Home » News » ಕೊಪ್ಪಳದ ತಾವರಗೇರಾ ಗ್ರಾಮದಲ್ಲಿ ಭೀಕರ ಕೊಲೆ..!

ಕೊಪ್ಪಳದ ತಾವರಗೇರಾ ಗ್ರಾಮದಲ್ಲಿ ಭೀಕರ ಕೊಲೆ..!

by CityXPress
0 comments

ಕೊಪ್ಪಳ: ಆಸ್ತಿ ವಿವಾದದ ಹಿನ್ನೆಲೆಯಲ್ಲಿ ಏಳು ಜನರ ತಂಡವೊಂದು ವ್ಯಕ್ತಿಯನ್ನು ಬೇಕರಿಯಲ್ಲೇ ಭೀಕರವಾಗಿ ಕೊಚ್ಚಿ ಕೊಲೆ ಮಾಡಿದ ಘಟಬನೆ ಕೊಪ್ಪಳ ಜಿಲ್ಲೆಯಲ್ಲಿ ನಡೆದಿದೆ. ಕಳೆದ ಮೇ 31 (ಶನಿವಾರ) ರಂದೇ ಘಟನೆ ನಡೆದಿದ್ದು, ಏಳು ಜನರ ತಂಡ ಮಚ್ಚಿನಿಂದ ವ್ಯಕ್ತಿಯ ಮೇಲೆ ಹಲ್ಲೆ ಮಾಡಿ ಕೊಲೆ ಮಾಡುತ್ತಿರುವ ದೃಶ್ಯ, ಬೇಕರಿಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ಚನಪ್ಪ ನಾರಿನಾಳ ಎಂಬ ವ್ಯಕ್ತಿಯ ಕೊಲೆಯಾಗಿದ್ದು, ಆಸ್ತಿ ವಿವಾದದ ಹಿನ್ನೆಲೆಯಲ್ಲಿ ಕೊಲೆ ಮಾಡಲಾಗಿದೆ ಎಂದು ಪೊಲೀಸರ ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಈ ಘಟನೆ ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ತಾವರಗೇರಾ ಪಟ್ಟಣದಲ್ಲಿ ನಡೆದಿದೆ. ಎರಡು ಕುಟುಂಬಗಳ ನಡುವಿನ ಆಸ್ತಿ ವಿವಾದವೇ ಈ ಭೀಕರ ಕೊಲೆಗೆ ಕಾರಣ ಎಂದು ಹೇಳಲಾಗಿದೆ. ಇತ್ತೀಚಿಗೆ ರಾಜಧಾನಿ ಬೆಂಗಳೂರಿನಲ್ಲಿ ಬೆಟ್ಟಿಂಗ್ ಸಾಲ ತೀರಿಸಲು ಕೊಲೆ ಮಾಡಿದ್ದ ಘಟನೆಯನ್ನು ಇಲ್ಲಿ ಸ್ಮರಿಸಬಹುದು.

ತಾವರಗೇರಾ ಪಟ್ಟಣದಲ್ಲಿರುವ ಬೇಕರಿಯೊಂದಕ್ಕೆ ಬಂದಿದ್ದ ಚನ್ನಪ್ಪ ನಾರಿನಾಳ, ವ್ಯಾಪಾರ ಮಾಡುತ್ತಿದ್ದಾಗ ಏಕಾಏಕಿ ನುಗ್ಗಿದ ಏಳು ಜನರ ತಂಡ, ಆತನ ಮೇಲೆ ಮಚ್ಚಿನಿಂದ ಭೀಕರವಾಗಿ ಹಲ್ಲೆ ಮಾಡಿದೆ. ಪ್ರಾಣ ಉಳಿಸಿಕೊಳ್ಳಲು ಬೇಕರಿಯಿಂದ ಹೊರಗೆ ಓಡಲು ಪ್ರಯತ್ನಿಸಿದ ಚನ್ನಪ್ಪ ನಾರಿನಾಳನನ್ನು ಹಿಡಿದ ಈ ತಂಡ, ಮಚ್ಚು ಮತು ದೊಣ್ಣೆಗಳಿಂದ ಹಲ್ಲೆ ಮಾಡಿ ಕೊಲೆ ಮಾಡಿದೆ.

ಏಳು ಜನರ ತಂಡದ ಪೈಕಿ ಇಬ್ಬರು ಚನ್ನಪ್ಪ ನಾರಿನಾಳ ಮೇಲೆ ಮಚ್ಚಿನಿಂದ ಹಲ್ಲೆ ಮಾಡಿದರೆ, ಮತ್ತೋರ್ವ ಮರದ ದಿಮ್ಮಿಯಿಂದ ಆತನ ತಲೆಗೆ ಬಲವಾಗೊ ಹೊಡೆದ ದೃಶ್ಯಗಳು ಬೇಕರಿಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಭೀಕರ ದಾಳಿಗೆ ತುತ್ತಾದ ಚನ್ನಪ್ಪ ಬೇಕರಿಯಿಂದ ಹೊರ ಓಢುವಲ್ಲಿ ಯಶಸ್ವಿಯಾದರೂ, ಬೇಕರಿಯ ಹೊರಗೆ ನಿಂತಿದ್ದ ಇನ್ನೂ ಮೂವರು ವ್ಯಕಿಗಳು ಆತನಿಗೆ ಚಾಕುವಿನಿಂದ ಇರಿದಿದ್ದಾರೆ. ಈ ವೇಳೆ ಚನ್ನಪ್ಪ ನಾರಿನಾಳ ಪ್ರಾಣ ಬಿಟ್ಟಿದ್ದಾನೆ.

ಸದ್ಯ ಘಟನೆಗೆ ಸಂಬಂಧಿಸಿದಂತೆ ಏಳು ಜನರನ್ನು ಕೊಪ್ಪಳ ಜಿಲ್ಲಾ ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ರವಿ, ಪ್ರದೀಪ್, ಮಂಜುನಾಥ್‌, ನಾಗರಾಜ್, ಗೌತಮ್, ಮಂಜುನಾಥ್ ಮತ್ತು ಪ್ರಮೋದ್ ಎಂದು ಗುರುತಿಸಲಾಗಿದೆ. ಹಳೆಯ ದ್ವೇಷ ಮತ್ತು ಆಸ್ತಿ ವಿವಾದ ಕೊಲೆಗೆ ಕಾರಣವಾಗಿರಬಹುದು ಎಂದು ಪೊಲೀಸರ ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ರಾಜಧಾನಿ ಬೆಂಗಳೂರಿನಲ್ಲಿ ಕಳೆದ ಮೇ 21ರಂದು ಸೂಟ್ ಕೇಸ್ ನಲ್ಲಿ ಯುವತಿ ಮೃತದೇಹ ಪತ್ತೆಯಾಗದ ಘಟನೆಯನ್ನು ಇಲ್ಲಿ ಸ್ಮರಿಸಬಹುದು.

banner

ಪರಿಸ್ಥಿತಿಯನ್ನು ಅವಲೋಕಿಸಲು ಹಿರಿಯ ಪೊಲೀಸ್ ಅಧಿಕಾರಿಗಳು ಅಪರಾಧ ಸ್ಥಳಕ್ಕೆ ಭೇಟಿ ನೀಡಿದ್ದು, ಭಯಾನಕ ಘಟನೆಯಲ್ಲಿ ಭಾಗಿಯಾಗಿರುವ‌ ಇನ್ನೂ ಹೆಚ್ಚಿನ ಜನರನ್ನು ಬಂಧಿಸಲು ಪೊಲೀಸರು ಶೋಧ ಕಾರ್ಯ ಆರಂಭಿಸಿದ್ದಾರೆ. ಘಟನಾ ಸ್ಥಳಕ್ಕೆ ಕೊಪ್ಪಳ ಎಸ್‌ಪಿ ಡಾ. ಎಲ್.ಆರ್. ಅರಸಿದ್ವಿ, ಗಂಗಾವತಿ ಡಿಎಸ್ಪಿ ಸಿದ್ದಲಿಂಗಪ್ಪ ಗೌಡ, ಸಿಪಿಐ ಯಶವಂತ್ ಬಿಸನಹಳ್ಳಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಈ ಭೀಕರ ಕೊಲೆ ತಾವರಗೇರಾ ಗ್ರಾಮವನ್ನು ಅಕ್ಷರಶಃ ಬೆಚ್ಚಿ ಬೀಳಿಸಿದ್ದು, ಬೇಕರಿಯಲ್ಲೇ ಎಲ್ಲರ ಮುಂದೆಯೇ ಚನ್ನಪ್ಪ ನಾರಿನಾಳನನ್ನು ಕೊಚ್ಚಿ ಕೊಲೆ ಮಾಡಿದ್ದು ನಗರವಾಸಿಗಳಲ್ಲಿ ಆತಂಕ ಮೂಡಿಸಿದೆ. ಸದ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಏಳು ಜನರನ್ನು ಬಂಧಿಸಿರುವ ಪೊಲೀಸರು, ತನಿಖೆಯನ್ನು ಮುಂದುವರೆಸಿದ್ದಾರೆ ಎಂದು ಮೂಲಗಳು ಖಚಿತಪಡಿಸಿವೆ. ಇತ್ತೀಚಿಗೆ ರಾಜಧಾನಿ ಬೆಂಗಳೂರಿನಲ್ಲಿ ಕ್ಯಾಬ್ ಚಾಲಕನ ಭೀಕರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಆರೋಪಿಗಳನ್ನು ಪತ್ತೆಹಚ್ಚಿದ್ದನ್ನು ಇಲ್ಲಿ ಸ್ಮರಿಸಬಹುದು.

You may also like

Leave a Comment

Soledad is the Best Newspaper and Magazine WordPress Theme with tons of options and demos ready to import. This theme is perfect for blogs and excellent for online stores, news, magazine or review sites.

Buy Soledad now!

Edtior's Picks

Latest Articles

Website designed by Dreamweb
error: Content is protected by Dreamweb