ಗದಗ: “ನರನಿಲ್ಲದೇ ಮರ ಇರಬಲ್ಲದು ಆದರೆ ಮರವಿಲ್ಲದೆ ನರನು ಇರಲಾರ”ಎನ್ನುವ ನುಡಿಯಂತೆ ನಮಗೆಲ್ಲ ಅತಿ ಅವಶ್ಯಕವಾಗಿ ಬೇಕಾಗಿರುವ ಆಮ್ಲಜನಕವನ್ನು ನಿಡುವಂತಹ ಗಿಡ ಮರಗಳನ್ನು ಹೆಚ್ಚು ಬೆಳೆಸುವ ಮೂಲಕ ಪರಿಸರವನ್ನ ಉಳಿಸಿ ಬೆಳೆಸೋಣ ಎಂದು ಚಿಕ್ಕಟ್ಟಿ ಸಂಸ್ಥೆಯ ಅಧ್ಯಕ್ಷರಾದ ಪ್ರೊ. ಎಸ್. ವಾಯ್. ಚಿಕ್ಕಟ್ಟಿಯವರು ಹೇಳಿದರು.
ಚಿಕ್ಕಟ್ಟಿ ಸಂಸ್ಥೆಯಲ್ಲಿ ಆಯೋಜಿಸಿದ್ದ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಅವರು ಮಾತನಾಡಿದರು,
ವಿಶ್ವ ಪರಿಸರ ದಿನಾಚರಣೆ ೧೯೭೩ರ ಜೂನ ೫ ರಿಂದ ೧೬ ರ ವರೆಗೆ ಸ್ವೀಡನ್ನಿನ ಸ್ಟಾಕ್ ಹೋಮ್‌ನಲ್ಲಿ ನಡೆದ ಮಾನವ ಪರಿಸರ ಸಮ್ಮೇಳನದಲ್ಲಿ ತೆಗೆದುಕೊಂಡ ನಿರ್ಣಯದಂತೆ ಈ ದಿನಾಚರಣೆಯನ್ನು ಆರಂಭಿಸಲಾಯಿತು. ಇದರ ಮುಖ್ಯ ಉದ್ದೇಶ ಜಾಗತಿಕವಾಗಿ ಪರಿಸರದ ಕುರಿತು ಜನರಲ್ಲಿ ಜಾಗೃತಿ ಮೂಡಿಸುವುದು ಹಾಗೂ ಪರಿಸರ ಸಂರಕ್ಷಣೆಗಾಗಿ ಸೂಕ್ತ ಕ್ರಮಗಳನ್ನು ಕೈಗೊಳ್ಳುವದಾಗಿದೆ. ಹಾಗೂ ಪ್ರಕೃತಿಯನ್ನು ನಮ್ಮ ಹಿರಿಯರು ನಮಗಾಗಿ ಬಿಟ್ಟು ಕೊಟ್ಟಿದ್ದಾರೆ ನಾವು ನಮ್ಮ ಮಕ್ಕಳ ಭವಿಷ್ಯಕ್ಕಾಗಿ ಪ್ರಕೃತಿಯನ್ನು ಉಳಿಸೋಣ ಸಂರಕ್ಷಣೆ ಮಾಡೋಣ ಎಂದು ಹೇಳಿದರು.
ವಿನಯ್ ಚಿಕ್ಕಟ್ಟಿ ಆಯ್.ಸಿ.ಎಸ್.ಇ. ಶಾಲೆಯ ೧೦ನೇ ತರಗತಿಯ ವಿದ್ಯಾರ್ಥಿನಿಯಾದ ಕುಮಾರಿ ಸೋನಲ್ ಹಂಜಗಿ ಹಾಗೂ ಬಿಪಿನ್ ಚಿಕ್ಕಟ್ಟಿ ಆಂಗ್ಲ ಮಾಧ್ಯಮ ಶಾಲೆಯ ೩ನೇ ತರಗತಿಯ ವಿದ್ಯಾರ್ಥಿನಿಯಾದ ಕುಮಾರಿ ಅನ್ವಿತಾ ವಿಶ್ವ ಪರಿಸರ ದಿನಾಚರಣೆಯ ಕುರಿತು ಮಾತನಾಡಿದರು. ಹಲವಾರು ವಿದ್ಯಾರ್ಥಿಗಳು ಸಸಿಗಳನ್ನು ತಂದು ಶಾಲಾ ಮೈದಾನದಲ್ಲಿ ನೆಡುವುದರೊಂದಿಗೆ ಈ ದಿನದ ಆಚರಣೆಗೆ ಮೆರಗು ತಂದರು. ಪ್ರೌಢ ಶಾಲಾ ವಿದ್ಯಾರ್ಥಿಗಳಿಗೆ ಪರಿಸರದ ಕುರಿತು ಚಿತ್ರಕಲಾ ಸ್ಪರ್ಧೆ ಏರ್ಪಡಿಸಲಾಯಿತು.
ಕನ್ನಡ ಉಪನ್ಯಾಸಕರಾದ ಶ್ರೀಶೈಲ ಬಡಿಗೇರ ವಿಶ್ವ ಪರಿಸರ ದಿನಾಚರಣೆಯ ಕುರಿತು ರಚಿಸಿದ ‘ನಾಡಿಗಿಂತ ಕಾಡೆ ಚೆನ್ನ’ ಎನ್ನುವ ಕವನವನ್ನು ವಾಚಿಸಿ ಕಾರ್ಯಕ್ರಮದ ನಿರೂಪಣೆ ಮಾಡಿದರು.
ಇದೆ ಸಂದರ್ಭದಲ್ಲಿ ಜೀ ಕನ್ನಡ ವಾರ್ತಾ ವಾಹಿನಿಯಿಂದ ೨೦೨೫ ನೇ ಸಾಲಿನ “ರಿಯಲ್ ಸ್ಟಾರ್ ಅವಾರ್ಡ” ಪಡೆದ ಶಾಲೆಯ ಸಂಸ್ಥಾಪಕ ಅಧ್ಯಕ್ಷರಾದ ಪ್ರೊ. ಎಸ್. ವಾಯ್. ಚಿಕ್ಕಟ್ಟಿಯವರಿಗೆ ಎಲ್ಲ ಶಿಕ್ಷಕ ಮತ್ತು ಶಿಕ್ಷಕೇತರ ವೃಂದದವರೆಲ್ಲರೂ ಸನ್ಮಾನದೊಂದಿಗೆ ಗೌರವಿಸಿದರು.
ಈ ಸಮಾರಂಭದಲ್ಲಿ ಉಪ ಪ್ರಾಚಾರ್ಯರಾದ ಶ್ರೀಮತಿ ಶೋಭಾ ಸ್ಥಾವರಮಠ, ಮುಖ್ಯೋಪಾಧ್ಯಾಯನಿಯರಾದ ಶ್ರೀಮತಿ ರಿಯಾನಾ ಮುಲ್ಲಾ ಆಂಗ್ಲ ಭಾಷೆಯ ಶಿಕ್ಷಕಿಯರಾದ ರಿಜಿನಾ ಎನ್. ಹಿಂದಿ ಭಾಷಾ ಶಿಕ್ಷಕರಾದ ಶ್ರೀ ಗಣೇಶ ಬಡ್ನಿ ದೈಹಿಕ ಶಿಕ್ಷಕರಾದ ಶ್ರೀ ಶರಣಪ್ಪ ಗುಗಲೊತ್ತರ, ದೈಹಿಕ ಶಿಕ್ಷಕರಾದ ಶ್ರೀ ಗುರುನಾಥ ಪೂಜಾರ ಹಾಗೂ ಎಲ್ಲ ಶಿಕ್ಷಕ ಮತ್ತು ಶಿಕ್ಷಕೇತರ ಸಿಬ್ಬಂದಿಯವರು ಉಪಸ್ಥಿತರಿದ್ದರು.