ್ರಸ್ತಾಪಿಸಿ, ಮುಂದೆ ತಮ್ಮ ಭಾಷಣದ ಸಂದೇಶವನ್ನು ಮುಂದುವರಿಸಿದರು.